Thursday, April 20, 2017

ಶೀರ್ಷಿಕೆಯಿಲ್ಲದ್ದು - ೧


ಹೀಗೆ ಆಲೋಚಿಸುತ್ತಾ ನನ್ನಲ್ಲೇ ಉಂಟಾದ ದ್ವಂದ್ವಗಳಗಳ ನಡುವಿನ ಹೋರಾಟವನ್ನ ಮುಕ್ತವಾಗಿ ಇಟ್ಟಿದ್ದೇನೆ. ಇದರಲ್ಲಿ ಯಾವುದೇ ಪೂರ್ವಾಗ್ರಹವಿಲ್ಲ, ಹಾಗೂ ಯಾರನ್ನೂ ಯಾವುದನ್ನೂ ದೂಷಿಸುವ ಉದ್ದೇಶವೂ ಇಲ್ಲ. ನನ್ನೊಳಗೇ ಉಂಟಾದ ದ್ವಂದದ ಹೋರಾಟದ ಫಲ ಇದು. ಒಳಗಿಡಲು ಸಾಧ್ಯವಿಲ್ಲದೆ ಹೊರಗೆ ತಂದಿರುವ, ಎಲ್ಲವೂ ಸರಿಯೆ, ಎಲ್ಲವೂ ತಪ್ಪೆ ಎನ್ನುವ ದ್ವಂದ್ವದ ಫಲವಿದು. ಇದನ್ನು ಬರೆಯುವಾಗಲೂ ನಾನು ಯಾವುದಕ್ಕೂ ಯಾವ ಸಮರ್ಥನೆಯನ್ನು ಕೊಡಲಾಗದ ಮಂಪರಿನ ಸ್ಥಿತಿಯಲ್ಲಿದ್ದಂತೆಯೇ ಭಾಸವಾಗುತ್ತಿದ್ದದ್ದು ಅಥವಾ ಅಷ್ಟು ಆಲೋಚಿಸುವಷ್ಟು ಶಕ್ತಿ ನನ್ನಲ್ಲಿಲ್ಲದಿದ್ದಿರಬಹುದು. ಬರೆದ ಮೇಲೆ ಇದನ್ನು ಓದುವ ತಾಳ್ಮೆ ಒಂದಷ್ಟೂ ಉಳಿದಿರಲಿಲ್ಲ. ಕೆಲವೊಂದು ದ್ದಂದ್ವ ಆಳೋಚನೆಗಳೇ ಹಾಗೇನೋ,  ಓದಿದಷ್ಟೂ ಅಸ್ಪಷ್ಟವಾಗುತ್ತಾ ಹೋಗೋದು. ಈ ಎಲ್ಲಾ ಸ್ವಗತ ಒಬ್ಬ ವ್ಯಕ್ತಿಯಲ್ಲಿಯೇ ಆತನ ಆಲೋಚನೆಗಳನ್ನೇ ಆತ ಧಿಕ್ಕರಿಸೋದು, ಅಥವಾ ವಾದಗಳಲ್ಲಿ ತನ್ನ ಅಭಿಪ್ರಾಯಗಳ ದಿಕ್ಕನ್ನೇ ಬದಲಿಸಿಕೊಳ್ಳೋದು, ಆ ಕ್ಷಣಕ್ಕೆ ಎದುರಿನವನ ವಾದವನ್ನ ಒಪ್ಪಿ, ಮುಂದೆಲ್ಲೋ ಅದನ್ನೇ ವಿರೋಧಿಸೋದು, ಈ ರೀತಿಯಾದವುಗಳನ್ನು ಕಾಣಬೋದೇನೋ!  ಮುಕ್ತವಾದ ಭಾವನೆಗಳಿವು. ಈ ಮುನ್ನುಡಿಯೂ ಸಹ ಒಂದು ವಿಪರ್ಯಾಸವೆಂದೇ ತೋರುತ್ತದೆ ಈ ಕಥಾವಸ್ತುವಿಗೆ.]


              

***************


“ಬರೆಯೋದಕ್ಕೆ ಅನುಭವವೇ ಸ್ಪೂರ್ತಿಯಾಗ್ತದೆ ಹೊರತು ನಿನ್ನ ಹುರಿದುಂಬಿಸೋ ಮಾತುಗಳಲ್ಲ!..”

