ಬೀಚಿ - ಸ್ಪೀಚಿ

ನನ್ನ ಭಯಾಗ್ರಫಿಯಿಂದ ಹೆಕ್ಕಿದ ಮಾತುಗಳು (ಟಿಪ್ಪಣಿಗಳೂ ಎನಬಹುದು)


"ನನ್ನದು ಲವ್ ಮ್ಯಾರೇಜ್ ಅಲ್ಲ. ಮ್ಯಾರೇಜ್ ಲವ್. ಲವ್ ಮಾಡಿದ್ದು ಮದುವೆಯನ್ನ. ಹುಡುಗಿಯನ್ನಲ್ಲ." 

"ಅರ್ಧ ಸತ್ಯವನ್ನ ಹೇಳಿದರೆ, ಅರ್ಧ ಸುಳ್ಳು ಹೇಳಿದಂತೆ. ಬೆತ್ತಲು ನಿಲ್ಲಲು ನಿರ್ಧರಿಸಿದವನಿಗೆ ಲಂಗೋಟಿಯ ಮೋಹ ಏಕೆ?"

"ಈ ಲೋಕದಲ್ಲಿ‌ ದೇವರಿಲ್ಲ ಎಂದಾಗ ಇರಲಿಕ್ಕಿಲ್ಲ ಎಂದೆನ್ನುತ್ತೇನೆ. ಆದರೆ ದಯೆ ಎಂಬುದೇ ಇಲ್ಲದಾಗ ಅವರನ್ನು ಕಂಡು ಅಯ್ಯೋ, ಪಾಪಿ ಎನ್ನುತ್ತೇನೆ. ಅವರು ನಿಜವಾಗಿಯೂ ದುರ್ದೈವಿ"

"ಹುಟ್ಟಿದುದಕ್ಕಾಗಿ ಬದುಕಿರಬೇಕೆಂಬಾಶೆ. ಬದುಕುವುದಕ್ಕಾಗಿ ಉದ್ಯೋಗ, ಉದ್ಯೋಗಕ್ಕಾಗಿ ಓದು"

******

Contradiction of ಬೀಚಿ:

P. 99-"ನನಗೆ ಇದ್ದಕ್ಕಿದ್ಸಂತೆ ಪಿತ್ಥ ನೆತ್ತಿಗೇರಿತು. ನನ್ನ ತಂಗಿಯ ಬಗ್ಗೆ ನನ್ನ ತಂದೆಯೇ ಇದೇ‌ ಮಾತನ್ನಾಡಿದ್ದರೆ  ಬಡಿಗೆಯಿಂದ ಆ ತಕ್ಷಣ ಅವನ ತಲೆಯನ್ನೊಡೆಯುತ್ತಿದ್ದೆ‌. ಹೆಂಣು ಅಂದರೆ ಅದೇನು ಕೊಂಡುತಂದು ಮಾರಲು ಅಂಗಡಿಯಲ್ಲಿಟ್ಟ ಮಾಲೇ?"

P. 112-"ಅವಳಿಗೂ ಅಭಿಪ್ರಾಯವೆಂಬುದೊಂದಿದೆ ಎಂದು ನಾನು ತಿಳಿದೇ ಇರಲಿಲ್ಲ. ಸಿಗರೇಟು ಪ್ಯಾಕು, ಬೀರ್ ಬಾಟಲಿನಂತೆ ಅದೂ ಒಂದು ಭೋಗವಸ್ತು ನನಗಾಗ"

*****


"ಅತಿಥಿ ಬರುವುದು ಚೆಂದ, ಹೋಗುವುದು ಬಹು ಚೆಂದ ಅಲ್ಲವೇ?"

"ಅವರವರ ಭಕ್ತಿ, ಅರ್ಥಾತ್ ದಡ್ಡತನ ಅವರವರದ್ದು"

"ಅಪ್ರಾಮಾಣಿಕತೆ ಇಂದು ನೆನ್ನೆಯದಲ್ಲ. ಮಾನವ ಚರಿತ್ರೆಯಲ್ಲಿ ಅದು ವ್ಯಭಿಚಾರದಂತೆ ಬಹು ಹಳತು. ಹಣದೊಂದಿಗೇ ಲಂಚ ಹುಟ್ಟಿತು. ಹೆಂಣು, ಗಂಡು ಹುಟ್ಟಿದೊಡನೆ ವ್ಯಭಿಚಾರ ಹುಟ್ಟಿತು"

"ಲಂಚ ಪಡೆಯುವದರಲ್ಲಂತೂ ಜಾತೀಯತೆಗೆ ಆಸ್ಪದವೇ ಇಲ್ಲವಲ್ಲಾ? ಲಂಚ‌ ದೇವರಿದ್ದಂತೆ- ಅವರದು ಸರ್ವಸಮನ್ವಯ ದೃಷ್ಟಿ. ಇದು ಜಾತಿಭೆದವನ್ನು ತೊಡೆದು ಹಾಕುವುದರಲ್ಲಿ ಸಮರ್ಥವಾಗಿದ್ದಿತು"

(ಸ್ವಯಂ ಸಿದ್ಧಾಂತದ ಸಮಜಾಯಿಷಿಯಲ್ಲಿ) "ಮನುಷ್ಯನ ಮನಸ್ಸೇ ಹೀಗೆ - ಮೊದಲು ಊರನ್ನು ಮುಟ್ಟಿತ್ತದೆ, ಅನಂತರ ಈ ಊರಿಗೆ ತನಗೆ ಬೇಕಾದ ದಾರಿಯನ್ನೇ ಹುಡುಕಲು ಹೊರಡುತ್ತದೆ" 

