Wednesday, January 16, 2019

ವ್ಯಾಮೋಹ

 

ನಾರೀಸ್ತನಭರನಾಭೀದೇಶಾಂ

ದೃಷ್ಟ್ವಾ ಮಾ ಗಾ ಮೋಹಾವೇಶಾಂ|

ಏತನ್ಮಾಂಸವಸಾದಿವಿಕಾರಮ್ 

ಮನಸಿ ವಿಚಿಂತಯ ವಾರಮ್ ವಾರಂ||

“ಫಗ್..” ಬೆಂಕಿ ಕಡ್ಡಿಯನ್ನು ಗೀರಿದ ಸದ್ದು ಯಶೋದೆಯ ಅಂತರಾಳದಲ್ಲಿ ಪ್ರತಿಧ್ವನಿಸಿತು. ಯಾವುದೋ ಅರ್ಥವಿಲ್ಲದ, ಪರಿಚಯವಿಲ್ಲದ, ಆ ಸದ್ದಿಗೆ ಸಂಬಂಧಿಸಿದ್ದ ಘಟನಾವಳಿಯೊಂದು ಕ್ಷಣಮಾತ್ರದಲ್ಲಿ ಮನಸ್ಸಲ್ಲಿ ಜರುಗಿ ಹೋದಂತೆ ಭಾಸವಾಗಿ ಯಶೋದೆ ಉರಿಯುತ್ತದ್ದ ಕಡ್ಡಿಯನ್ನ ಕೈಯಲ್ಲೇ ಹಿಡಿದು ನಿಂತಿದ್ದಳು. ‘ಊ...ಫ್...ಹಾ..” ಕೈ ಸುಟ್ಟ ಭರದಲ್ಲಿ ಯಶೋದೆ ಉದ್ಗರಿಸಿ ಕೈಯನ್ನು ಒಂದಷ್ಟು ಬಾರಿ ಗಾಳಿಯಲ್ಲಿ ಕೊಡವಿ ಮತ್ತೊಂದು ಬೆಂಕಿ ಕಡ್ಡಿಯನ್ನು ಗೀರಿದಳು – ‘ಫಗ್..” ‘ಜೀವನದಲ್ಲಿ ಕೆಲವೊಂದಷ್ಟು ಹಾಗೆಯೇ! ಉರಿದು ಸುಟ್ಟರೂ, ಅದನ್ನು ಊದಿ, ಆರಿಸಿ, ಕೊಡವಿ ಮತ್ತೊಂದನ್ನು ಹೊತ್ತಿಸಬಹುದು. ಆದರೆ ನೆನಪಿರಲಿ ಎರಡನೆಯದ್ದೂ ಸಹ ಸುಡುವುದೇ! ಇದು ಮುಗುಯುವುದು ಎಂದು? ಹಾಂ! ಹೌದು.. ಹೌದು.. ಮತ್ತೆ ಹೊತ್ತಿಸಲು ಆಗದಹಾಗೆ ಸುಟ್ಟು ಕರಕಲಾದಾಗ.! ಇದು ತಿಳಿದೂ ತಿಳಿದೂ.. ಛೇ!’ ಯಶೋದೆಯ ಬೆರಳು ಮತ್ತೊಮ್ಮೆ ಸುಟ್ಟತು! ದೀಪವನ್ನು ಹೊತ್ತಿಸಲು ಗೀರಿದ ಕಡ್ಡಿಗಳು ಕೈ ಸುಟ್ಟವು!


