(ಕಿಟ್ಟಿಯ ಕಥಗಳು)
ಕಿಟ್ಟಿಯ ವಯಸ್ಸು ದಾಖಲಾತಿಯಲ್ಲಿ ೧ ವರ್ಷ ಹಿಂದಕ್ಕೆ ಹೋಗಿದ್ದು ಕಿಟ್ಟಿಗೆ ಗೊತ್ತಾಗಿರಲಿಲ್ಲ, ಗೊತ್ತಾಗುತ್ತಲೂ ಇರಲಿಲ್ಲ. ಅವನಿಗೆ ಯೂಕೆ.ಜಿಯೋ ಒಂದನೇ ತರಗತಿಯೋ, ಯಾವುದಾದರೂ ವಾತಾವರಣ ಹೊಸತದ್ದೆ. ಮೊದಲಿಗೆ ಶಾಲೆಗೆ ಹೋಗಲು ಅಳುತ್ತಿದ್ದ ಕಿಟ್ಟಿ, ಅಮ್ಮನ ಹೊಡೆತ ತಾಳಲಾರದೆ ಶಾಲೆಯೇ ಪರವಾಗಿಲ್ಲವೆಂದು ಹೊರಡಲಾರಂಭಿಸಿದ. ಅಕ್ಕ ವೇಗವಾಗಿ ನಡೆದುಗೋಗಲು ಸಾಧ್ಯವಾಗದಂತೆ ದಾರಿಯುದ್ದಕ್ಕೂ ಆಕೆಯ ಲಂಗವನ್ನು ಹಿಡಿದುಕೊಂಡು, ನಡೆವುಯೆಲ್ಲಾದರೂ ಏರೋಪ್ಲೇನ್ ಚಿಟ್ಟೆ (ಡ್ರಾö್ಯಗನ್ ಫ್ಲೆöÊ) ಕಂಡರೆ ಅದು ಅವನ ಕಣ್ಣೋಟದ ಅಂಗಳದಿAದ ಆಚೆಗೆಲ್ಲೋ ಹೋಗುವವರೆಗೂ ಅಲ್ಲೇ ಅಕ್ಕಳ ಲಂಗವನ್ನು ಹಿಡಿದು ನೋಡುತ್ತಾ ನಿಂತಿದ್ದು ಶಾಲೆ ತಲುಪುವಷ್ಟರಲ್ಲಿ ಬೆಳಗ್ಗಿನ ಪ್ರೇಯರ್ ಮುಗಿದು ಎಲ್ಲರೂ ತರಗತಿಗೆ ತೆರಳಿರುತ್ತಿದ್ದರು. ಪಿ.ಟಿ. ಮಾಸ್ಟರ್ ಕೆಂಷಪ್ಪ (ಅವರ ಮುಖ ಕೆಂಚಗಿತ್ತೆAದು ಎಲ್ಲರೂ ಕೆಂಚಪ್ಪನೆAದು ಕರೀತಿದದ್ದು) ಮಾತ್ರ, ಹೊರಗೆ ಸ್ಲೆöÊಂಡಿಗ್ ಗೇಟಿನ ಬಳಿ ಲೇಟಾಗಿ ಬರುತ್ತಿದ್ದ ಮಕ್ಕಳಿಗಾಗಿಯೇ ಕಾದು ನಿಂತಿರುತ್ತಿದ್ದರು. ಕೆಂಚಪ್ಪ ಹೊಡೆಯುತ್ತಿರಲಿಲ್ಲ. ಬದಲಾಗಿ ಮತ್ತೊಂದು ಘೋರ ಶಿಕ್ಷೆ ನೀಡುತ್ತಿದ್ದರು – ೫ ಪೇಜ್ ಕಾಪಿ ರೈಟಿಂಗ್ ಬರೆಯುವುದು. ಕಿಟ್ಟಿಯ ಅಕ್ಕಳಿಗೆ ಇದಕ್ಕಿಂತ ಹೊಡೆತವೇ ಪರವಾಗಿರಲಿಲ್ಲ – ಏಕೆಂದರೆ ಆಕೆ ೧೦ ಪೇಜ್ ಬರಯಬೇಕಿತ್ತಲ್ಲ ಕಿಟ್ಟಿಯದ್ದೂ ಸೇರಿ.
