Wednesday, March 30, 2022

ಕ್ಯಾಂಪಸ್ ರೌಂಡ್ಸ್ !

 

'See... ' ಸದಾನಂದ ಒಂದು ಸಿಪ್ ಕಾಫಿ ಹೀರಿದ. ಕ್ಯಾಂಪಸಿನಲ್ಲಿ ಶುರುವಾಗಿದ್ದ ಹೊಸ ಅಂಗಡಿ. ನೋಡಿದರೇನೆ ತಿಳೀತಿತ್ತು ಮಲೆಯಾಳಿ -  ಮುಸಲ್ಮಾನನದ್ದು. ಈ ಮಲೆಯಾಳಿ ಮುಸಲ್ಮಾನರೊಂದಿಗೆ ಅದೇನೋ ಹೋದಲ್ಲೆಲ್ಲಾ ನಂಟು. ಹಿಂದೆ ತಾನಿದ್ದ ಮಂಡ್ಯದಲ್ಲೂ ಸಹ ಮನೆಯ ಹತ್ತಿರ ಇದ್ದ ದಿನಸ ಅಂಗಡಿಯೂ ಸಹ ಮಲೆಯಾಳಿ ಮುಸಲ್ಮಾನನದ್ದೇ‌. ಅದು ತಿಳಿದದ್ದು ಬಹಳ ದಿನಗಳ ತರುವಾಯ. ತನ್ನ ಮಾವ ಮನೆಗೆ ಬಂದಿದ್ದ ಸಂದರ್ಭದಿನಸಿ ಕೊಳ್ಳೋದಿಕ್ಕೇಂತ ಹೊರಗೆ ಬಂದಿದ್ದರು. ಅವರೇ ತಿಳಿಸಿದ್ದುಅದೊಂದು ಮುಸಲ್ಮಾನ ಅಂತ. ಪ್ರಾಯಶಃ ಆರೆಸ್ಸೆಸ್ಸಿನ ಕಟ್ಟಾ ಭಕ್ತರಾಗಿದ್ದ ಅವರಿಗೆ ಈ ವಾಸನೆ ಬಲು ಬೇಗ ತಾಗಿತ್ತೇನೋ. ಅವರು ಅದನ್ನ ಸಾಧಿಸಲಿಕ್ಕೆಂದೇ ಶುಕ್ರವಾರ ಹನ್ನೆರೆಡು ಗಂಟೆಗೆ ಸರಿಯಾಗಿ ಮುಚ್ಚಿದ್ದ ಅಂಗಡಿಯನ್ನ ಸದಾನಂದನಿಗೆ ಸಾಕ್ಷಿಯಾಗಿ ತೋರಿಸಿ ಬೀಗಿದ್ದರು. ಅಷ್ಟೊಂದು ಕರಾರುವಕ್ಕು.

ಕ್ಯಾಂಪಸಿನ ರೌಂಡ್ ಕ್ಯಾಂಟೀನನ್ನ ಮುಚ್ಚಿ ವರ್ಷವೇ ಆಗಿತ್ತು‌. ಈ ಹೊಸದಾಗಿ ಆರಂಭವಾದ ಕಾಫಿ ಅಂಗಡಿ ಸಹಜವಾಗಿಯೇ ಎಲ್ಲರ ಚ್ಯಾಟ್ ಸೆಂಟರ್. ಆಗಷ್ಟೆ ಮಳೆ ಹೊಯ್ದಿತ್ತು. ಇನ್ನೂ ಹನಿ ಜಿನುಗುತ್ತಿತ್ತು.  ೫ ಗಂಟೆಯಾದರೂ ಕ್ಯಾಂಪಸಿನ ದೀಪಗಳು ಹೊತ್ತಿದ್ದವು. ಹಾದಿ ಕಪ್ಪು ಕಪ್ಪು. ಕಾಫಿ ಶಾಪಿನ ಆಚೆಗೆ ಬಿದ್ದಿದ್ದ ಒಳಗಿನ ಲೈಟಿನ‌ ಬೆಳಕು ಒಬ್ಬಬ್ಬರಿಗೊಬ್ಬರು ಸ್ಪಷ್ಟವಾಗಿ ಕಾಣಿಸುವಷ್ಟಾದರೂ ಇತ್ತು. ಮಳೆ ಬಂದೀತೆಂದು ಹೊರಗೊಂದು ದೊಡ್ಡ ಟಾರ್ಪಲ್ ಕಟ್ಟಿ ಕೆಳಗೆ ಚೇರುಗಳನ್ನ ಹಾಕಲಾಗಿತ್ತು. ಎಲ್ಲವೂ ನಮ್ಮ ವ್ಯವಸ್ಥೆಯಾಗೆಯೇ ಎಂದು ಟಾರ್ಪಲ್ಲಿನ‌ ತೂತುಗಳಿಂದ ಜಿನುಗುತ್ತಿದ್ದ ಮಳೆ ಹನಿಗಳನ್ನ ನೋಡಿ ಸದಾನಂದ ನಕ್ಕ.