ಯಶೋದೆಯ ಬದುಕಿನಲ್ಲಿ ಮತ್ತೊಂದು ಕಡ್ಡಿಯನ್ನ ಅವಳಿಗರಿವಿಲ್ಲದ ಹಾಗೆಯೇ ಅವಳು ಗೀರಲಾರಂಭಿಸಿದ್ದಳೇ? ಅದಾಗಲೇ ಉರಿಯುತ್ತಿದ್ದ ದೀಪವನ್ನುರಿಸಲೇಕೆ ಗೀರುವುದು? ಹಾಗಿದ್ದರೆ ಮತ್ತೊಂದು ದೀಪ ಅವಳಿಗರಿವಿಲ್ಲದ ಹಾಗೆಯೇ ಅವಳ ಜೀವನವನ್ನು ಪ್ರವೇಶಿಸಿತ್ತೆ? ಈ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಿಕೊಳ್ಳಲು ಯಶೋದೆಗೇ ಭಯ! ಅವಳ ಎದುರಿಗಷ್ಟೇ ಅಲ್ಲ, ಅವಳ ಮನಸ್ಸಿನಲ್ಲಿಯೂ ಹತ್ತಿ ಉರಿಯುತ್ತಿತ್ತು ಆ ಮೊದಲು ಹಚ್ಚಿದ ದೀಪ. ಈಕೆ ಹೋದಲ್ಲೆಲ್ಲಾ ಇವಳ ಮನದೊಳಗೆ ಇವಳೊಟ್ಟಿಗೇ ಇರುತ್ತಿದ್ದ ಅದು, ಇನ್ನೊಂದು ದೀಪದ ಪ್ರವೇಶವನ್ನೇನಾದರೂ ಕಂಡು ಂiÀiಶೋದೆಯ ಮನಸ್ಸಲ್ಲಿ ತನ್ನ ಕಾಯಕ ಮುಗಿಯಿತೆಂದು ಭಾವಿಸಿ ಆರುವ ಮುನ್ನ ಧಗ ಧಗನೆ ಉರಿದು ಮನಸ್ಸನ್ನೆಲ್ಲಾ ಸುಟ್ಟುಬಿಟ್ಟರೆ ಎನ್ನುವ ಭಯವೇನೋ! ಆದರೂ ಮತ್ತೊಂದು ಕಡ್ಡಿ ಗೀರಲು ಯಶೋದೆಯ ಮನಸ್ಸು ಅವಳಿಗರಿವಿಲ್ಲದಹಾಗೆಯೇ ಮುಂದಾಗಿತ್ತು.


ಆ ರಾತ್ರಿ! ಅದೇ ಯಶೋದೆ ರಘುನಾಥನನ್ನು ಅವನ ಊರಿನ ವರೆಗೂ ಬಿಟ್ಟು ಬರಲು ಆತನೊಟ್ಟಿಗೆ ಬಸ್ ಹತ್ತುವ ಧೈರ್ಯ ಮಾಡಿದ್ದಳಲ್ಲ ಆ ರಾತ್ರಿ. ಬಸ್ ಹೊರಟು, ಒಂದಷ್ಟು ದೂರ ಕ್ರಮಿಸಿ ಕಾಡ ಹಾದಿಯನ್ನು ಹಿಡಿದಾಗ ಹೊರಗಿಂದ ಬೆಳಕು ಬಿಡಲು ಇದ್ದವರಾದರೂ ಯಾರು ಅಲ್ಲಿ? ಬಸ್ಸಿನ ಲೈಟ್ ಸಂಪೂರ್ಣ ಆರಿದಾಗ, ಸುತ್ತ ಮುತ್ತ ಯಾರೂ ಇಲ್ಲದಿದ್ದಾಗ, ಇವರಿಬ್ಬರ ಮನಸ್ಸುಗಳು ಹೊತ್ತಿಕೊಳ್ಳದಿರುವಂತೆ ತಡಯಲು ಯಾವ ಸೃಷ್ಟಿಕರ್ತನಿಂದಲೂ ಸಾಧ್ಯವಿರಲಿಲ್ಲ. ಅಲ್ಲಿಯವರೆಗೂ ಯಶೋದೆ ರಘುನಾಥನಿಗಾಗಿ ಹಪಹಪಿಸಿದ್ದೆಷ್ಟೋ! ಆ ರಾತ್ರಿ, ಆ ರೀತಿಯ ಒಂದು ರಾತ್ರಿ, ರಘುನಾಥನ ಉಸಿರು ತನಗೆ ತಾಕುವಷ್ಟು ಸನಿಹ ಆಕೆ ರಘುನಾಥನನ್ನ ಕನಸ್ಸಿನಲ್ಲಿಯೂ ಸಹ ಹತ್ತಿರಕ್ಕೆ ಸುಳಿಯಬಿಟ್ಟಿರಲಿಲ್ಲವೇನೋ! ಇಬ್ಬರ ಬಿಸಿಯುಸಿರುಗಳು ಒಂದಕ್ಕೊAದು ತಾಗಿ, ತಬ್ಬಿ, ಒಂದಾಗಿ ಗಾಳಿಯಲ್ಲಿ ಲೀನವಾದಾಗ ಇಬ್ಬರ ಮೈ ನಡುಗಿತ್ತು. ಅಲ್ಲಿ ಉಸಿರೇ ಮಾತು! ದೇಹದಿಂದ ಹೊರಗುರುಳುತ್ತಿದ್ದ ಬಿಸಿಯುಸಿರು ಒಂದೊAದು ಬಯಕೆಯನ್ನು ಹೊತ್ತೊಯ್ದು ಎದುರಿನವರ ದೇಹದೊಳಕ್ಕೆ ತೂರಿ ಅಲ್ಲಿಯೂ ಅದೇ ಬಯಕೆಯನ್ನು ಬಿತ್ತಲೆತ್ನಿಸಿತ್ತು.