“ಇದು ಒಪ್ಪೋ ಹಾಗಿಲ್ಲ. ಅದೆಷ್ಟೋ ಅನುಭವಗಳಿಗೆ, ಮನಸೆಂಬೋ ಚಿಪ್ಪಿನ ಹೊರಗೊಂದು ಲೋಕವಿದೇ ಅನ್ನೋದೇ ಸಾದೃಶವಾಗಿರೋದಿಲ್ಲ. ಮತ್ತೆಷ್ಟೋ ಅನುಭವಗಳಿಗೆ ಹೊರಗೆ ಬರೋ ವಿಧಾನವೇ ತಿಳಿದಿರೋದಿಲ್ಲ. ನನ್ನ ಮಾತುಗಳು ಆ ಅನುಭವಗಳಿಗೇ ಹೊಸಾ ಅನುಭವವನ್ನ ನೀಡಬಹುದೆನ್ನೋ ಭರವಸೆಯಷ್ಟೆ. ಅದಕ್ಕೆ ಬರವಣಿಗೆಯೇ ಏಕೆ ಅನ್ನೋ ಪ್ರಶ್ನೆ ಹಾಕಿದೆ ಅನ್ಕೋ, ಅದಕ್ಕೆ ನೀನೆ ಉತ್ತರಿಸಿಕೊಳ್ಬೋದು. ಬರವಣಿಗೆ ಅನ್ನೋದು ಬಹಳ ವಿಭಿನ್ನವಾದ ಮಾಧ್ಯಮ. ನಿನ್ನ ಆಲೋಚನೆಗಳೆಲ್ಲಾ ಎಂದಿಗೂ ಏರಿಳತದ ಹಾದಿಯಲ್ಲೇ ಸಾಗ್ತಿರ್ತವೆ. ನಿನ್ನ ಅನುಭವಗಳಿಗೆಲ್ಲಾ ಒಂದು ರೂಪರೇಷುಗಳನ್ನ ಕೊಟ್ಟು, ಅವುಗಳನ್ನೆಲ್ಲಾ ನಿನ್ನ ಆಲೋಚನಾ ಲಹರಿಯು ಅನುವು ಮಾಡಿದ ಕ್ರಮದಲ್ಲಿ ಹೆಣೆದು, ಹಲವೆಡೆ ಅದನ್ನೇ ತಿದ್ದಿ ತೀಡಿ ಆ ಕ್ರಮವನ್ನೇ ಬದಲಿಸಿ, ಕೊನೆಗೆ ಸರಿಯೆನಿಸಿದ ಹಾದಿಯನ್ನಿಡಿದಿದ್ದೇನೆಂದನಿಸಿದಾಗ ನನ್ನೊಳಗಿನ ಭಾವಗಳಿಗೆ ತದ್ರೂಪಗಳನ್ನ ಸೃಷ್ಟಿಸಿದ್ದೇನೆನ್ನುವ ತೃಪ್ತಿಯಿದೆಯಲ್ಲಾ, ಅದನ್ನು ಅನುಭವಿಸಿದ ಹೊರತು ಹೇಳಲಾಗದು”