 'See..  ಫಣಿ. What is truth? ಅದೊಂದು ದೊಡ್ಡ ಸಾಗರ. ಅಗೆದಷ್ಟೂ ವಿಚಾರ ಎಲ್ಲೆಲ್ಲೋ ಹೋಗ್ತದೆ. Let us not worry about what truth in general is. I want to erase that 'general' case, which we shall come to afterwards.  Let us try to analyze how we see it in Mathematics' ಸದಾನಂದ ಎರಡನೇ ಸಿಪ್ ಹೀರೋಕ್ಕೆ ಕಾತಯರದಿಂದ್ದಂತೆ ಬಡ ಬಡ ಹೇಳಲಾರಂಭಿಸಿದ್ದ.

'ನಮಗೆ ಯೂಕ್ಲಿಡನು ಉಳಿಸಿ‌ ಹೋದ ಒಂದು ದೊಡ್ಡ ಕೊಡುಗೆಯೆಂದರೆ Axiomatic system. ಕೆಲವೊಂದರ ಅರ್ಥ  ನಮಗೆ ತಿಳಿದಿದೆ ಅಂತ‌ ಭಾವಿಸಿಅದರ ಆಧಾರದಲ್ಲಿ‌ ಮಿಕ್ಕೇನದ್ದುಬೇಕಾದದ್ದು ಸಾಧ್ಯವೋ‌ ಅದನ್ನ ವ್ಯಾಖ್ಯಾನಿಸಿಕೊಂಡುಒಂದಷ್ಟು ಹೇಳಿಕೆಗಳನ್ನ ಸತ್ಯವಂತ ನಂಬಿಯೇ ತೀರ್ತೇವೆ, so called axioms. Right? ಇದರ ಆಧಾರ ಮೇಲೆ‌‌ ಯಾವ ಹೇಳಿಕೆಗಳ‌ ಸತ್ಯಾಸತ್ಯತೆಗಳ‌ ಬಗ್ಗೆ ಮಾತನಾಡಲುಕ್ಕೆ‌ ಸಾಧ್ಯವೋ ಅವುಗಳ ನನ್ನ system ನ ಭಾಗವಾಗುತ್ತವೆ. Correct? ಯಾವುದನ್ನ ಸಾಧಿಸಿದೋಕ್ಕೆ ಸಾಧ್ಯವೇ ಇಲ್ಲವೋ, we don't know, they may be independent of all of our axioms. ಈಗ ನಾ ಹೇಳೋದುಇದೇ ನನಗೆ mathematics ಜಗತ್ತನ್ನ ನೋಡೋ ದೃಷ್ಟಿ ಕಟ್ಟಿದೆ ಅಂತ. ದೇವರಿದ್ದಾನೆ ಅಂತ ಹೇಳಿ ನಾನು ನಂಬಿದೀನಿಅದಕ್ಕೆ ಯಾವುದೇ‌ ಸಾಕ್ಷಿಯಿಲ್ಲ. ಹಾಗೆಯೇ ದೇವರಿಲ್ಲ‌ ಅಂತ ನೀವು ನಂಬಿದೀರಿ ಅದಕ್ಕೂ ಯಾವುದೇ ಸಾಕ್ಷಿಯಿಲ್ಲ. ಅಂದ ಮೇಲೆ‌ ಈ ದೇವರ ಬಗೆಗೆನಿ‌‌‌ ನಮ್ಮ axioms ಮೇಲೆ‌ ನಾವು build ಮಾಡಿಕೊಂಡಂತ system ಒಳಗಿನ ವಿಚಾರಗಳನ್ನ ಅದೆ system ನ ವಿಚಕಾರಗಳೊಟ್ಟಿಗಷ್ಟೇ ನೀವು ಹೋಲಿಕೆ‌ ಮಾಡಿಯೋಇನ್ನೇನೋ ಮಾಡಿಯೋ ಮಾತಾಡಲಿಕ್ಕೆ ಸಾಧ್ಯ. Wait!'