ಅಲ್ಲಿಯವರೆಗೂ ಯಶೋದೆಯಾಗಲೀ ರಘುವಾಗಲೀ ಇಬ್ಬರೂ ಇಷ್ಟ ಪಟ್ಟು ತಾಕಿದ್ದಿರಲಿಲ್ಲ. ಒಮ್ಮೆ ಹೀಗೆಯೇ ಎಲ್ಲಿಗೋ ಕಾರಲ್ಲಿ ಹೋಗುವಾಗ ಯಶೋದೆ ರಘೂನಾಥನ ತಲೆಯ ಮೇಲೆ ಪ್ರೀತಿಯಿಂದ ಬೆರಳುಗಳನ್ನು ನೇವರಿಸಿದಾಗ ಡ್ರೆöÊವರ್ ನೋಡಿಬಿಟ್ಟಾನೆಂದು ರಘೂ ಕಣ್ಣಲ್ಲೇ ಗುಡುಗಿದ್ದ. ಅದಾದ ಮೇಲೆ ಯಶೋದೆಗೂ ಭಯವೇ! ಆದರೆ ಅಂದು ಆ ರಾತ್ರಿ, ಭಯ, ಮುಜುಗರ, ನಾಚಿಕೆಗಳೆನ್ನುವ ಮನಃವಸ್ತçಗಳನ್ನಿಬ್ಬರೂ ಬಿಚ್ಚಿಟ್ಟು ಮುಕ್ತರಾಗಿದ್ದರು. ರಘುವಿನ ಕೈ ಯಶೋದೆಯ ಸೊಂಟವನ್ನು ಹಿಂದಿನಿAದ ಬಳಸಿಬಂದು ಹೊಕ್ಕಳನ್ನು ಅದುಮಿದಾಗ, ಯಶೋದೆಯ ರೋಮಗಳೆಲ್ಲಾ ಎದ್ದು ನಿಂತು ರಘುವಿನ ಪುರುಷತ್ವಕ್ಕೆ ಮೆಚ್ಚಿ ಗೌರವವನ್ನು ಸೂಚಿಸಿದವು. ಯಶೋದೆ ತುಟಿಯನ್ನು ಕಚ್ಚಿ, ಕಣ್ಣು ಮುಚ್ಚಿ ರಘುವಿನ ಎದೆಗೆ ಚಕ್ಕನೆ ಮುಖವನ್ನು ಒರಗಿಸಿದಳು! ರಘುನಾಥ ಆಕೆಯ ಗಲ್ಲವನ್ನು ಮೇಲೆತ್ತಿ ಅವಳ ಮುಖದ ಕಡೆಗೇ ದಿಟ್ಟಿಸುವ ಹಾಗೆ ದಿಟ್ಟಿಸಿ ಪೋಲಿ ನಗೆ ಬೀರಿದ್ದು ಆ ಕತ್ತಲಲ್ಲಿ ಯಶೋದೆಯ ಅರಿವಿಗೆ ಬರಲೇ ಇಲ್ಲ. ಆ ಕಾಡಿನ ತಿರುವುಗಳು ಮುಗಿಯಲೇ ಬಾರದೆಂದು ಇಬ್ಬರಿಗೂ ಅನ್ನಿಸಿತ್ತಲ್ಲವೇ! ಇಬ್ಬರ ಮೈಗಳನ್ನೂ ತಾಕಿಸಲೆಂದೇ ಬಸ್ ಉಪಾಯ ಹೂಡಿದಾಗಿತ್ತು. ಪ್ರತೀ ತಿರುವಿನಲ್ಲಿಯೂ, ಯಾಶೋದೆ ರಘುವಿನ ಮೇಲೆಯೋ ಅಥವಾ ರಘು ಯಶೋದೆಯ ಮೇಲೆಯೋ ಬೇಕೆಂದಲೇ ಬೀಳುವ ತುಂಟಾಟಗಳು ಇಬ್ಬರನ್ನೂ ನಗಿಸಿದ್ದವು. ಯಶೋದೆ ರಘುವಿನ ಎದೆಗೆ ಒರಗಿ, ಆತನ ಹಸ್ತವನ್ನ ಹಿಡಿದು ಅದಕ್ಕೊಂದು ಮುತ್ತು ಕೊಟ್ಟು – ‘ರಘೂ.. ಇದೇನೋ ನನಗೆ ತಿಳಿಯದು. ಆದರೆ ಈ ಕ್ಷಣದ ಬಯಕೆ ಏನು ಗೊತ್ತಾ? ನೀನಲ್ಲದೆ ಈ ಜೀವಕ್ಕೆ ಯಾವ ಜನ್ಮದಲ್ಲೂ ಯಾರೂ ಸಹ ಬೇಡ! ಈ ರಾತ್ರಿಯೇ, ಈ ಕತ್ತಲ ಮೌನವೇ ಇದಕ್ಕೆ ಸಾಕ್ಷಿ’ ಎಂದು ಕಿವಿಯಲ್ಲಿ ಗಾಳಿಯನ್ನು ಊದುತ್ತಾ ಪಿಸುಗುಟ್ಟಿದ್ದು ರಘುನಾಥನಿಗೆ ಕಿವಿಗೆ ಕಚಗುಳಿಯನಿಟ್ಟಂತಿತ್ತು! ಆಕೆಯ ಮುತ್ತಿನ ಮತ್ತು ರಘುವನ್ನ ಮತ್ತಷ್ಟು ಪೋಲಿಯಾಗಿಸಿ ಆತನ ಕೈಯನ್ನು ಹೊಕ್ಕಳಿಂದ ಮೇಲ್ಭಾಗಕ್ಕೆ ಸರಿಸಿತ್ತು! ‘ಆಹ್! ಎನ್ನುವ ಯಶೋದೆಯ ಉದ್ಗಾರಕ್ಕೆ ಕತ್ತಲೆಯೇ ನಾಚಿ ಕಣ್ಣು ಮುಚ್ಚಿತು. ಇಡೀ ವಿಶ್ವದ ಯಾವುದೋ ಒಂದು ಯಃಕಶ್ಚಿತ್ ಮೂಲೆಯಾದ ಭೂಮಿಯೆಂಬ ಗ್ರಹದ ಮೇಲಿನ ಯಃಕಶ್ಚಿತ್ ತುಟಿಗಳೆರಡರ ಅಣು ಅಣುಗಳು ನಲಿ-ನಲಿ- ನಲಿದು ಕುಣಿ-ಕುಣಿದಾಡಿದವು. ಇಡೀ ವಿಶ್ವಕ್ಕೆ ಬಾಗಿಲೊಂದನ್ನು ಮುಚ್ಚಿದ, ಕಣ್ಣು ಮುಚ್ಚಿ ಕಿವಿ ತೆರೆದಿದ್ದ ಆ ರಾತ್ರಿಯ ಕತ್ತಲೆಯೇ ಎಲ್ಲಕ್ಕೂ ಸಾಕ್ಷಿ!


