(ಕಿಟ್ಟಿಯ ಕಥಗಳು)
ಕಿಟ್ಟಿಯ ವಯಸ್ಸು ದಾಖಲಾತಿಯಲ್ಲಿ ೧ ವರ್ಷ ಹಿಂದಕ್ಕೆ ಹೋಗಿದ್ದು ಕಿಟ್ಟಿಗೆ ಗೊತ್ತಾಗಿರಲಿಲ್ಲ, ಗೊತ್ತಾಗುತ್ತಲೂ ಇರಲಿಲ್ಲ. ಅವನಿಗೆ ಯೂಕೆ.ಜಿಯೋ ಒಂದನೇ ತರಗತಿಯೋ, ಯಾವುದಾದರೂ ವಾತಾವರಣ ಹೊಸತದ್ದೆ. ಮೊದಲಿಗೆ ಶಾಲೆಗೆ ಹೋಗಲು ಅಳುತ್ತಿದ್ದ ಕಿಟ್ಟಿ, ಅಮ್ಮನ ಹೊಡೆತ ತಾಳಲಾರದೆ ಶಾಲೆಯೇ ಪರವಾಗಿಲ್ಲವೆಂದು ಹೊರಡಲಾರಂಭಿಸಿದ. ಅಕ್ಕ ವೇಗವಾಗಿ ನಡೆದುಗೋಗಲು ಸಾಧ್ಯವಾಗದಂತೆ ದಾರಿಯುದ್ದಕ್ಕೂ ಆಕೆಯ ಲಂಗವನ್ನು ಹಿಡಿದುಕೊಂಡು, ನಡೆವುಯೆಲ್ಲಾದರೂ ಏರೋಪ್ಲೇನ್ ಚಿಟ್ಟೆ (ಡ್ರಾö್ಯಗನ್ ಫ್ಲೆöÊ) ಕಂಡರೆ ಅದು ಅವನ ಕಣ್ಣೋಟದ ಅಂಗಳದಿAದ ಆಚೆಗೆಲ್ಲೋ ಹೋಗುವವರೆಗೂ ಅಲ್ಲೇ ಅಕ್ಕಳ ಲಂಗವನ್ನು ಹಿಡಿದು ನೋಡುತ್ತಾ ನಿಂತಿದ್ದು ಶಾಲೆ ತಲುಪುವಷ್ಟರಲ್ಲಿ ಬೆಳಗ್ಗಿನ ಪ್ರೇಯರ್ ಮುಗಿದು ಎಲ್ಲರೂ ತರಗತಿಗೆ ತೆರಳಿರುತ್ತಿದ್ದರು. ಪಿ.ಟಿ. ಮಾಸ್ಟರ್ ಕೆಂಷಪ್ಪ (ಅವರ ಮುಖ ಕೆಂಚಗಿತ್ತೆAದು ಎಲ್ಲರೂ ಕೆಂಚಪ್ಪನೆAದು ಕರೀತಿದದ್ದು) ಮಾತ್ರ, ಹೊರಗೆ ಸ್ಲೆöÊಂಡಿಗ್ ಗೇಟಿನ ಬಳಿ ಲೇಟಾಗಿ ಬರುತ್ತಿದ್ದ ಮಕ್ಕಳಿಗಾಗಿಯೇ ಕಾದು ನಿಂತಿರುತ್ತಿದ್ದರು. ಕೆಂಚಪ್ಪ ಹೊಡೆಯುತ್ತಿರಲಿಲ್ಲ. ಬದಲಾಗಿ ಮತ್ತೊಂದು ಘೋರ ಶಿಕ್ಷೆ ನೀಡುತ್ತಿದ್ದರು – ೫ ಪೇಜ್ ಕಾಪಿ ರೈಟಿಂಗ್ ಬರೆಯುವುದು. ಕಿಟ್ಟಿಯ ಅಕ್ಕಳಿಗೆ ಇದಕ್ಕಿಂತ ಹೊಡೆತವೇ ಪರವಾಗಿರಲಿಲ್ಲ – ಏಕೆಂದರೆ ಆಕೆ ೧೦ ಪೇಜ್ ಬರಯಬೇಕಿತ್ತಲ್ಲ ಕಿಟ್ಟಿಯದ್ದೂ ಸೇರಿ.