ಸದಾನಂದ ಮೇಲೇನೋ‌‌‌ ನೋಡುತ್ತಾ ಕುಳಿತ. ಹನಿಯೊಂದು ತಲೆಯ ಮೇಲೆ‌ ಟಪ್ಪೆಂದು ಉದುರಿತ್ತು.

'I understand that all the conflicts that are arising are because of such an indifference in the basic assumptions. For instance: the axioms of one religion are different from that of the other and hence an indifference, intolerance. But what I wanted to tell is that we should see it from that Eucledian point of view that, you should simply be within your set of axioms and it is no way meaningful in comparing the truth and falsity of statements in both the systems. They may be true because of their axioms, and you may be because of yours. The absolute truth loses its meaning unless you both have got a common axiomatic system! I don't know, I am going nowhere. But Mathematics teaches such an outlook towards life'.

 

'But.. Emotions... ಲಾಜಿಕ್‌ನ ಹಿಡಿತಕ್ಕೆ ಅವೆಂದೂ ಸಿಗೋದಿಲ್ಲ ಅನ್ನಿಸತ್ತೆ ಸದಾನಂದ. ನೀನು ಈಗ ಇರೋನು ಇನ್ನೊಂದು ಕ್ಷಣದಲ್ಲೇ ನೀನಾಗಿಲ್ಲದೆ ಇರಬೋದು. ನಿನ್ನ Axioms ಏನು ಅನ್ನೋದೆ ನಿನಗೆ ತಿಳೀದೇ ಇರಬೋದು - consciously. ಯಾವುದೋ ಅನಿಯಂತ್ರಿತ ಶಕ್ತಿಯೋ (of course that I call the social force) ನಿನ್ನನ್ನ ನಡೆಸ್ತಾ ಇರತ್ತೆ. ನಿನ್ನ ಇಷ್ಟ ಕಷ್ಟಗಳೇನುನಿನ್ನ ಬೇಕು ಬೇಡಗಳೇನು ಅವೆ ತಲೆಬುಡವಾಗಿ ನೀನು ಕಕ್ಕಾಬಿಕ್ಕಿಯಾದ ಸನ್ನಿವೇಶಗಳೇ ಇವೆಯಲ್ಲನಿನ್ನ ಅಹಂನಿನ್ನ ಕರುಣೆ ಇನ್ನೂ ಏನೇನೋ ನಿನಗೇ ತಿಳಿಯದ ನಿನ್ನ ಎಮೋಷನ್ಸ್ ನಿನ್ನನ್ನ ಲಾಜಿಕಲ್ ಆಗಿ ನಡೆಯೋದಕ್ಕೆ ಬಿಡೋದಿಲ್ಲ. ಅಲ್ವಾನನಗೆ ಈ ದೇವರುಮತರಾಜಕೀಯ ಇವುಗಳನ್ನ ಚರ್ಚಿಸೋದ್ರಲ್ಲಿ ಆಸಕ್ತಿಯಿಲ್ಲ. ಇವುಗಳೊಟ್ಟಿಗೆ ಈ 'ನಂಬಿಕೆಅನ್ನೋ ಪದವನ್ನ ತಳುಕು ಹಾಕ್ಲಿಕ್ಕೂ ನನ್ನ ಮನಸ್ಸಿಗೆ ಆಯಾಸದ ಕೆಲಸ. ಸ್ಪಿನೋಜ ಸೋತಿದ್ದು ತಿಳಿದೇ ಇದೆ. '