ಆ ದಿನಕ್ಕೇ ಸೂರ್ಯನ ಆಯಸ್ಸು ಮುಗಿದು ಇನ್ನೆಂದಿಗೂ ಆತ ಏಳಲಾರದಂತಾಗಲೀ ಎಂದು ಇಬ್ಬರೂ ಭಾವಿಸಿದ್ದೆಲ್ಲಾ ಭ್ರಮೆಯಷ್ಟೇ! ಪ್ರಕೃತಿಗೆ ಇವರಿÀಬ್ಬರೂ ಯಃಕಶ್ಚಿತ್ ಜೀವಿಗಳಷ್ಟೇ! ರಘುವಿನ ಊರನ್ನು ತಲುಪುವ ವೇಳೆಗೆ ಇದ್ದ ಸಾಕ್ಷಿಯೊಂದು ಸತ್ತು ಹೋಗಿತ್ತು. ಕತ್ತಲು ಕಳೆದು, ಬೆಳಕು ಹರಿದು ರಾತ್ರಿಯ ಪ್ರೀತಿಯ ಊಟದ ಎಲೆಯೆಲ್ಲಾ ಕಾಣದಂತೆ ಕತ್ತಲೊಟ್ಟಿಗೆ ಮಾಯವಾಗಿದ್ದವು. ಯಶೋದೆ ರಘುವನ್ನು ಬಿಟ್ಟು ಮತ್ತೊಂದು ಬಸ್ ಹಿಡಿದು ತನ್ನೂರಿಗೆ ಹೊರಡುವಾಗ, ರಘುನಾಥ ಓಡೋಡಿ ಏದುಸಿರು ಬಿಡುತ್ತಾ ಬಂದು, ಯಶೋದೆಯ ಮುಂದೆ ಒಂದೆರೆಡು ನಿಮಿಷ ಬಾಗಿ ನಿಂತು ದಣಿವಾರಿಸಿಕೊಂಡ. ‘ಯಶೋದಾ! ಮತ್ತೆ ಸಿಗೋಣ. ಐ ಮಿಸ್ ಯು’ ಎಂದು ಮರದ ಮರೆಯೆಡೆಗೆ ಆಕೆಯನ್ನು ಎಳೆದೊಯ್ದು ಆ ಬೆಳಕಿನಲ್ಲಿಯೂ ಆಕೆಯ ಕೈಗೊಂದು ಮುತ್ತನಿತ್ತನೆಂದರೆ, ಅವನ ಪ್ರೀತಿಯೆನ್ನುವ ಭಾವನೆಗೆ ಒಂದು ಸಲಾಮ್.


