Tuesday, August 23, 2022

ಸ್ವಾರ್ಥ?

ಕ್ಯಾಂಪಾಸಿನ ಖಾಲೀ ರೋಡುಗಳಲ್ಲಿ ಸಂಜೆಯ ವೇಳೆಗೆ ವಾಕಿಂಗ್ ಮಾಡುವುದು ಒಂದು ರೀತಿಯ ನೆಮ್ಮದಿ ಸದಾನಂದನಿಗೆ. ಜೊತೆಗೊಬ್ಬರು ಇರಬೇಕಷ್ಟೇ - ಮಾತಿಗೆ. ಇಲ್ಲಿಯ ಮರಗಳದ್ದು ವಿಶೇಷ ವಾಸನೆ. ತನ್ನ ಎಂ. ಎಸ್ಸಿ ದಿನಗಳಲ್ಲಿ ಕ್ಯಾಂಪಾಸು ವಿಶೇಷವೆನಿಸಿದ್ದು ಈ ಮರಗಳಿಂದಲೇ. ಆ ಎಂ.ಎಸ್ಸಿಯ ದಿನಗಳ ನೆನಪುಗಳನ್ನ ಎಲ್ಲಿಂದಲೋ ಸಂಜೆಯ ತಂಗಾಳಿ ಹೊತ್ತು ತಂದಂತೆ, ಮರಗಳೆಲ್ಲಾ ಅಲುಗಾಡುತ್ತಾ, ಅದೇ ವಾಸನೆ ಮೂಗಿಗೆ ಹೊಡೆಯಲು ಸದಾನಂದ ಉತ್ಸುಕನಾಗುತ್ತಿದ್ದ. ಮಾತು ನಿಯಂತ್ರಣವನ್ನ ಕಳಕೊಂಡು ದಿಕ್ಕೆಟ್ಟು ಹರಿಯುತ್ತಿತ್ತು‌. ಇದಕ್ಕಾಗಿಯೇ ಆತ ಸಂಜೆಯ ವೇಳೆ, ಕ್ಯಾಂಪಾಸಿನ ರೋಡು ಖಾಲೀ ಇದ್ದಾಗ ನಾಗ್ ಜೊತೆ ವಾಂಕಿಂಗ್ ನೆಪದಲ್ಲಿ ಹರಟಲು ಇಚ್ಛಿಸುತ್ತಿದ್ದದ್ದು - ಯಾವ ನಿಯಂತ್ರಣಕ್ಕೂ ಬಾರದೆ, ಯಾವ ದಾಕ್ಷಿಣ್ಯಕ್ಕೂ ಒಳಪಡದೆ, ಯಾವ ಭಯಕ್ಕೂ ಅಂಜದೇ ಹೊರಡುತ್ತಿದ್ದ ಮಾತಿಗಾಗಿ.

'ನಾಗ್...' ಬಾಗಿಲು ಹಾಕಿದ್ದ ಮಲೆಯಾಳಿ ಮುಸಲ್ಮಾನನ ಅಂಗಡಿಯ ಮುಂದೆ ನಿಂತು ಅಲ್ಲೆ ಎದುರಿಗಿದ್ದ ಕಲ್ಲುಬೆಂಚಿನ ಮೇಲೆ ಕೂರೋಣವೆಂದು ಸನ್ನೆ ಮಾಡಿದ.'ಈ ಹೊತ್ತಿಗೆ ಕಾಫಿ ಇಲ್ಲ. ಕೂರು' ಕ್ಯಾಂಪಾಸಿನಲ್ಲಿ ಹುಡುಗರಿಲ್ಲೆಂದ ಕೂಡಲೇ ಅಂಗಡಿಗಳೆಲ್ಲಾ ಬಂದ್. ಮಾತನಾಡೋಣ ಬಾ ಎನ್ನುವ ಯಾವ ಆಮಂತ್ರಣವೂ ಇಲ್ಲದೇ, ಯಾವುದೇ ಮುಜುಗರವೂ ಇಲ್ಲದೇ, ನಾಗ್ ಹುಟ್ಟಿರುವುದೇ ತನ್ನ ಮಾತು ಕೇಳುತ್ತಾ ಹರಟಲಿಕ್ಕಾಗಿ ಎನ್ನುವ ನಂಬಿಕೆ ಉಳ್ಳವನಂತೆ, ಸದಾನಂದ ಮಾತು ಆರಂಭಿಸಿದ.