“ನಮ್ಮಿಬ್ಬರದು ವಾದವೆಂದು ನನಗನ್ನಿಸ್ತಿಲ್ಲ. ನೀನು ಬರವಣಿಗೆಯ ಅನುಭವಗಳನ್ನ ಹಂಚಿಕೊಳ್ಳುತ್ತಿರುವೆ. ಮತ್ತೊಬ್ಬರಿಗೆ ನೀವು ಬರೆಯಬೋದು, ನಿಮ್ಲಲ್ಲೂ ಆ ಸಾಮರ್ಥ್ಯವಿದೆ ಎನ್ನುವುದನ್ನ ನೆನಪಿಸ್ತಾನೋ, ಅಥವಾ ಮತ್ತಲವರಿಗೆ ಅವರ ಅನುಭವಗಳನ್ನೂ ಹಂಚಿಕೊಳ್ಳೊದಿಕ್ಕೆ ವೇದಿಕೆಯನ್ನ ಸೃಷ್ಟಿಸಬೋದು. ಅವರವರ ಅನುಭವಗಳನ್ನ ಅವರವರ ಮಾತುಗಳಲ್ಲೇ ಅರಿತು ನಾವೂ ಹೊಸ ಅನುಭವಗಳನ್ನ ಪಡೀಬೋದು ಅಂತ ಹೇಳ್ತಿದ್ದಿ. ನೀ ಹೇಳೊದೆಲ್ಲಾ - ಬರೆಯೋದಕ್ಕೆ ಬರೋದಿಲ್ಲ, ಬರೆಯಲೂಬೋದು ಅಂತ ತಿಳಿದರ‍್ಲಿಲ್ಲ ಅನ್ನೋರಿಗೆ ಹೇಳ್ತಿರೋದಾಗತ್ತೆ. ಆದರೆ ಮತ್ತಷ್ಟೂ ಅನುಭವಗಳಿರ್ತಾವೆ. ಅವುಗಳಿಗೆ ನೀ ಹೇಳೋ ಚಿಪ್ಪಿನಿಂದ ಹೊರಗೆ ಬರಲಿಕ್ಕೆ ಮನಸಿರೋದಿಲ್ಲ. ನಾ ಮಾತಾಡ್ತಿರೋದು ಅವುಗಳ ಬಗ್ಗೆ. ನಾನು ಅವುಗಳಿಗೆ ಹುರುದಿಂಬಿಸೋದು ಒಂದು ಅನುಪಯುಕ್ತ ಕೆಲಸ ಹಾಗೂ ವಿಪರ್ಯಾಸ ಅಂತ ತರ‍್ತದೆ ನನಗೆ. ಇದೇ ನಮ್ಮಿಬ್ಬರ ವಾದಗಳ ಹಾದಿ ತಪ್ಪಿಸ್ತಾ ಇರೋದು. ಪ್ರತಿಯೊಬ್ಬನೂ ತನ್ನ ಅನಿಸಿಕೆಗಳಿಗೆ, ಭಾವನೆಗಳಿಗೆ ರೂಪವನ್ನ ಕೊಡಬೇಕು ಅಂತ ಅನ್ನಿಸ್ದಾಗ, ತನಗೆ ಕೊಡಬೋದು ಅಂತ ಅನ್ನಿಸ್ದಾಗ, ಅದಕ್ಕೆ ಸಾಕಷ್ಟು ಸಮಯ ಸಿಕ್ಕಿದಾಗ ಅವಾ ಬರೆದೇ ಬರೀತಾನೆ. ಮೊದಲಿಗೆ ನನ್ನ ಭಾವನೆಗಳಿಗೆ ನಾನು ರೂಪವನ್ನ ಕೊಡಬೇಕು ಅಂತ ಅನ್ನಿಸ್ಬೇಕು. ಹಾಗೆ ಅನ್ನಿಸೋದು ಆ ಅನುಭವ/ವಿಚಾರ/ಭಾವನೆಯಿಂದಲೇ! ಹಲವಾರು ಅನುಭವಗಳು ಹುಟ್ಟಿದಾಗಲೇ ಯಾವ ಆಸಕ್ತಿಯನ್ನು ಉಳಿಸಿಕೊಳ್ಳದೇ ಮೌನವಾಗುವುದೆಡೆಗೇ ಹೊರಳಿರುತ್ತವೇ! ಆ ರೀತಿಯÀ ವಿಚಾರವು/ಭಾವನೆಯು ಆಸಕ್ತಿದಾಯವಾಗಿ ಕಾಣಿಸೋದಿಲ್ಲಾ ಅಥವಾ ಕಾಣಿಸಿಕೊಳ್ಳೋ ಅಷ್ಟು ಆಸಕ್ತಿದಾಯಕವಾಗಿದೆ ಅಂತ ಅನ್ನಿಸೋದಿಲ್ಲ. ಅನ್ನಿಸದೇ ಇರೋದು ನನ್ನಲ್ಲಿರೋ ಊನವಲ್ಲವೋ! ಆ ರೀತಿಯವರಿಗೆ ಬರಿಬೇಕು ಅಂತ ಅನ್ನಿಸೋ ಹಾಗೆ ಮಾಡ್ತಿದ್ದೇನೆ ಅಂದರೆ ಅವರ ಭಾವನೆಗಳ ಮಹತ್ವವನ್ನ ಅವರಿಗೇ ತಿಳಿಸ್ಬೇಕೆ ಹೊರತು ಬರವಣಿಗೆಯ ಉಪಯೋಗದ ಕುರಿತು ಹೇಳಿ, ತಾವೂ ಬರೀಬೋದು ಬರೆಯಿರಿ ಅಂತ ಹುರಿದುಂಬಿಸೋದು ವಿಪರ್ಯಾಸ ಅಂತ ತರ‍್ತದೆ ನನಗೆ. ಮತ್ತೊಬ್ಬರ ಭಾವನೆಗಳನ್ನ ಆಸಕ್ತಿದಾಯವಾಗಿಸೋದು ಒಂದು ಅನುಪಯುಕ್ತ ಕೆಲಸವೇ! ಹಾಗಾಗಿ ಆ ರೀತಿಯವರಿಗೆ ಬರೆಯಿರಿ ಅಂತ ಹೇಳೋದೇ ಅನುಪಯುಕ್ತ!”