"ಗಂಡ ಹೆಂಡತಿಯನ್ನು ಹೆಚ್ಚು ಹೆಚ್ಚು ಪ್ರೀತಿಸಿದಷ್ಟೂ ಹೆಂಡತಿಗೆ ಹೆಚ್ಚು ಸುಳ್ಳುಗಳನ್ನು ಹೇಳುತ್ತಾನೆ"

"ಮುದುಕನಿಗೆ ಆಸರವಾಗಿ ಒಂದು ಕೋಲು ಬೇಕು. ಪಾಪಿಗೂ ಆಸರವಾಗಿ ಒಂದು ಕೋಲಬೇಕು. ಪಾಪಿಗೆ ಒಂದು ದೇವರು ಬೇಕು. ಹೌದು ದೇವನಿಲ್ಲದ ಪಾಪಿ ಕೈಕೋಲಿಲ್ಲದ ಮುದುಕನಂತೆ. ಪಾಪಿ ಅಲ್ಲದವನಿಗೆ ದೇವನಿಲ್ಲ. ಮುದುಕನಲ್ಲದವನಿಗೆ ಕೋಲು ಇಲ್ಲ."

"ಗುಣವಾಗಬಲ್ಲ ಹುಚ್ಚನ್ನು ಮಾತ್ರ ಹುಚ್ಚು ಅನ್ನುತ್ತೇವೆ. ಗುಣವಾಗಲಾರದ ಹುಚ್ಚನ್ನು ಜಾತ್ಯಾಭಿಮಾನ, ಭಾಷಾಭಿಮಾನ ದೈವಭಕ್ತಿ, ಮುಂತಾದ ಶಬ್ದಗಳಿಂದ ಕರೆದು ಆತ್ಮ ವಂಚನೆ ಮಾಡಿಕೊಳ್ಳುವುದು ಮಾನವನ ಒಂದು ವಿಶಿಷ್ಟವಾದ ಹುಚ್ಚು. ಅದಕ್ಕೆ ಯಾರಲ್ಲಿದೆ ಔಷಧಿ?"

"ನನ್ನ ದೃಷ್ಟಿಯಲ್ಲಿ ದಾನ ಮಾಡುವುದು ತಪ್ಪು. ಆ ದಾನದಿಂದ ಸ್ವೀಕರಿಸುವವನನ್ನು ಸೋಮಾರಿಯನ್ನಾಗಿ ಮಾಡುತ್ತೇವೆ. ಅಲ್ಲದೇ ಅವನಲ್ಲಿ ಕೀಳರಿಮೆ ಹುಟ್ಟಿಸುತ್ತೇವೆ. ಪುಣ್ಯ ಬರುತ್ತದೆ, ಪಾಪ ಬರುತ್ತದೆ ಎಂಬ ಶಬ್ದಗಳಿಗಂತೂ ಅರ್ಥವೇ ಇಲ್ಲ. ವಿದ್ಯಾರ್ಥಿ, ಅವನಿಗೆ ವಿದ್ಯಾರ್ಜನೆಗೆ ಕೆಲವು ಅನುಕೂಲ ಜೀವಿಯ ಕರ್ತವ್ಯ."

" ಹೆಂಡತಿಗೆ ಹೆಚ್ಚು ಸುಳ್ಳು ಹೇಳಿದಷ್ಟು ಹೆಚ್ಚು ಪ್ರೀತಿ ಮಾಡಿದಂತೆ"

"ಒಂದು ಗ್ಲಾಸ್ ಬೀರು ಕುಡಿದು ಯಾರು ಸತ್ತಿಲ್ಲ, ಆದರೆ ಒಂದೇ ಗ್ಲಾಸು ಬೀರಿಗೆ ಯಾರು ನಿಲ್ಲಿಸಿಲ್ಲ" ರಾಜಗೋಪಾಲಾಚಾರಿ

" ನಗುವ ಹಕ್ಕು ಕೇವಲ ಜಾಣರಿಗಷ್ಟೇ ಇಲ್ಲ- ಹುಚ್ಚರೆ ಹೆಚ್ಚಿ ನಗುತ್ತಾರೆ"

"ಒಂದು ಹೆಣ್ಣಿನ ಹಣದ ಅಡಚಣೆಯ ಲಾಭ ಪಡೆದು ತೃಷೆಯನ್ನು ತೀರಿಸಿಕೊಳ್ಳುವುದು ಮಾನವತೆಗೇ ಅಪಮಾನ" (ಕುಡಿತದ ಕಥೆ - p. 149)

"ಸರಕಾರ ಎಲ್ಲರದೂ ಹೌದು ಅಂದಾಗ, ಅದು ಯಾರದೂ ಅಲ್ಲ ಎಂಬುದು ನಮ್ಮ ಜನರ ಭಾವನೆ. ಈ ಭಾವನೆ ಕೇವಲ ಅಂದಿನದಲ್ಲ, ಇಂದಿಗೂ ಹೌದು. ಪ್ರಾಯಶಃ ನಾಳೆಗೂ ಹೌದು. ಸರಕಾರಕ್ಕೆ ನಷ್ಟವಾದರೆ ಅಳುವವರಾರು? ಸರಕಾರ ಎಂಬುದು ಒಂದು ಬೇವರ್ಸಿ ಹೆಣ" (ಕುಡಿತದ ಕಥೆ - p. 152)







No comments:

Post a Comment