"ವಾ.. ಯಾರ್ ಹೇಳಿದ್ದು?”
“ಯಾರ್ ಯಾಕ್ ಹೇಳ್ಬೇಕ್ರೀ. ನಮ್ ಏರಿಯಾ ಮೋಟನ್
ಬಗ್ಗೆ ಬೇರೆ ಯಾರೋ ಯಾಕ್ರೀ ಹೇಳ್ಬೇಕು?”
“ನಿಮ್ ಏರಿಯಾದವ್ನು ಅಂತೀರಿ. ಆದ್ರೂ ಅವ್ನನ್ನ
ಸರಿಯಾಗಿ ಅರ್ಥಾನೆ ಮಾಡ್ಕೊಂಡಿಲ್ವರೀ”
“ಏನ…?”
“ಇನ್ನೇನ್ ಮತ್ತೆ. ಸುಮ್ನೆ ಬೊಗಳೆ ಬಿಟ್ಕೋತಾ
ಕೂಡ್ಬೇಡಿ. ನನ್ ಕೇಳಿ”
“ಯಾಕ್ಲಾ ತಿಕಾ ಕಡಿತದಾ? ಏನೇನೋ ಮಾತಾಡ್ತಿದೀಯಾ? ಮುಚ್ಕಾಂಡ್ ನಿಮ್ ಏರಿಯಾಕ್ ಹೋಗ್ಬಿಡು. ಏನೋ ಮೋಟನ್ ಜೊತೆ ಓಡಾಡ್ತಿದ್ದೆ ಅಂತ ಸುಮ್ನಿದೀವಿ ಅಷ್ಟೆ. ನಿಂಗೇನ್ಲಾ ಗೊತ್ತು?”
“ಏಯ್! ತಿಕಾ ಮುಚ್ಕೊಂಡ್ ಸರಿಗ್ ಮಾತಾಡು
ಗಾಮಾಡ್. ಎಷ್ಟ್ ಸತೀನೋ ಮೋಟನ್ ಜೊತೆ ಎಣ್ಣೆ ಹಾಕಿದೀಯ ನೀನು? ನಾವು ಕಾಲೇಜ್
ಓದ್ಬೇಕಾದಾಗ್ಲಿಂದೇನೆ ಎಣ್ಣೆ ಹಾಕದೇ ಇರೋ ದಿನವೇ ಇಲ್ಲಾ”
“ಲೇ! ಮುಚ್ಚಾ ಮುಚ್ಚಾ.. ಬೊಕಳೇ ಬಿಡ್ಬೇಡಾ ಈಗ
ನೀನು ಬೊಕಳೆ ದಾಸಪ್ಪ. ಮೋಟಾ ಹೇಳ್ತಾನೆ ಇದ್ದ ಯಾವಾಗ್ಲೂ, ಫಳಾಂಗ್ ನನ್ಮಗ ನೀನು.
ಬರೀ ಬೊಕಳೇ ಬಿಡ್ತೀಯ ಅಂತ. ಬಡ್ಡಿ ಮಗನೆ ಹಂಗೆ
ತಾನೆ ಆ ಪಾರುನ ನೀನು ಬೀಳುಸ್ಕೊಂಡೀದ್ದು. ಬೋಳಿ ಮಗನೆ. ಮೋಟನ್ ಬಗ್ಗೆ ಮಾತಾಡಕ್ ಬರ್ತಾನೆ.
ಅವ್ನ್ ಡವ್ ನ ಎಗುರುಸ್ಕೊಂಡ್ ಹೋಗ್ಬಿಟ್ಟು”
“ಸೂಳೇ ಮಗನೇ.. ನೀನೇನ್ ಕಡೀಮೆನಾ.. ಮೋಟನ್ನ
ಹೆಂಗೆಲ್ಲಾ ಬಳಸ್ಕೊಂಡೆ ನೀನು ಅಂತ ಅವ್ನೇ ಎಷ್ಟೋ ಸಾರಿ ಹೇಳ್ತಿದ್ದ ನಂಗೆ”
“ನಿಮ್ಮವ್ವನ್.. ತಿಕಾ ಅಮಿಕ್ಕಂಡ್ ಹೋಗ್ಬಿಡು.