“ನಿನ್ನ ವಾದದಲ್ಲೇ ನನಗೆ ಹುಳುಕು ಕಾಣಿಸ್ತಿದೆ. ನೀ ಹೇಳೋ ಪ್ರಕಾರ ನಾ ಪ್ರತಿಯೊಬ್ರನ್ನು ಕೇಳ್ತಾ ಕರ‍್ಲಿಕ್ಕೆ ಆಗ್ತದೇನೋ ನಿಮಗೆ ಬರೀಲಿಕ್ಕೆ ಆಸಕ್ತಿಯಿದ್ಯೆ, ನಿಮಗಿಲ್ವೇ ಅಂತ? ಒಂದಷ್ಟು ಬಾರಿ ಹೇಳ್ತೇವೆ. ಕೇಳ್ಕೋತೇವೆ. ಬರೀಲಿಲ್ಲ ಅಂದ್ರೆ ಬಿಡ್ತೇವೆ. ಅವರಿಗೆ ಬರೀಲಿಕ್ಕೆ ಆಸಕ್ತಿ ಇಲ್ಲೇನೋ ಅಂತ. ಪ್ರತಿಯೊಬ್ಬರೂ ಬರೀಲಿಕ್ಕೆ ಒಂದು ವೇದಿಕೆಯನ್ನ ಸೃಷ್ಟಿಸೋದು, ಅವರು ಬರಿಯೋ ಹಾಗೆ ಪ್ರೋತ್ಸಾಹಿಸೋದು, ಹುರಿದುಂಬಿಸೋದಷ್ಟೆ...............”