ಮಧ್ಯಾಹ್ನದವರೆಗಷ್ಟೇ ಕಿಟ್ಟಿಗೆ ತರಗತಿ. ಊಟದ ನಂತರ ತರಗತಿಯಲ್ಲಿ ಮಲಗಬೇಕಿತ್ತು. ಕಿಟ್ಟಿಗೆ ಮಧ್ಯಾಹ್ನ ಮಲಗಿ ಅಭ್ಯಾಸವಿರಲಿಲ್ಲ. ಊರಲ್ಲಾಗಿದ್ದರೆ ರಾಮುವಿನೊಟ್ಟಿಗೆ ಊರಲೆಯಲು ಹೋಗುತ್ತಿದ್ದ. ಆದರೆ ಇಲ್ಲಿಯೂ ಕಿಟ್ಟಿಗೆ ಅಷ್ಟೇನು ಸಮಯ ಬೇಕಾಗಲಿಲ್ಲ, ಅಲ್ಲಿಯ ಹುಡುಗರೊಟ್ಟಿಗೆ ಬೆರೆತು ತನ್ನ ಚೇಷ್ಟೆಯನ್ನ ಮುಂದುವರೆಸಲಿಕ್ಕೆ. ಕಿಟ್ಟಿಗೆ ಬಲು ಇಷ್ಟವಾದ ಕೆಲಸವೆಂದರೆ ಮಲಗಿದ್ದ ಹುಡುಗಿಯರನ್ನ ಗೋಳುಹೊಯ್ದುಕೊಳ್ಳುವುದು. ಗೆಳೆಯರೆಲ್ಲಾ ಸೇರಿ ಮಲಗಿದ್ದ ಹುಡುಗಿಯರ ಲಂಗದೊಳಗೆ ಗೊದ್ದವನ್ನ (ದೊಡ್ಡ ಕಪ್ಪು ಇರುವೆ) ಬಿಟ್ಟು, ನಂತರ, ತಾವೆ ಗಿಂಟುಬಿಟ್ಟು ಏನೂ ತಿಳಿಯದವರ ಹಾಗೆ ಒಡನೆಯೇ ಪಕ್ಕದಲ್ಲಿ ಮಲಗಿ ಬಿಡುವುದು. ಆ ಹುಡುಗಿಯರು ಕೂಗುತ್ತಾ ಏಳುವುದನ್ನು ಕಣ್ಣು ಸಂದಿಯಲ್ಲಿ ನೋಡುವುದು ಇವರಿಗೆ ಮಜವೋ ಮಜÀ! ಮುಂದೆ ಅವನ ಅಮ್ಮ ಮಧ್ಯಾಹ್ನದ ಹೊತ್ತೇ ಬಂದು ಅವನನ್ನು ಕರೆದುಕೊಂಡು ಹೋಗುವವರೆಗೂ ಇದು ನಡೆಯುತ್ತಲೇ ಇತ್ತು. ಕಿಟ್ಟಿ ಅಮ್ಮನನ್ನ ಕೇಳಿದ್ದ – ‘ಯಾಕಮ್ಮ ಮಧ್ಯಾನಾನೇ ಕರ್ಕೊಂಡ್ ಹೋಗ್ತಿದೀಯಾ?’ ಆದರೆ ಅಮ್ಮ ಕಿಟ್ಟಿಗೆ ಅರ್ಥವಾಗುವ ಹಾಗೆ ಉತ್ತರಿಸಿರಲಿಲ್ಲ. ‘ನಿನ್ನನ್ನ ಹೆತ್ತಿದ ತಪ್ಪಿಗೆ!’ ಅಂತ ಕೋಪದಲ್ಲಿ ಹೇಳಿದ್ದು ಕೇಳಿ ಕಿಟ್ಟಿ ಮತ್ತೆ ಕೆದಕಲು ಹೆದರಿದ್ದ.