'ಓಕೆ...ವಿ ಶಲ್ ಗೆಟ್ ಬ್ಯಾಕ್ ಟು ಇಟ್...  ಈ ದೇಶ ಅನ್ನೋದರ ಅವಶ್ಯಕತೆಯೇನು? ಇದು ಬೇಕಿತ್ತಾ? ಎನ್ನೋ ಪ್ರಶ್ನೆಗಳು ಆಗಿಂದ್ದಾಗ್ಗೆ ಕಾಡ್ತಿದ್ವಲ್ಲ. ಹಾಂ ನನಗೆ ಅನ್ನಿಸ್ತದೆ.. ದೇಶ ಅನ್ನೋದು ಆಗೋಗಿದೆ. ಇದು ಬೇಕಿತ್ತಾ ಅಂತ ಈಗ ಕೇಳೋದ್ರಲ್ಲಿ ಅರ್ಥವಿಲ್ಲ - ಯಾಕೆಂದ್ರೆ ಹಾಗೆ ಯೋಚಿಸಿ ತೆಗೆದುಕೊಂಡ ನಿರ್ಧಾರವೇ ಅಲ್ಲ ಇದು. ಇದು ಆಗೋಗಿದೆ - ಅದನ್ನ ಮನಸ್ಸಲ್ಲಿ ತರಿಸಿಕೊಂಡಷ್ಟೇ ಮುಂದಿನ ಚರ್ಚೆ ನಾವು ಮಾಡಬೋದು‌'

'ಹಂ.... ಒಪ್ತೇನೆ... ಇದು ಅಪ್ರಜ್ಞಾಪೂರ್ವಕ ನಿರ್ಧಾರವೂ ಇದ್ದಿರಬೋದು - ಮನುಷ್ಯನ ದುರಾಸೆಯ ಮೂಲಕ ಹುಟ್ಟಿದ್ದಿರಬೋದು. ಅಂದರೆ ಭೂಮಿಯನ್ನ ಅತಿಕ್ರಮಿಸುವ ಕ್ರಿಯೆಯಲ್ಲಿ ಬೌಂಡರಿಗಳು ಒಪ್ಪಂದದ ಮುಖೇನ ಹುಟ್ಟಿದ್ದಿರಬೋದು. ಅಥವಾ ಕೆಲವು ಅಧೀನಕ್ಕೊಳಗಾಗಿರಬೋದು. ಇನ್ಕೆಲವು ನಾಚುರಲಿ. ಅಂದರೆ ಯಾವುದೋ ಒಂದು ಕಾರಣದಿಂದ ಈ ಬೌಂಡರಿ ಹುಟ್ಟಿಯಾಗೋಗಿದೆ. ನಾನು ಪುರಾಣ ಕಥೆಗಳಿಗೆ ಇಳಿಯೋದಿಲ್ಲ - ವಿಕಾಸವಾದವನ್ನ ಓದಿದ್ದವನಾದ್ದರಿಂದ. ಬೇಸಿಕಲ್ಲಿ ಹ್ಯೂಮನ್ ಈಸ್ ಆಲ್ಸೋ ಜಸ್ಟ್ ಲೈಕ್ ಅ ಡಾಗ್‌. ಎ ಕಲ್ಚರಲಿ ಎವಾಲ್ವಡ್ ಡಾಗ್. ಒಂದರ್ಥದಲ್ಲಿ ದೇಶ ಎನ್ನೋದು ಮನುಷ್ಯನನ್ನ ಒಗ್ಗೂಡಿಸುವ ಪರಿಕಲ್ಪನೆ ಅಂತ ಹೇಳಲಿಕ್ಕೂ ಆಗದು. ಏಕೆಂದ್ರೆ ದೇಶಗಳ ಮುಖೇನ ಮನುಷ್ಯರೆಲ್ಲಾ ಭಾಗಗಳಾಗಿ ಹೋಗಿದ್ದೀವಿ. ಅದೊಂದು ಹೊಸ ಐಡೆಂಟಿಟಿ - ದೇಶದ ಒಳಗಿನ ರಾಜ್ಯಗಳ ಹಾಗೆ'