ಎದ್ರುಸಿ ಎದೆಗೊದ್ದಾ ಅಂದ್ರೆ ಕರ್ಳು ಗಿರ್ಳು ಎಲ್ಲಾ ಆಚೀಕ್ ಬಂದ್ಬಿಡ್ಬೇಕು. ಬೋಳಿಮಗನೆ”
“ಹೊಡಿಯೋ... ಹೋಡಿಯೋ ಹಡಾಳ್.. ಶಂಡ
ಸೂಳೇಮಗನೆ.. ಹೊಡಿಯೋವ್ನಾಗಿದ್ರೆ ಯಾವತ್ತೊ ಮೋಟನ್ಗೋಸ್ಕರ ಹೊಡಿಬೇಕಿತ್ತು. ಹೆದ್ರುಪುಕ್ಕಲ
ಮುಂಡೇದು ಮೋಟನ್ನೊಬ್ಬನ್ನೇ ಬಿಟ್ಟು ಓಡೋಗಿದ್ಯಲ್ಲ ಅವತ್ತು. ಅವತ್ತೆಲ್ಲೋಗಿತ್ತೋ ನಿನ್
ಗಂಡುಸ್ತನ. ಗಾಂಡು..”
“ಗಾಂಡೂ ಅಂತೀಯಾ.. ನಿಮ್ಮಪ್ಪ ಗಾಂಡು.. ಬ್ಯಾಡ
ನೋಡು.. ತಿಕ ಮೊಕ ನೋಡದೆ ಹೋಡಿತೀನಿ”
“ಹೊಡಿಯೋ.. ಹೇ ಹೊಡಿಯೋ.. ಹೋಡಿಯೊ ಲೋ
ಗಾಂಡು.. ಗಾಂಡು.. ಹೋಡಿಯೋಲೋ ನೋಡೇಬಿಡೋಣಾ”..
***
ಠಣ್... ಠಳಾರ್.. ಠಳೀರ್...*** ಗಾಜಿನ
ಸದ್ದು
“ಬೋಳಿಮಗನೆ ಹೊಡಿದೇಬಿಟ್ಯೇನೋ.. ಅಯ್ಯೋ
ರಕ್ತ.. ಸೂಳೇಮಗನೇ.. ತೆಗೋ..”
** ಠಣ್.. ಠಳಾರ್.. ಠಿಳೀರ್.. *** ಗಾಜಿನ
ಸದ್ದು
********* ಕಿಯ್ಯಾಂ.. ಕಿಯ್ಯಾಂ...
ಕಿಯ್ಯಾಂ... ******** ಆಂಬುಲೆನ್ಸ್ ಸೈರನ್
“ಇದೀಗ ಬಂದ ಸುದ್ದಿ.. ನಗರದಲ್ಲಿ ಎರಡು
ಗುಂಪಿನ ನಡುವೆ ಘರ್ಷಣೆ ನಡೆದಿದ್ದು ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಒಬ್ಬರಿಗೊಬ್ಬರು
ಬಾಟಲಿಗಳಲ್ಲಿ ಹೊಡೆದುಕೊಂಡರೆಂದು
ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಆಂಬುಲೆನ್ಸ್ ನಲ್ಲಿ ಸಾಗಿಸುವಾಗ ಇಬ್ಬರೂ ಮಾರ್ಗ
ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ಬನ್ನಿ ಈ
ಕುರಿತಾಗಿ ಪ್ರತ್ಯಕ್ಷದರ್ಶಿಯಾದ ಮಾರ ಅವರಿಂದ
ಹೆಚ್ಚಿನದಾಗಿ ತಿಳಿಯೋಣ”
“ಮೇಡಾಮ್.. ನಂಗೆ ಇಬ್ರೂ ಬೇಕಾದವ್ರೇಯಾ..
ಇಬ್ರು ಒಳ್ಳೆವ್ರೇ.. ಅದ್ಯಾಕಂಗಾಡುದ್ರೋ ಗೊತ್ತಿಲ್ಲಾಪ್ಪ. ಏನೋ ಹಳೇ ದ್ವೇಸ. ಕುಡಿದು
ಕುಡಿದು ಬೋಳಿಮಕ್ಳು ಎಲ್ಲಾ ನಿಜಾನೂವೇ
ಹೇಳ್ಕಾಂಡ್ ಹೊಡ್ಕಾಂಡ್ ಸತ್ರು ಅಷ್ಟೆ”
***** ಕಕ್ ಚಿಕ್*** ಕ್ಯಾಮೆರ ಆಫ್ ಆದ
ಸದ್ದು.
