ಹೀಗೆ ಆಲೋಚಿಸುತ್ತಾ ನನ್ನಲ್ಲೇ ಉಂಟಾದ ದ್ವಂದ್ವಗಳಗಳ ನಡುವಿನ ಹೋರಾಟವನ್ನ ಮುಕ್ತವಾಗಿ ಇಟ್ಟಿದ್ದೇನೆ. ಇದರಲ್ಲಿ ಯಾವುದೇ ಪೂರ್ವಾಗ್ರಹವಿಲ್ಲ, ಹಾಗೂ ಯಾರನ್ನೂ ಯಾವುದನ್ನೂ ದೂಷಿಸುವ ಉದ್ದೇಶವೂ ಇಲ್ಲ. ನನ್ನೊಳಗೇ ಉಂಟಾದ ದ್ವಂದದ ಹೋರಾಟದ ಫಲ ಇದು. ಒಳಗಿಡಲು ಸಾಧ್ಯವಿಲ್ಲದೆ ಹೊರಗೆ ತಂದಿರುವ, ಎಲ್ಲವೂ ಸರಿಯೆ, ಎಲ್ಲವೂ ತಪ್ಪೆ ಎನ್ನುವ ದ್ವಂದ್ವದ ಫಲವಿದು. ಇದನ್ನು ಬರೆಯುವಾಗಲೂ ನಾನು ಯಾವುದಕ್ಕೂ ಯಾವ ಸಮರ್ಥನೆಯನ್ನು ಕೊಡಲಾಗದ ಮಂಪರಿನ ಸ್ಥಿತಿಯಲ್ಲಿದ್ದಂತೆಯೇ ಭಾಸವಾಗುತ್ತಿದ್ದದ್ದು ಅಥವಾ ಅಷ್ಟು ಆಲೋಚಿಸುವಷ್ಟು ಶಕ್ತಿ ನನ್ನಲ್ಲಿಲ್ಲದಿದ್ದಿರಬಹುದು. ಬರೆದ ಮೇಲೆ ಇದನ್ನು ಓದುವ ತಾಳ್ಮೆ ಒಂದಷ್ಟೂ ಉಳಿದಿರಲಿಲ್ಲ. ಕೆಲವೊಂದು ದ್ದಂದ್ವ ಆಳೋಚನೆಗಳೇ ಹಾಗೇನೋ, ಓದಿದಷ್ಟೂ ಅಸ್ಪಷ್ಟವಾಗುತ್ತಾ ಹೋಗೋದು. ಈ ಎಲ್ಲಾ ಸ್ವಗತ ಒಬ್ಬ ವ್ಯಕ್ತಿಯಲ್ಲಿಯೇ ಆತನ ಆಲೋಚನೆಗಳನ್ನೇ ಆತ ಧಿಕ್ಕರಿಸೋದು, ಅಥವಾ ವಾದಗಳಲ್ಲಿ ತನ್ನ ಅಭಿಪ್ರಾಯಗಳ ದಿಕ್ಕನ್ನೇ ಬದಲಿಸಿಕೊಳ್ಳೋದು, ಆ ಕ್ಷಣಕ್ಕೆ ಎದುರಿನವನ ವಾದವನ್ನ ಒಪ್ಪಿ, ಮುಂದೆಲ್ಲೋ ಅದನ್ನೇ ವಿರೋಧಿಸೋದು, ಈ ರೀತಿಯಾದವುಗಳನ್ನು ಕಾಣಬೋದೇನೋ! ಮುಕ್ತವಾದ ಭಾವನೆಗಳಿವು. ಈ ಮುನ್ನುಡಿಯೂ ಸಹ ಒಂದು ವಿಪರ್ಯಾಸವೆಂದೇ ತೋರುತ್ತದೆ ಈ ಕಥಾವಸ್ತುವಿಗೆ.]
Thursday, April 20, 2017
ಶೀರ್ಷಿಕೆಯಿಲ್ಲದ್ದು -2
‘ಗುಡ್ ಗುಡ್ ಗುಡಕ್...
ಗುಡ್ ಗುಡ್ ಗುಡಕ್..’ ಆಗಸ ಕೂಗಿತು. ಆಟದ ಆರಂಭಕ್ಕೆ ಸೂಚನೆ ಸಿಕ್ಕಿತೆಂದು ಗಾಳಿಯು ‘ಸುಂಯ್.....’ ಎಂದು ಎದ್ದಿತು. ಗಾಳಿಯ ಸೆಳೆತಕ್ಕೆ ಸಿಕ್ಕು ಮರಗಳು
ಆಚೀಚೆಗೆ ಓಲಾಡಿದವು. ರೋಡಿನ ಕಸ, ಧೂಳುಗಳೆಲ್ಲ ಗಾಳಿಯ ರಭಸಕ್ಕೆ ಎದ್ದು ಹೋಗ ಬರುವವರನ್ನೆಲ್ಲಾ
ಪ್ರಕೃತಿಯ ಆ ಆಟಕ್ಕೆ ಅಡಚಣೆಯೆಂದು ಬಡಿದು ಬದಿಗೆ ಓಡಿಸಿದವು. ಸುಂಟರವೋ ಏನೋ ಎನ್ನುವಷ್ಟು
ರೋಷಮಯದಿಂದ ಮಣ್ಣು, ಕಸಗಳು ಭುರ್ರೆಂದು ಎದ್ದು ಮುಂದೊಂದು ಲೋಕವಿದೆ ಎನ್ನುವುದನ್ನೆ
ಮುಚ್ಚಿಟ್ಟು ತಮ್ಮ ಪ್ರತಾಪವನ್ನು ನೆನಪಿಸಿ ಮೆರೆದವು. ಕೆಲವರ ಹಾಕಿದ ಸೀರೆಯ ಸೆರಗನ್ನು, ಕೆಲವರ ಮೇಲ್ಬಟ್ಟೆಯ ತುಂಡನ್ನು, ಕೆಲವರ ಪಂಚೆಯನ್ನು ಆಪೋಷನ ತೆಗೆದುಕೊಳ್ಳಲು ಯತ್ನಿಸಿದವು.
ಇಷ್ಟಿದ್ದರು ಆ ಕಸ ಧೂಳುಗಳಿಗೆ ಆಗಸದ ರೆಪ್ಪೆಯನ್ನು ತಾಕಿ ಕಣ್ಣೊಳಗಿಳಿದು ನೀರಿಳಿಸಲು ಆಗಲೇ
ಇಲ್ಲ. ಬರೆ ವ್ಯರ್ಥ ಪ್ರತಾಪವನ್ನು ತೋರುತ್ತಾ ಜನರ
Subscribe to:
Posts (Atom)