ಕಿಟ್ಟಿಯ ಮನೆ ಇದ್ದದ್ದು ಒಂದು ವಠಾರದಲ್ಲಿ. ವಠಾರವೆಂದರೆ ಸುತ್ತ ಒಂದು ಕಾಂಪೌAಡ್, ಒಳಗೆ ಮೂರು ಮನೆಗೆಳು – ಒಂದು ಓನರ್‌ನದ್ದು, ಇನ್ನೆರೆಡು ಬಾಡಿಗೆಗೆ. ಕಾಂಪೌAಡಿನ ಒಂದು ಬದಿಯ ಆಚೆಗೆ, ಒಂದು ನರಸಿಂಹನ ದೇವಸ್ಥಾನ, ಹಳೆಯ ಹೊಯ್ಸಳರ ಕಾಲದ್ದು. ಅಲ್ಲಿಯ ಅರ್ಚಕರು ಕಿಟ್ಟಿಗೆ ಒಂದು ವರಸೆಯಲ್ಲಿ ದೊಡ್ಡಪ್ಪ. ಈ ದೊಡ್ಡಪ್ಪನಿಗೊಬ್ಬ ಮಗನಿದ್ದ – ‘ಅಬಿರಾಮü’, ಇವನದ್ದೂ ಕಿಟ್ಟಿಯ ಅಕ್ಕನ ವಯಸ್ಸೇ! ಕಿಟ್ಟಿಯ ಜೀವನದಲ್ಲಿ ಹಳೆಯ ಗೆಳೆಯ ರಾಮುವಿನ ಕೊರತೆಯನ್ನು ಭರ್ತಿ ಮಾಡಿದವ ಈತ. ಕಿಟ್ಟಿ ಜೀವನದಲ್ಲಿ ವಿವಿಧ ಮಜಲುಗಳನ್ನು ಕಂಡದ್ದು ಅಭಿಯಿಂದಲೇ! ‘ಪ್ರೀತಿ’, ‘ಮದುವೆ’ ಹಾಗೂ ‘ಹುಟ್ಟು’ಗಳ ಬಗ್ಗೆ ಒಂದು ಅರ್ಥವನ್ನ ಕಿಟ್ಟಿಯ ಮನಸ್ಸಲ್ಲಿ ಹುಟ್ಟುಹಾಕಿದ ಶ್ರೇಯಸ್ಸು ಅಭಿಗೆ ಸಲ್ಲಬೇಕು. ಗಂಡು ಹೆಣ್ಣು ಪರಸ್ಪರ ತಬ್ಬಿ ನಂತರ ಚುಂಬಿಸುವುದೇ ಪ್ರೀತಿ. ಗಂಡು ಹೆಣ್ಣಿಗೆ ತಾಳಿ ಕಟ್ಟಿದರೆ ಇಬ್ಬರಿಗೂ ಮದುವೆಯಾದಂತಾಗಿ ಅದೇ ರಾತ್ರಿ ಇಬ್ಬರೂ ಪ್ರೀತಿ ಮಾಡಿ, ತಬ್ಬಿ ಕೋಣೆಯೊಳಗೆ ಮಲಗಿದರೆ ಮಾರನೆಯ ದಿನ ಹೆಣ್ಣು ವಾಂತಿ ಮಾಡುತ್ತಾಳೆ. ಇದು ಮಗು ಹುಟ್ಟುವುದರ ಸೂಚನೆ ಎನ್ನುವುದು ಕಿಟ್ಟಿಯ ಮನಸಿನಾಳದಲ್ಲಿ ಗಟ್ಟಿಯಾಗಿ ನೆಲೆಯೂರಿತ್ತು. ಇದರೊಟ್ಟಿಗೆ ಸುಂದರವಾದ ಹುಡುಗಿಯನ್ನ ಮದುವೆಯಾಗುವುದೇ ಜೀವನದ ಪರಮ ಧ್ಯೇಯವೆಂದು ಇಬ್ಬರೂ ಆ ವಯಸ್ಸಿಗೇ ಬಹಳ ಗಟ್ಟಿಯಾಗಿ ನಂಬಲಾರAಭಿಸಿದ್ದರು. ಇದಕ್ಕೆ ಸಾಕ್ಷಿಯೇ ಕಿಟ್ಟಿಯ ಮನೆಯ ‘ಕರ್ಮವೀರ’ ವಾರಪತ್ರಿಕೆ.