“ನಾ ಇನ್ನೂ ಮುಗಿಸರ‍್ಲಿಲ್ಲ... ಬರೀಬೇಕು ಅಂತ ಅನ್ನಿಸಿದ್ಮೇಲೆ, ನಾನೂ ಬರೀಬಲ್ಲೇ ಅನ್ನೋ ವಿಶ್ವಾಸ ಬರಬೇಕು ಅಂತ ನಾನೇ ಹೇಳಿದಾಗ ಅದ್ರಲ್ಲೇ ನನಗೆ ಒಂದು ವಿಪರ್ಯಾಸ ಕಾಣಿಸ್ತಿದೆ. ಅಕಸ್ಮಾತ್ ನನಗೆ ಬರೀಲಿಕ್ಕೆ ರ‍್ತಿಲ್ಲ, ಹೇಗೆ ಬರೆಯೋದು ತಿಳಿತಿಲ್ಲ ಅಂತ ನಾನು ಆಲೋಚಿಸ್ತಿದ್ರೆ, ನನ್ನ ಚಿಂತೆಯೆಲ್ಲಾ ನನಗನ್ನಿಸ್ತಿರೋದನ್ನ ನಾ ಹೊರಗೆ ಹಾಕೋದು ಹೇಗೆ ಅನ್ನೋದರ ಬಗ್ಗೆ ಹೊರತು, ಹೊರಗೆ ಹಾಕಲೇ ಬೇಕು ಅನ್ನೋದರ ಮೇಲೆ ಅಲ್ಲ. ಅದೊಂದು ಸ್ವಾಭಾವಿಕವಾದ ಪ್ರಕ್ರಿಯೇ ಹೊರತು ಅನ್ಯರಿಂದ ದೂಡಿಸಿಕೊಂಡು ಹೊರಹುಮ್ಮುವ ಪ್ರಕ್ರಿಯೆಯಲ್ಲ. ಅದು ತಾನಾಗೆ ರ‍್ತದೆ. ನೀನೊಂದು ವೇದಿಕೆ ಸೃಷ್ಟಿಸಿದ್ದೀಯೆನ್ನುವದಕ್ಕೋಸ್ಕರ ಹುಟ್ಟುವಂಥ ಭಾವವಲ್ಲ ಅದು. ಆ ಭಾವಕ್ಕೆ ನಿನ್ನದೊಂದು ವೇದಿಕೆಯಷ್ಟೆ. ಬರವಣಿಗೆಗೆ ಇಂಥದೇ ಚೌಕಟ್ಟಿಲ್ಲ. ಬರವಣಿಗೆ ಈ ಎಲ್ಲಾ ಅಂಶಗಳನ್ನ ಒಳಗೊಂಡಿರ್ಬೇಕು ಅಂತ ಕಟ್ಟುಪಾಡುಗಳನ್ನ ಹಾಕಲಿಕ್ಕೆ ಬರೋದು ಇಲ್ಲ. ನನ್ನ ಬರವಣಿಗೆ ಆಸಕ್ತಿದಾಯಕವಲ್ಲ ಅಂತ ಎಷ್ಟೇ ಜನರಿಗೆ ಅನ್ನಿಸಿದರೂ, ಆ ಬರವಣಿಗೆ ನನ್ನ ಭಾವನೆಗಳ/ವಿಚಾರಗಳ ತದ್ರೂಪಗಳಾಗಿದ್ದ ಪಕ್ಷದಲ್ಲಿ, ನನ್ನ ಬರವಣಿಗೆಯ ಮೇಲಿನ ಅಭಿಪ್ರಾಯ ನಿಜವಾಗಿಯೂ ನನ್ನ ವಿಚಾರಗಳ ಮೇಲಾಗಿರುತ್ತವೆ. ಆದರೆ ಹಲವಾರು ಬರವಣಿಗೆಗಳು ಮೂಡುವುದು ಒಂದು ವೇದಿಕೆಯಿದೆಯೆಂದೋ ಅಥವಾ ಕೋರಿಕೆಯ ಮೇರೆಗೊ! ವೇದಿಕೆ ಸೃಷ್ಟಿಸುವುದರಿಂದಲೇ ನಾವು ಒಮ್ಮೊಮ್ಮೆ ಬಲವಂತವಾಗಿ ನಮ್ಮಲ್ಲಿ ಭಾವನೆಗಳನ್ನು ಮೂಡಿಸಿಕೊಂಡುಬಿಡುತ್ತೇವೆಯೇ ಎಂದೆನ್ನಿಸ್ತದೆ!”

“ಇಲ್ಲ. ಬರವಣಿಗೆಯಲ್ಲಿ ಕೆಲವು ಅಂಶಗಳನ್ನ ತಲೆಯಲ್ಲಿರಿಸದರೆ ಅದೇ ವಿಚಾರಗಳಿಗೆ ಮತ್ತೊಂದು ಆಸಕ್ತಿದಾಯಕವಾದ ರೂಪವನ್ನು ನೀಡಬಹುದು. ಹಾಗಂದ್ರೆ ವೇದಿಕೆಯನ್ನೇ ಸೃಷ್ಟಿಸ್ಬಾರದೆಂತಲೋ?”

“ಆಸಕ್ತಿದಾಯವಾಗಿಸೋದಕ್ಕೋಸ್ಕರ ಬರೆಯೋದಲ್ಲ. ನನಗನ್ನಿಸಿದ್ದನ್ನ ಅನ್ನಿಸಿದ ರೀತಿ ರೂಪ ಕೊಡ್ತಾ ಹೋದ್ರೆ ಸಾಕು ಅನ್ನಿಸ್ತದೆ. ಅದು ಆಸಕ್ತಿದಾಯಕವಾಗಿದೆಯೋ ಇಲ್ಲವೋ ಅನ್ನೋ ಪ್ರಶ್ನೆ ಬಂದಾಗಲೇ ನಾನು ಬರೀಬಾರ್ದು ಅಂತ ಹಲವರು ನಿರ್ಧರಿಸೋದು. ಬg ೆಯೋದು ಹೇಗೇಗಿರಬೇಕು ಅಂತ ತಿಳಿಸ್ತಾ ಹೋದಷ್ಟೂ ನಾವು ಬರೆಯೋದನ್ನಷ್ಟೇ ಪ್ರೋತ್ಸಾಹಿಸ್ತಾ ಇದ್ದೇವೆ ಅಂದ್ರೆ ತಪ್ಪಾಗ್ತದೆ. ಹಲವರಿಗೆ ಇದು ಬರೆಯೋದನ್ನ ನಿಲ್ಲಿಸ್ಲಿಕ್ಕೂ ದಾರಿಯಾಗಬೋದು - ಬರವಣಿಗೆ ಅನ್ನೋದಕ್ಕೂ ಚೌಕಟ್ಟಿದೆಯೇನೋ ಎನ್ನುವ ಭಾವನೆಯನ್ನ ಮೂಡಿಸ್ತಾ ಹಾಗೆಯೇ ನನಗೆ ಏನೇ ಮಾಡಿದ್ರೂ ಈ ರೀತಿ ಬರೀಲಿಕ್ಕೆ ಸಾಧ್ಯವಿಲ್ಲ ಅನ್ನೋ ನಿರ್ಧಾರಕ್ಕೆ ಅವರನ್ನ ತರ್ತಾ. ಬರೀಬೇಕು ಅನ್ನಿಸ್ದಾಗ ಬರೀತಾರೋ! ನನ್ನ ಕೇಳಿದ್ರೆ ವೇದಿಕೆಯನ್ನ ಸೃಷ್ಟಿಸಬಾರದು. ಒಂದು ಬರವಣಿಗೆ ಅದರ ವೇದಿಕೆಯನ್ನ ಅದೇ ಸೃಷ್ಟಿಸ್ಕೊಳ್ತದೆ, ಹುಡಿಕಿಕೊಳ್ಬೇಕು ಅಂತ ಅನ್ನಿಸಿದ್ರೆ!”

“ಅದೇ ಸೃಷ್ಟಿಸಿಕೊಂಡ್ರು ಅದೂ ಒಂದು ವೇದಿಕೆಯಲ್ವೇ! ಬರವಣಿಗೆಗಳಿಂದಲೇ ಈ ವೇದಿಕೆಯೂ ಸೃಷ್ಟಿಯಾದದ್ದು. ಇದು ಬರವಣಿಗೆಗೋಸ್ಕರ ಅಲ್ಲ. ಇದು ನಡೆಯುತ್ತಿರುವುದು ಬರವಣಿಗೆಗಳಿಂದಲೇ!”

“ಇಲ್ಲ! ನನಗೆ ಹಾಗೆ ತೋರುತ್ತಿಲ್ಲ. ಬರವಣಿಗೆಗಳಿಂದಲೇ ಈ ವೇದಿಕೆ ಸೃಷ್ಟಿಯಾದದ್ದಲ್ಲಿ ನೀ ಯಾರನ್ನೂ ಹುರಿದುಂಬಿಸುವ, ಯಾರನ್ನೂ ಕೋರುವ ಅಗತ್ಯವಿಲ್ಲ. ನಿನ್ನ ವೇದಿಕೆಯಲ್ಲಿ ಎಂದಿಗೂ ನಾಟಕ ಪ್ರದರ್ಶನ ನಡೆಯಲೇಬೇಕೆಂದಿಲ್ಲ. ಹಾಗೆಯೇ ಇಷ್ಟೇ ನಾಟಕಗಳು ನಡೆಯಬೇಕೆಂದಿಲ್ಲ. ನಾಟಕ ನಡೆಸುವ ಹಾಗೆ ನೀ ಪ್ರೋತ್ಸಾಹಿಸುವುದೂ ಬೇಡ. ನಡೆಯಬೇಕಾದ ನಾಟಕ ನಡೆದೇ ನಡೆಯತ್ತೆ!”