ಆದರೆ ಅದು ಪ್ರೀತಿಯೇ? ಅಥವಾ ಕತ್ತಲ ಜಗದ ಕಾಳ ಭಾವನೆಯೇ? ಎಷ್ಟೇ ಜಗಳ-ಬೈಗುಳಗಳು ಇಬ್ಬರ ನಡುವೆ ತೂರಲೆತ್ನಿಸಿದರೂ ಇಬ್ಬರೂ ಒಬ್ಬರನ್ನೊಬ್ಬರು ಬಿಡಲು ಧೈರ್ಯ ತೋರಲಿಲ್ಲ. ಏಕೆ? ಅದು ಪ್ರೀತಿಯೋ ಅಥವಾ ಸಂಬAಧವನ್ನು ಕಳಚಿದ ಕಳಂಕ ತನ್ನ ಮೇಲೆ ಬಾರದಿರಲೆಂಬ ಒಳ್ಳೆತನದ ಮುಸುಕೋ? ರಘುನಾಥನ ಆ ಮಿಸ್ ಯೂ ಆಗಲೀ ಅಥವಾ ತನ್ನದೇ ಆ ಜನ್ಮಾಂತರದ ಆಶಯವಾಗಲೀ ಎಲ್ಲವೂ ದಿನಗಳೆದಂತೆ ವಯಸ್ಸಾಗುತ್ತಾ ಕಳೆಗುಂದುತ್ತಾ ಮಾಂಸರೂಪಗಳನ್ನು ಕಳೆದುಕೊಂಡು ಕೇವಲ ಪದಗಳಿಂದ ಜೋಡಣೆಯಾದ ವಾಕ್ಯಗಳಾಗಿದ್ದವಷ್ಟೇ! ಪ್ರಿಯಕರನ ಮನಸ್ಸಿನಾಳಕ್ಕೆ ಹೊಕ್ಕು ಅದನ್ನು ಬಗೆ ಬಗೆದು ನೋಡುತ್ತಾ ಹೋದ ಹಾಗೆ ಹೆಚ್ಚು ಮಣ್ಣೇ ದೊರೆತೀತು! ಹೆಚ್ಚು ಬಗೆದಷ್ಟು ಮಣ್ಣೇ ದೊರೆತೀತೆನ್ನುವ ಪೂರ್ವಾಗ್ರಹವೊಂದು ಮನಸ್ಸಿಗೆ ಬಡಿದು ಕೊನೆಗೆ ಬಗೆಯುವುದನ್ನು ನಿಲ್ಲಿಸಿ ಖನಿಜ ಸಂಪತ್ತೊAದನ್ನು ಕಳೆದುಕೊಂಡುಬಿಡುತ್ತೀವೆನ್ನುವುದಕ್ಕೆ ಪ್ರೀತಿಸುವವರೇ ಸಾಕ್ಷಿಗಳೇನೋ! ಆದರೂ ಪ್ರೀತಿಸುವುದನ್ನು ಮಾತ್ರ ನಿಲ್ಲಿಸುವುದಿಲ್ಲ!


