About me

ನನ್ನನ್ನು ಒಂದು ಮಟ್ಟಿಗೆ ವರ್ಣಿಸುವ ಲೇಖನಗಳು - ''ಹೊರಟುಬಿಡು ಪ್ಲೀಸ್ '' ಹಾಗೂ "ಭಾವ ಭ್ರಮೆ".  ವಯಸ್ಸು ಮುವ್ವತ್ತರ ಆಸು ಪಾಸು. ಮನುಷ್ಯನಿಗೆ ಅಲ್ಪವಾದರೂ ಅಹಂಕಾರವಿರಬೇಕಿರುವ ವಯಸ್ಸೆನ್ನುವ  ನಂಬಿಕೆಗೆ ಬಂದು ತಲುಪಲು ಕಾರಣವುಂಟು -  ಅಹಂಕಾರದಲ್ಲೇ ಅತ್ಯುತ್ತಮವಾದ್ದನ್ನ ಸೃಜಿಸಲಿಕ್ಕೆ ಸಾಧ್ಯವೆನ್ನುವ ನಂಬಿಕೆ. 'A modest can rarely achieve' ಎನ್ನುವುದು ಜೀವನಾನುಭವದಿಂದ ಉಂಟಾದ ಭ್ರಮೆಯೂ ಇದ್ದಿರಬಹುದು. 

ಇಲ್ಲಿ ಎಲ್ಲವನ್ನು ತೆರೆದಿಡುವ ಪ್ರಯತ್ನದಲ್ಲಿ ನನ್ನ ಅಬಲತೆಯ ಅರಿವಾಗುತ್ತಾ ಸಾಗಿದೆ. ಅದಕ್ಕಾಗಿಯೇ ಇದನ್ನ ಉಳಿಸಿಯೇ ಇದ್ದೇನೆ. ನನ್ನ ಭ್ರಮಾ ಲೋಕದ ನಿರ್ಮಾಣದಲ್ಲಿ ತಮ್ಮ ಸಹಕಾರವಿಲ್ಲದಿದ್ದಲ್ಲಿ ಹೇಗೆ? 

 ''ಏಯ್ ಡೆಡ್'' - ಎಂದು ನನ್ನನ್ನ ಹೀಯಾಳಿಸುವ ಯಾವುದೋ  ಸರಪಳಿಯೊಂದು  ಈ ಬ್ಲಾಗಿನ ಬರೆವಣಿಗೆಗಳಿಗೆ ಕೆಲವೊಮ್ಮೆ ಜೀವನೀಡಿದ್ದುಂಟು. ನನ್ನೊಳಗಿನ ಆ ಪುಟ್ಟ ಕಿಟ್ಟಿ ನನ್ನನ್ನಿನ್ನೂ ನಗಿಸುತ್ತಲೇ ಇದ್ದಾನೆ. ನಗಿಸುತ್ತಲೇ ಇರುತ್ತಾನೆ.