 

'I totally agree with you Phani! ಈ ವಿಚಾರದಲ್ಲಿ ನಾವೇನೇ ಮಾತನಾಡಿದ್ರು ನಮ್ಮ ನಮ್ಮನ್ನೇ reference ಆಗಿ ಇಟ್ಟುಕೊಂಡಿರ್ತೇವೆ. But I feel that you should worry about God! You cannot leave it escape so easily man! At least ನನ್ನ case ನಲ್ಲಿ ದೇವರನ್ನ‌ ನಾ ಅಷ್ಟು ಸುಲಭವಾಗಿ ಬಿಡಲಿಕ್ಕೆ ಸಾಧ್ಯವೇ ಇಲ್ಲ.‌ ನನ್ನ ಪ್ರಜ್ಞೆನನ್ನ ಲಾಜಿಕ್ ಎಲ್ಲವನ್ನೂ ಪದೇ ಪದೇ ಹೀಯಾಳಿಸುವ ವ್ಯವಸ್ಥೆಯೊಂದರ ಸುಳಿಯಲ್ಲಿ ಇಷ್ಟು ಕಾಲವೂ ನಾನು ಸಿಕ್ಕಿಬಿದ್ದದ್ದು ನನಗೆ ಅದು ಅನಿವಾರ್ಯವಾಗಿದೆ!  ದೇವರು ಸಾಕಷ್ಟು ವ್ಯಾಪಾರಗಳಸಾಕಷ್ಟು ಹೀರಾರ್ಕಿಯಹಿಪಾಕ್ರಸಿಯ ಸಾಧನವಾಗಿಹೋಗಿದ್ದಾನೆ. ಅದಕ್ಕಾದರೂ ದೇವರನ್ನ ಅಷ್ಟು ಸುಲಭವಾಗಿ ಬಿಡಕೂಡದು.'

 