ಆದರೆ ಒಂದು ಪ್ರೀತಿ ಬದುಕಿರುವಾಗಲೇ ಮತ್ತೊಂದು ಹುಟ್ಟಲು ಸಾಧ್ಯವೇ? ಯಶೋದೆಗೆ ಸಮೀರ ವಿಶಿಷ್ಟವಾಗಿ ಕಂಡದ್ದರಲ್ಲೇನೂ ಅಚ್ಚರಿಯಿಲ್ಲ. ತಾನು ಬಯಸಿದ, ಪ್ರೀತಿಯೆಂಬ ಭಾವ ಹುಟ್ಟುವ ಉಗಮಸ್ಥಾನದಂತೆ ಸಮೀರ ಕಂಡದ್ದರಲ್ಲಿ ರಘುವಿನ ಪಾತ್ರವೂ ಉಂಟೂ! ‘ಸಮೀರ ಮುಂಚೆಯೇ ಸಿಕ್ಕಿದ್ದರೆ?’ ಎನ್ನುವ ಪ್ರಶ್ನೆಗಳು ಯಶೋದೆಗೆ ನೆಮ್ಮದಿಯನ್ನೂ, ದುಃಖವನ್ನೂ ಒಟ್ಟೊಟ್ಟಿಗೇ ನೀಡುತ್ತಿದ್ದವು. ಸಮೀರನ ಬಳಿ ಯಶೋದೆಗೆ ಏನನ್ನೂ ಮುಚ್ಚಿಡಲು ಸಾಧ್ಯವಾಗಲಿಲ್ಲ. ಸಮೀರನಿಗೂ ‘ಯಶೋದೆ ಮುಂಚೆಯೇ ತನಗೆ ಸಿಕ್ಕಿದ್ದರೆ?’ ಎನ್ನುವ ಆಸೆ ಹುಟ್ಟಿತ್ತು! ಸಮೀರನಿಗೆ ಏನನ್ನೂ ಮುಚ್ಚಿಟ್ಟುಕೊಳ್ಳುವ ಶಕ್ತಿಯಿಲ್ಲದ್ದು ಒಂದು ರೀತಿ ಅನುಕೂಲವೇ ಆಯಿತು. ತನ್ನ ಮನಸ್ಸನಿಲ್ಲಿದ್ದ – ‘ಯಶೋದೆ ಮುಂಚೆಯೇ ಸಿಕ್ಕಿದ್ದರೆ?’ ಎನ್ನುವ ಇಂಗಿತವನ್ನು ಯಶೋದೆಗೆ ತಿಳಿಸಿದಾಗ ಆಕೆ ಏನನ್ನೂ ಹೇಳದವಳಾಗಿ ಅತ್ತು ಓಡಿದ್ದಳು. ಂiÀiಶೋದೆ ಅತ್ತದ್ದೇಕೆ?


*****


ಅದೇ ರಾತ್ರಿ ಯಶೋದೆಯ ಕನಸಲ್ಲಿ ಅದೆಂದೋ ಓದಿದ ಕಾದಂಬರಿ ಸಾಲುಗಳು ಹುಚ್ಚು ಹಿಡಿಸುವ ಹಾಗೆ ಪ್ರತಿಧ್ವನಿಸಲಾರಂಭಿಸಿದವು. “ದೊಡ್ಡ ಮನುಷ್ಯರೆನಿಸಿಕೊಂಡವರು ದೂರದವರಿಗೆ ಗೋಡೆಯ ಫೋಟೋದಲ್ಲೋ, ಅಥವಾ ದೇವರ ರೂಪದಲ್ಲೋ ಅಥವಾ ಇತಿಹಾಸದ ಪುಟಗಳಲ್ಲಷ್ಟೇ ಕಾಣಿಸಿ ಮತ್ತಷ್ಟು ದೊಡ್ಡವರಾಗುತ್ತಾರೆ. ಆದರೆ ಆ ದೊಡ್ಡ ಮನುಷ್ಯರೊಟ್ಟಿಗೆ ಅತೀ ಸನಿಹ ಒಟನಾಟಗಳನ್ನು ಹೊಂದಿದವರಿಗಷ್ಟೇ ಅವರಲ್ಲಿಯ ಸಣ್ಣತನಗಳು, ವಿರೋಧಾಭಾಸಗಳ ಅರಿವಾಗುವುದು”. ಯಶೋದೆ ಎದ್ದು ಕೂತಳು! ‘ಓಹ್...!’ ಆಕೆಯ ಎದೆ ವೇಗವಾಗಿ ಹೊಡೆದುಕೊಳ್ಳುತ್ತಿತ್ತು. ಕತ್ತಲಲ್ಲೇನೋ ಕಂಡ ಹಾಗೆ ಒಂದೇ ಕಡೆ ನೋಡುತ್ತಾ ಕುಳಿತಳು. ‘ಈ ಪ್ರೀತಿಯೆನ್ನಿಸಿಕೊಂಡ ಭಾವವೂ ಒಂದು ದೊಡ್ಡ ಮನುಷ್ಯನ ಹಾಗೆಯೇ? ದೂರದಲ್ಲಿದ್ದಾಗ ರಘುವೇ ಉಸಿರು, ರಘುವೇ ಜೀವ ಎನ್ನುವಷ್ಟು ಹುಚ್ಚು ಹಿಡಿಸಿ ಕೊಂದಿತ್ತು. ಅದೇ ಈಗ! ಹುಹ್.. ಪ್ರೀತಿಯನ್ನೋದೂ ಒಂದು ಮಾಯೆ. ಕ್ಷಣಕಾಲದ ವ್ಯಾಮೋಹ! ಇದೇ ಎಷ್ಟೋ ದಿನಗಳ ಹಿಂದೆ, ‘ರಘು ನನ್ನ ಜೀವನ ಸಂಗಾತಿಯಾಗಿದ್ದರೆ?’ ಎನ್ನುವ ತದ್ರೂಪದ ಪ್ರಶ್ನೆ ಮನಸ್ಸಿನಲ್ಲಿ ಎಂಥಹಾ ಸುಮಧರ ಭಾವವನ್ನು ತಂದಿತ್ತು. ಈಗಲೂ ಅದೇ ಪ್ರಶ್ನೆ! ಮುಂದೆಯೂ ಅದೇ ಪ್ರಶ್ನೆ? ಓಹ್!... ಹಾಗಿದ್ದರೆ? ಹಾಗಿದ್ದರೆ ಇವೆಲ್ಲವುಗಳ ಅರ್ಥವೇನು? ಜೀವನದಲ್ಲಿ ಎಲ್ಲವೂ ಹೀಗೆಯೇ? ಎಲ್ಲವೂ ಅರ್ಥಶೂನ್ಯವೇ? ದೂರದಲ್ಲಿ ಒಂದು, ಹತ್ತಿರದಲ್ಲಿ ಮತ್ತೊಂದು? ಮುಂದೆ ಸಮೀರನೂ ಕೂಡ?’


*****


ಯಶೋದೆ ತನ್ನ ಮನಸ್ಸಿಂದ ರಘುವನ್ನೂ, ಸಮೀರನನ್ನೂ ತೊರೆದುಹಾಕಲು ಆ ರಾತ್ರಿಯ ಕನಸೇ ಕಾರಣ. ಎರಡು ವರ್ಷಗಳ ನಂತರ ಯಶೋದೆಗೆ ಮದುವೆಯಾಯಿತು. ಮೊದಲ ರಾತ್ರಿ ಸೊಂಟದ ಮೇಲೆ ತನ್ನ ಗಂಡ ಕೈ ಸವರಿದ್ದು ಮೊದಲಿನ ಹಾಗೆಯೇ ಅನ್ನಿಸಿತ್ತು! ಜೀವನ ಎಲ್ಲವನ್ನೂ ಮರೆಸಿಬಿಟ್ಟಿತ್ತು.


 


 


 

No comments:

Post a Comment