ಅನಿವಾರ್ಯತೆ

ಮಾಯಾ ಆಟ - ದೇಹ ಬೆಳೆದಿದೆ, ಒಳಗಿನದ್ದು ಕಳೆದಿದೆ. ದಿನಗಳೆದಂತೆ ನನ್ನಿಂದ ನನ್ನನ್ನಾರೋ ದೂರ ಒಯ್ಯುತ್ತಿರುವರು. ಬಚ್ಚಿಡುತ್ತಿರುವರು. ನಾನೆಲ್ಲಿ? ಕಳೆದು ಹೋಗಿದ್ದೇನೆನ್ನುವುದೂ ಮರೆತು ಹೋಗುವಷ್ಟು ಬದುಕು ಸಹಜವಾಗಿಸಿರುವರು. ಇಲ್ಲೇ, ಓಹ್! ಈಗಷ್ಟೇ ಅದೋ ಇಲ್ಲೇ ಕಣ್ಣ ಮುಂದೆಯೇ ಮಿಂಚು ಹುಳುವಿನಂತೆ ಸುಳಿದು ಹೋಗುತ್ತಿದ್ದೇನೆ. ಈಗಷ್ಟೇ ಇಲ್ಲಿದ್ದವ ಹಾರಿ ಮೇಲೆ ಮೇಲೆ ಮಾಯವಾಗಿ ಹೋದೆ. ಅರೆ!   ಎಲ್ಲಿ ಹೋದೆ? ಇಲ್ಲೇ... ಇಲ್ಲೇ ಇದ್ದೆನಲ್ಲ... ನಾನೇ ಅದು? ಆಹ್! ನೆನಪುಗಳಿನ್ನೂ ಮಾಸಿಲ್ಲ. ಅಥವಾ ಇದೆಲ್ಲವೂ ಮಿಂಚು ಹುಳುವಿನ ಮಾಯಾ ಆಟವೇ? ಆದರೆ ಇಷ್ಟಕ್ಕೇ ತೃಪ್ತಿಯಿಲ್ಲ... ಬಚ್ಚಿಟ್ಟವರ ಕಣ್ತಪ್ಪಿಸಿ ನಾನೂ ಹಾರುವೆ.... ಹುಡುಕುವೆ... ಕಣ್ತಪ್ಪಿಸಿ? ಭಯವೇ? ಅಯ್ಯೋ ನನ್ನ ರೆಕ್ಕೆಗಳು?  ಕಟ್ಟಿರಲಿ, ಕಡಿದಿರಲಿ.  ಹಾರಲು ರೆಕ್ಕೆಯೇ ಇರಬೇಕೆಂದಿಲ್ಲ. ಹಾರಬೇಕೆನ್ನೋ ಇಚ್ಚೆಯಷ್ಟೆ... ಜಿಗಿಯುವೆ... ನೆಗೆಯುವೆ.... ನನ್ನನ್ನ ತಲುಪಿಯೇ ತಲುಪುವೆ......... ತಲುಪಲೇ ಬೇಕಿದೆ! 

No comments:

Post a Comment