ಮಾರನ್ನ ನಿಜ ಏನು ಕೇಳ್ಬೇಕಿದೆ – “ಲೇ ಮಾರ
ನಿಜ ಯೋಳ್ಳಾ ಏನಾಯ್ತು ಅಂತ”
“ಏನಿಲ್ಲಾ ಕಲಾ.. ಕುಡುಕ್ ಮುಂಡೇವು.. ಮೋಟ
ಸತ್ತೋದ್ನಲ್ಲಾ. ಅವಂದು ದೊಡ್ಡು ಫ್ಲಕ್ಸ್ ಮಾಡ್ಸುವ ಅಂತ ಇದ್ವಿ.. ಅದ್ರು ಮೇಲೆ ಮತ್ತೆ ಹುಟ್ಟಿ
ಬಾ ಗೆಳೆಯ ಅಂತ ಹಾಕ್ಸಿ – “ರಮ್ ಮೋಟಾ” ಅಂತ ಬರಿಯೂಣ ಅಂತಾ ಇದ್ವಿ. ಆ ರಾಕಿ ಬಂದ ಕಲಾ.. ಮೋಟಂಗೆ
ರಮ್ ಅಲ್ಲಾ ವಿಶ್ಕಿ ಇಷ್ಟಾ ಇದ್ದಿದ್ದು ಅಂತ
ಸುರು ಮಾಡ್ದ ಕಲಾ.. ಅಷ್ಟೇಯಾ.. ರಮ್ಮು ಇಲ್ಲಾ ವಿಶ್ಕಿಯೂ ಇಲ್ಲ. ಬಾಟ್ಲುಗಳು ಹೊಡ್ದೋದ್ವು..ರಾಕೀನೂ
ಸತ್ತಾ ಕೆಂಚಾನೂ ಸತ್ತಾ..”
“ಅವ್ನನ್ ಯಾರ್ಲಾ ಕರ್ದಿದ್ದು?”
“ನಾನೇ ಕಲಾ.. ಡ್ರಿಂಕ್ಸ್ ಪಾರ್ಟಿ ಅದೆ ಅಂತ
ಯೋಳ್ದೆ ಒಂದು ಬಾಟ್ಲು ತಕಾ ಬರ್ತಾನೆ ಅಂತ”
“ಥುತ್ ನಿನ್...”
*********
ಎರಡು ಮೂರು ದಿನಗಳ ಹಿಂದೆ ನಡೆದದ್ದು: “ಮೋಟ
ಅಲಿಯಾಸ್ ಸುರೇಶ್ ಕುಮಾರ್, ಗಾಂಧಿನಗರದ ನಿವಾಸಿ.
ಹೆಸರಿಗೆ ಸೈಕಲ್ ಶಾಪಿನಲ್ಲಿ ಮೆಕ್ಯಾನಿಕ್ ಕೆಲಸ. ಆದ್ರೆ ಯಾವಾಗ್ಲೂ ಹುಡ್ಗೀರ ಹಾಸ್ಟಲ್ ಮುಂದೆಯೇ
ಇರ್ತಿದ್ದ. ಹಠಾತ್ತಾಗಿ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ”
***********************************
ಟಿಪ್ಪಣಿ: ಕೆಲವೊಮ್ಮೆ ಯಾವುದೋ ಬೇಡದೆ ಇರೋ
ವಿಷಯದಲ್ಲಿ ತನಗೆ ಹೆಚ್ಚು ತಿಳಿದಿದೆ ಅನ್ನೋದನ್ನ ಪೈಪೋಟಿಗೆ ಬಿದ್ದು ಪ್ರದರ್ಶಿಸುವವರನ್ನ
ನೋಡೀದಾಗ ನನಗೆ ಕೋಪ, ಬೇಸರ ಎರಡೂ
No comments:
Post a Comment