ಮಳೆ ಜೋರಾಗಿ ಸುರಿಯುತ್ತುಲಿತ್ತು. ಅದಾಗಲೇ ಕತ್ತಲಾಗಿಹೋಗಿತ್ತು. ಟಾರ್ಪಲ್ಲಿನ ತೂತುಗಳಿಂದ ನೇರ‌ತಲೆಯ ಮೇಲೆ‌ಹನಿಗಳು ಟಪ್ಪಿಸುತ್ತಿದ್ವು. ಛಳಿಯ ನಡುವೆಯೂ ಸದಾನಂದನ ಮೈ ಬೆಚ್ಚಗಾಗಿತ್ತು. ಇಂತಹ ಸಂದರ್ಭದಲ್ಲಿ 'I love your warm body' ಎಂದು ತನ್ನ ಹೆಂಡತಿ ತನ್ನನ್ನ ತಬ್ಬಿ ಮಲಗಿದ್ದು ನೆನಪಾಗದೇ ಇರುತ್ತಿರಲಿಲ್ಲ. ಇಬ್ಬರೂ ವಾಪಸ್ ನಡೆದು ಹೋಗಲು ತೀರ್ಮಾನಿಸಿದರು. ಕ್ಯಾಂಪಸಿನ ಮೇನ್ ರೋಡು. ಸಾಲಾಗಿ ನಿಂತಿದ್ದ ಎರಡು ಭುಜಗಳ ಲ್ಯಾಂಪ್ ಪೊಸ್ಟ್ ಗಳು.  ಎರಡು ಪಥದ ರಸ್ತೆ. ಅತ್ತ ಇತ್ತ ಫುಟ್ ಪಾತ್. ತಾನು ಎಂ.ಎಸ್ಸಿ ಓದುವಾಗ ಇದ್ಯಾವುದೂ ಇರಲಿಲ್ಲ. ರೋಡಿನಲ್ಲಿಬ್ಬರೆ ಯಾವುದೋ ಪೇಂಟ್ ವರ್ಕ್ ದೃಶ್ಯದ ಹಾಗೆ ಭಾಸವಾಯಿತು!  ಎಲ್ಲವೂ ಹೀಗೆ ಇದು ಇಲ್ಲೇ ಕಾಲ freeze ಆಗಿ‌ಹೋಗಲಿ ಎಂದು ಒಂದು ಕ್ಷಣಕ್ಕಾದರೂ ಸದಾನಂದನ ಮನಸ್ಸಲ್ಲಿ ಅನ್ನಿಸಿದ್ದುಂಟು.‌‌ ಕ್ಷಣಮಾತ್ರದಲ್ಲೇ ಅನಂತಾನಂತ ತೃಪ್ತಿಯನ್ನ ನೀಡಿದ್ದ ಆ ಭಾವ ಮಾಯ. ಅದನ್ನ ಮತ್ತೆ ತರಿಸಿಕೊಳ್ಳೋದು‌ ಹೇಗೆಸದಾನಂದ ಹೆಣಗಾಡಿದ. ವಾಸ್ತವ ಇದ್ದಕ್ಕಿದ್ದ ಹಾಗೆ ಮಳೆಯಂತೆ ರಾಚಿತು. ಕೋರ್ಸ್ ವರ್ಕ್, NAAC work - ಸುಳ್ಳು ಬೊಗಳೆಬೊಬ್ಬೆಕಾಲೇಜು - ಇಷ್ಟವಿಲ್ಲದ ನಗುಹಳಸಿದ ಹಾಸ್ಯಜೋಕರ್ ಮುಖಏನಿದು ಏನಿದುತಾನ್ಯಾರುಇದೆಲ್ಲಾ ಯಾಕೆಎಂದು ಕೊನೆಗೆ ಬಂದು‌ ನಿಲ್ಲುವ ಪ್ರಶ್ನೆ. ಈ ಹಿಮಪಾತದ ಎದುರು ತಾನು ಬ್ರಹ್ಮಾನಂದವೆಂದು ಕರೆದುಕೊಳ್ಳುವ ಆ ಭಾವ ಹೇಗಾದರೂ ತೂರಲು ಸಾಧ್ಯವೇ ಎಂದು ಹವಣಿಸುವ ಸದಾನಂದ.‌ ಮೇಲಿಂದ ರಾಚುವ ಮಳೆ.

 

'ಫಣಿಇಲ್ಲೇ ಕೂರೋಣವೇ?'

 

'ಮಳೆಯಲ್ಲೇ?'

 

'Yes. I feel heavy'.

 

'Fine'

 

ಅಲ್ಲೆ ಫುಟ್ ಪಾತಿನ ಮೇಲಿದ್ದ ಕಲ್ಲುಬೆಂಚಿನ ಮೇಲೆ ಇಬ್ಬರೂ ಕುಳಿತರು. ಎದುರಿಗೊಂದು ಲ್ಪಾಂಪ್ ಪೋಸ್ಟ್. ಮಳೆಯ ಹನಿಗಳನ್ನ‌ ಅದರ ಬೆಳಕಿನ ಹಿನ್ನಲೆಯಲ್ಲಷ್ಟೆ ನೋಡಲು ಸಾಧ್ಯ‌. ಬಿಟ್ಟರೆ ಅವು ನೆಲಕ್ಕೆ ಬಡಿಯುವ ಸದ್ದುಹಾಗೆ‌ ತಮಗೆ ರಾಚಿದ ಸ್ಪರ್ಶ. . ತಲೆ ಕೆಳಗೆ ಕೈಯೊರಗಿಸಿಮುಖ ಮೇಲೆ ಮಾಡಿ ಮಳೆಗೆಯೊಡ್ಡಿ ಸದಾನಂದ ಕೂತ.ಇಬ್ಬರೂ ಮಾತಿಲ್ಲ. ಮಾತಿಗೆ ಆಸ್ಪದವೂ ಇಲ್ಲದ ವೇಳೆ! ಕೇವಲ ಆ ಸಮಯದಸನ್ನಿವೇಶದ ಅನುಭವ.

 


No comments:

Post a Comment