ಕಿಟ್ಟಿಯ ಅಮ್ಮ ಕಿಟ್ಟಿಗೆ ಹೊಡೆದೋ, ಬಡೆದೋ ಹೇಗೋ ಸರಿಯೇ ಒಂದನೇ ತರಗತಿ ಬರುವ ವೇಳೆಗೆ ತಾನು ಹೇಳುವ, ತೋರಿಸುವÀ ಚಿಕ್ಕ ಚಿಕ್ಕ ವಾಕ್ಯಗಳನ್ನ ಬರೆಯಲು, ಹಾಗೆಯೇ ಓದಲು ಕಲಿಸಿದ್ದಳು. ಎರಡನೆಯ ತರಗತಿಗೆ ಬರುವ ವೇಳೆಗೆಲ್ಲಾ ಕಿಟ್ಟಿಗೆ ಪ್ರತೀ ಉಕ್ತಲೇಖನದಲ್ಲೂ ಎರಡೆರೆಡು ಚಾಕೋಲೇಟುಗಳು ಸಿಗುತ್ತಿದ್ದವು. ಸೋಮವಾರವೆಂದರೆ ಕಿಟ್ಟಿ ಹಾಗೂ ಅಭಿಗೆ ಒಂದು ರೀತಿಯ ಉತ್ಸುಕತೆ – ಕರ್ಮವೀರ ಬರುತ್ತದೆಂದು. ಪ್ರತೀ ಕರ್ಮವೀರದ ಕೊನೆಯ ಪುಟದಲ್ಲಿ ಒಂದು ಹೀರೋಯಿನ್ ಫೋಟೊ ಇದ್ದೇ ಇರುತ್ತಿತ್ತು. ಅಕಸ್ಮಾತ್ ಬೇರೆ ಯಾವುದಾದರೂ ಫೋಟೋ ಬಂತೆAದರೆ ಇಬ್ಬರಿಗೂ ಅತಿಯಾದೆ ನಿರಾಶೆಯುಂಟಾಗುತ್ತಿತ್ತು. ಇಬ್ಬರೂ ಸೇರಿ ದೇವಸ್ಥಾನದ ಹಿಂದಿದ್ದ ಒಂದು ಗಿಡದ ಕೆಳಗೋ ಅಥವಾ ದೇವಸ್ಥಾನದ ಮುಂದಿನ ವಿಶಾಲ ಬಯಲಿನ ಯಾವುದೋ ಕಾಣದ ಮೂಲೆಯಲ್ಲೋ ಆ ಕರ್ಮವೀರವನ್ನ ಹಿಡಿದು ಅದರ ಹಿಂದಿನ ಪುಟದಲ್ಲಿದ್ದ ಹೀರೋಯಿನ್ನನ್ನು ‘ಪ್ರೀತಿಸುತ್ತಿದ್ದರು’. ಎಷ್ಟೇ ಪ್ರೀತಿಸಿದರೂ ಹೀರೋಯಿನ್ನಿನ ಮುಖಭಾವ ಬದಲಾಗದ್ದು ಕಂಡು ಆಕೆಯ ಮುಖದ ಮೇಲೆ ತಮ್ಮ ಮನದಾಳದ ಮಾತುಗಳನ್ನ ಗಟ್ಟಿಯಾಗಿ ಒತ್ತುತ್ತಿದ್ದರು – ‘ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನಿನ್ನನ್ನೇ ಮದುವೆಯಾಗುತ್ತೇನೆ’ ಎಂದು. ಹೀಗೆ, ಸೌಂದರ್ಯ, ಪ್ರೇಮ, ಶೃತಿ, ಭಾರತಿ, ಇನ್ನೂ ಹಲವಾರು ಸುಂದರಿಯರೆಲ್ಲರನ್ನೂ ಮದುವೆಯಾಗುವ ತವಕ ಇಬ್ಬರಿಗೂ ಕಿಟ್ಟಿಗೆ ತನ್ನ ‘ಯಾವುದೇ’ ಪ್ರೀತಿಯ ಬಗೆಗೆ ಕಿಂಚಿತ್ ಭಯ ಪಟ್ಟುಕೊಳ್ಳಬೇಕೆನ್ನುವ ಸಂಶಯವೂ ಸುಳಿದಿರಲಿಲ್ಲ. ಪ್ರೀತಿ ಮಾಡಿದರೆ, ಮದುವೆಯಾಗುತ್ತೇನೆಂದರೆ, ಮುತ್ತಿಕ್ಕುತ್ತೇನೆಂದರೆ ಹೊಡೆತಗಳು ಬೀಳುತ್ತವೆನ್ನುವುದು, ಅವೆಲ್ಲವೂ ಆ ವಯಸ್ಸಿಗೆ ‘ಪರಮ ಪಾಪ’ವೆಂದು ಕಿಟ್ಟಿಯ ಅಮ್ಮ ಒಂದು ಕೈಯಲ್ಲಿ ಕರ್ಮವೀರವನ್ನ ಹಿಡಿದು, ಮತ್ತೊಂದು ಕೈಯಲ್ಲಿ ದೊಣ್ಣೆಯನ್ನ ಹಿಡಿದು ನಾಲ್ಕು ಬಿಗಿದಾಗ ಗೊತ್ತಾಗಿದ್ದು. ಕಿಟ್ಟಿಯ ಅಮ್ಮನಿಗೆ ಹೆಚ್ಚು ಕೋಪ ಬಂದದ್ದು, ಅಮ್ಮನ ಬಳಿ ಕರ್ಮವೀರವನ್ನ ಕೊಂಡಿದ್ದ ಪಕ್ಕದ ಮನೆ ಕೋಮಲ ಆಡಿಕೊಂಡಾಗ. ಕಿಟ್ಟಿ ಎಂದಿನAತೆ ತನ್ನ ಅಳುವಿನ ಅಸ್ತçವನ್ನ ಪ್ರಯೋಗಿರಲಾರಂಭಿಸಿದ. ಎಂದಿಗಿAತಲೂ ಜೋರಾಗಿ ಅಳಲಾರಂಭಿಸಿದ. ಹಿಂದಿನ ದಿನವಷ್ಟೇ ಒಂದು ಸಿನೆಮಾ ನೋಡಿದ್ದ. ಅದರಲ್ಲಿ ಹೀಗೆಯೇ ಹೊಡೆಸಿಕೊಳ್ಳುತ್ತಿದ್ದ ಒಬ್ಬ, ‘ಹೊಡೆದು ಹೊಡೆದು ನನ್ನ ಸಾಯಿಸಿಬಿಡು’ ಎಂದು ಜೋರಾಗಿ ಅಳುತ್ತಾ ಹೇಳಿದೊಡನೆಯೇ ಆತನ ಅಮ್ಮ ಹೊಡೆಯುವುದನ್ನ ನಿಲ್ಲಿಸಿ ಅಪ್ಪಿಕೊಂಡುಬಿಟ್ಟಿದ್ದಳು. ಆದರೆ ಕಿಟ್ಟಿಯ ಅಂದಾಜು ಸರಿಯಿರಲಿಲ್ಲ. ಹಾಗೆ ಆತನ ರೀತಿಯೇ ಹೇಳಿದ್ದೇ ತಡ, ಕಿಟ್ಟಿಗೆ ಮತ್ತಷ್ಟು ಲಾತ ಬಿದ್ದವು, ತಿರುಗು ಮಾತನಾಡುತ್ತಾನೆಂದು.
ಇದಾದ ಮೇಲೆ ಕಿಟ್ಟಿಗೆ ಪ್ರೀತಿಸುವುದು ‘ಕೆಟ್ಟ’ ಕೆಲಸವೆನ್ನುವುದು ಅರಿವಾಯಿತಾದರೂ, ಆತನ ಪ್ರೀತಿಯನ್ನ ಬಚ್ಚಿಟ್ಟುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹಳೆಯ ಕರ್ಮವೀರದ ಕೊನೆಯ ಪುಟವನ್ನ, ಕಿಟ್ಟಿ ಹಾಗೂ ಅಭಿ ಇಬ್ಬರೂ ಸೇರಿ ಕತ್ತರಿಸಿ ಜೋಡಿಸಿಟ್ಟುಕೊಳ್ಳುತ್ತಿದ್ದರು ಆಗಾಗ ಪ್ರೀತಿ ಮಾಡಲು!
No comments:
Post a Comment