ಹೌದು ನಾಗ್... ನಾ ಅದರ ಬಗ್ಗೆಯೇ ಬರೋನಿದ್ದೆ' ಸದಾನಂದ ಎದ್ದು ಮುಂದಿದ್ದ ಮರದ ಎಲೆಗಳನ್ನ ಕೀಳಲಾರಂಭಿಸಿದ. 'ನಾನು ಹೀಗೆ ಯೋಚಿಸ್ತಿದ್ದೆ ನಿನ್ನ ಮಾತುಗಳ ನಡುವೆ‌. ಈಗ ಈ ದೇಶಗಳ ಅವಶ್ಯಕತೆಯ ಬಗ್ಗೆ ಬರೋಣ. ಅಂದರೆ, ಐಡಿಯಲಿ ದೇಶಗಳ ಅವಶ್ಯಕತೆ ಏತಕ್ಕಿರಬೋದು ಅಂತ. ಈ ಕಾರಣಕ್ಕಾಗಿ ದೇಶಗಳ ರಚನೆಯಾಯಿತೆಂದಲ್ಲ - ಪ್ರಾಯಶಃ ಪ್ರಾಂತಗಳ ರಚನೆಗಳು ಹೀಗಾಗಿದ್ದಿರಬೋದು. ಇಡೀ ಪ್ರಪಂಚಕ್ಕೆಲ್ಲಾ ಒಂದೇ ನಿಯಮ ಇಡಲಿಕ್ಕೆ ಸಾಧ್ಯವಿಲ್ಲ. ಕನಿಷ್ಠ ಪಕ್ಷ ಭೌಗೋಳಿಕ ವಿಭಿನ್ನತೆ ಇರುವುದಿಂದಾದರೂ. ಇಲ್ಲಿ ನಾನು ಸಾಂಸ್ಕೃತಿಕ ಭಿನ್ನತೆಯ ಪರಿಗಣನೆ ತೆಗೆದುಕೊಳ್ಳುತ್ತಿಲ್ಲ. ನನ್ನ ವಾದದ premises ಅಕಸ್ಮಾತ್ ಎಲ್ಲಾ ಮಾನವರು ಸಾಂಸ್ಕೃತಿಕವಾಗಿ ಒಂದೇ ಇದ್ದರೂ ದೇಶದ ಅವಶ್ಯಕತೆ ಇದ್ದಿರ್ತಿತ್ತೆ ಅನ್ನೋದಷ್ಟೆ ನನ್ನ ಜಿಜ್ಞಾಸೆ ಈಗ.‌ ನನಗೆ ಕಟ್ಟ ಕಡೆಯದಾಗಿ ಹೊಳೀತಾ ಇರೋ ಕಾರಣ ಇಷ್ಟೆ - ಎಲ್ಲೆಡೆಗೂ ಒಂದೇ ನಿಯಮ ಅನ್ವಯಿಸಲಸಾಧ್ಯ. ಆಯ ಪರಿಸ್ಥಿತಿಗನುಗುಣವಾಗಿ ನಿಯಮಗಳು - ಕೆಲವು ಬೇಕೆ ಬೇಕಾದ, ಪಾಲಿಸಲೇಬೇಕಾದ ನಿಯಮಗಳನ್ನ ಬಿಟ್ಟು. ಇಡೀ ಮನುಕುಲಕ್ಕೆ ಕೆಲವು absolute ನಿಯಮಗಳನ್ನ ಬಿಟ್ಟು ಮತ್ತೆಲ್ಲವೂ ಆಯಾ ಪ್ರದೇಶದ ಅನುಸಾರ ಇರುವಂತಾ ನಿಯಮಗಳು. ಅಂದರೆ ಪ್ರದೇಶಗಳ ಅವಶ್ಯಕತೆಯುಂಟು. ಈಗ ಈ ರೀತಿಯ ಪ್ರದೇಶಗಳನ್ನ ಮಾಡಿಕೊಳ್ಳುವಾಗ, practically, ನಾವು ಇನ್ನಿತರ ವಿಚಾರಗಳಾದ ಸಂಸ್ಕೃತಿ, ಭಾಷೆ, civilisation status, ಇನ್ನಿತರೆಗಳನ್ನ ಗಣನೆಗೆ ತೆಗೆದುಕೊಂಡರೆ ಒಂದಷ್ಟು ಭೂಭಾಗದ ಜನರಲ್ಲಿ ಕಂಡುಬರುವ ಸಾಮ್ಯತೆಯ ಅನುಸಾರ ಅದನ್ನೊಂದು ಪ್ರದೇಶವೋ ದೇಶವೋ ಕರೆಯೋದು. ಆದರೆ ನೋಡು ಇದು ಮತ್ತಷ್ಟು decentralizationಗೆ ಒಳಪಡಬೋದು, ಒಳಪಡುತ್ತದೆ. ಎಲ್ಲಿಯವರೆಗೆ ಎಂದರೆ ಒಂದು ಮನೆಯವರೆಗೆ ನೀನು decentralization ವಾದವನ್ನ ಎಳೆಯುತ್ತಾ ಹೋಗಬೋದು‌. ಆದರೆ ಅಷ್ಟೆಲ್ಲಾ ನಿಯಮಗಳ ಅವಶ್ಯಕತೆಯಿಲ್ಲ ಮನುಷ್ಯನಿಗೆ. ಈ ನಿಯಮಗಳೆಲ್ಲಾ ಏತಕ್ಕಾಗಿ? Basically it is that we all want to live peacefully. ಅಂದರೆ ಐಡಿಯಲಿ ಕೂಡ ದೇಶದ ಅವಶ್ಯಕತೆಯಿದೆ'.

'ಹಂ...' ಎನ್ನುವ ನಾಗ್ ನ ಹೂಂಕಾರ ಎಲ್ಲವನ್ನೂ ಒಪ್ಪಿದ್ದೇನೆನ್ನುವುದರ ಸೂಚಕವಾಗಿರುತ್ತಿರಲಿಲ್ಲ. 'ಈಗ ಅದೆಲ್ಲಾ ಬಿಡೋಣ. ದೇಶ ಯಾವುದೋ ಕಾರಣಕ್ಕಾಗಿ ರಚನೆಯಾಗಿಹೋಗಿದೆ ನೀ ಹೇಳಿದಂತೆ. ಈಗ ನಾವೆಲ್ಲರೂ ಸಾಮರಸ್ಯದಿಂದ, ಯಾವುದೇ ಜಗಳಗಳಿಲ್ಲದೆ, ನಮ್ಮ ನಮ್ಮ ಬದುಕುಗಳನ್ನ ಉತ್ತಮವಾಗಿ ಬದುಕುವೆಡೆಗೆ ಪ್ರಯತ್ನಿಸೋದು ಎಲ್ಲರ ಧ್ಯೇಯ ಎಂದುಕೊಳ್ಳೋಣ. ಹೀಗೆ ನೋಡಿದಾಗ ದೇಶ, ರಾಜ್ಯಗಳು ಹೊಸ ಹೊಸ ಐಡೆಂಟಿಟಿಗಳನ್ನ ಹುಟ್ಟು