“ಹಾಗೆಯೇ ನಡೆದೊಂದು ನಾಟಕವನ್ನ ನೋಡಿ ಮತ್ತಷ್ಟು ಜನಕ್ಕೆ ಅನ್ನಿಸ್ಬೋದಲ್ಲ ಹೀಗೂ ಮಾಡಬೋದು, ಇದನ್ನೂ ಮಾಡಬೋದು ಅಂತ”

“ಅಲ್ಲೇ ನಿನ್ನ ವಾದದ ಹುಳುಕಿರೋದು! ಹೀಗೂ ಬರೀಬೋದು, ಇದನ್ನೂ ಬರೀಬೋದು ಅಂತ ಅನ್ನಿಸ್ಕೋತಾ ಹೋದಷ್ಟು ಅದೆಲ್ಲಾ ಬಲವಂತದಿAದ ಮೂಡುವ ಆಲೋಚನೆಗಳಷ್ಟೇ! ನಿನ್ನ ಒಂದು ಅನುಭವಕ್ಕೆ ನೀನು ತದ್ರೂಪವನ್ನು ನೀಡಬೇಕೆನ್ನಿಸುವವರೆಗೂ ಅದಕ್ಕಿಂತ ಬರೀಲಿಕ್ಕೆ ಮೂಲ ಸ್ಫೂರ್ತಿ, ದಾರಿ ಮತ್ತೊಂದಿಲ್ಲ. ಒಂದAಥೂ ನಿಜ! ಈ ರೀತಿಯ ವೇದಿಕೆಗಳಿಂದ ನಮ್ಮ ಆಲೋಚನೆಗಳು ಬದಲಾಗುವುದಂಥೂ ನಿಜ. ಅದನ್ನಂತೂ ಒಪ್ಪುವೆ. ಆದರೆ ಇದು ಬರವಣಿಗೆಗಳ, ಇದಕ್ಕಾಗಿ ಮೂಡಿಸಿಕೊಂಡ ಆಲೋಚನೆಗಳ ವೇದಿಕೆಯಾಗಬಾರದು ಬದಲಾಗಿ ಸ್ವಾಭವಿಕವಾಗಿ ಹೊರಹೊಮ್ಮುವ ಭಾವನೆಗಳಿಂದಾದ ವೇದಿಕೆಯಾಗಬೇಕಷ್ಟೇ”.

“ನೀನು ದ್ಡಂದ್ಡಗಳ ಆಗರ! ನೀ ಹೇಳುವುದೆಲ್ಲಾ ನನಗೆ ಸರಿಯಲ್ಲೆಂದೇ ತೋರುತ್ತದೆ. ಇಷ್ಟೆಲ್ಲಾ ಕ್ಲಿಷ್ಟತೆ ಬೇಕಿರಲಿಲ್ಲೆಂದು ತರ‍್ತದೆ. ಬರೆಯೋರಿಗೆ ಇದೊಂದು ವೇದಿಕೆ. ಒಂದು ವಿಷಯದ ಬಗ್ಗೆ, ಅಥವಾ ತಮ್ಮ ಭಾವನೆಗಳನ್ನ ಇತರೊಂದಿಗೆ ಹಂಚಿಕೊಳ್ಳಲು ಇರುವ ಒಂದು ತಾಣ. ಅಷ್ಟೇ! ಇದಕ್ಕಾಗಿ ಇಷ್ಟೆಲ್ಲಾ ದ್ದಂದ್ವ, ಅಸ್ಪಷ್ಟ ವಾದಗಳ ಅವಶ್ಯಕತೆ ಇದ್ದದ್ದಿರಲಿಲ್ಲವೆಂದು ತರ‍್ತದೆ. ನೀನು ಹೇಳಿದ್ದರಲ್ಲಿ ಯಾವುದರಲ್ಲಿಯೂ, ಎಲ್ಲಿಯೂ ನಿನಗೇ ಸ್ಪಷ್ಟವಾದ ಸಮರ್ಥನೆ ಇಲ್ಲ. ಬರೆಯಬೇಕು ಅನ್ನೋರಿಗೆ ಇಲ್ಲೊಂದು ಅವಕಾಶ ಅಷ್ಟೇ!”

“ಏನೋ.......”



No comments:

Post a Comment