ಹಾಕ್ತವೆ. ಜನರನ್ನ ಪ್ರತ್ಯೇಕಿಸುವ ಈ ಐಡೆಂಟಿಟಿಗಳು ಎಂದಿಗೂ ಕಾಂಪಿಟಿಷನ್, ಹೋಲಿಕೆಗಳಿಂದ ಮುಕ್ತವಲ್ಲ. ದೇಶದಲ್ಲಿ ನಮ್ಮ ರಾಜ್ಯವೇ ನಂಬರ್ ಒನ್ ಆಗಬೇಕೆನ್ನುವ ಅಭಿಪ್ರಾಯವನ್ನ ರಾಜ್ಯದ ಚುಕ್ಕಾಣಿ ಹಿಡಿದವರೇ ತುಂಬುವಾಗ ಈ ಹೊಸ ಐಡೆಂಟಿಟಿ ಸೆಪೆರೇಟ್ ಮಾಡುವೆಡೆಗೆಯೇ ಹೊರಳುತ್ತದೆ.  ಇಲ್ಲಿಂದ ಮುಂದಿನ‌ ಐಡೆಂಟಿಟಿ (ಇದೇ ಮೊದಲನೆಯದ್ದು) ನಾನು ಭಾರತೀಯ. ಇದು ನನ್ನನ್ನ ಭಾರತೀಯನಲ್ಲದವನಿಂದ ಸೆಪೆರೇಟ್ ಮಾಡಿಯೇ ತೀರುತ್ತದೆ ಎಂದಿಗೂ.ಲೆಟ್ ಅಸ್ ಬಿ ಪ್ರಾಕ್ಟಿಕಲ್ ಸದಾ. ಈ ದೇಶ, ರಾಜ್ಯದ ಐಡೆಂಟಿಟಿಗಳು ಮನುಷ್ಯರನ್ನ ಸೆಪೆರೇಟ್ ಮಾಡುತ್ತವೆಯೇ ಹೊರತು ಒಂದು ಮಾಡುವುದಿಲ್ಲ'

'ವೇಟ್ವೇಟ್ ನಾಗ್.‌‌ ಅಫ್ ಕೋರ್ಸ್ ಐ ವಾಂಟ್ ಟು ಬಿ ಪ್ರಾಕ್ಟಿಕಲ್. ಈಗ ನಾವುಬ್ಬರೂ ಒಪ್ಪಿದಂತೆ ದೇಶ ಸೃಷ್ಟಿಯಾಗಿ ಹೋಗಿದೆ. ನಾನು ಭಾರತೀಯ ಎನ್ನೋದು ನಿಜವಾಗಿಯಾಗಿ‌ ಹೋಗಿದೆ. ನನ್ನನ್ನ ಬೇರೆಯವ ಅತಿಕ್ರಮಣ ಮಾಡಿದರೆ, ಇನ್ನು ಮುಂದೆ ನಾವೆಲ್ಲರೂ ಸೇರಿ ಒಪ್ಪಿ ನಿರ್ಣಯಿಸಿಕೊಂಡ ನಿಯಮಗಳನ್ನ ಹೂತುಹಾಕಿ, ಆತ ಹೇಳಿದ್ದನ್ನ ಕೇಳಲೇಬೇಕಾದ ಸ್ಥಿತಿ ಉಂಟಾಗುತ್ತದೆ. ಇದು ಆಗಕೂಡದು. ಇದು ಆಗಕೂಡದಾದರೆ ನಾವೆಲ್ಲರೂ ಒಂದಾಗಬೇಕು. ಒಂದಾಗುವುದು ಹೇಗೆ. ದೇಶವೇ ನಮ್ಮ ಕಲ್ಪನೆ. ನಮ್ಮೆಲ್ಲರನ್ನೂ ಒಂದಾಗಿಡಲಿರುವುದೇ ದೇಶದ ಸಾಂವಿಧಾನ.  ನಮ್ಮ  ನಮ್ಮೊಳಗೆ ಏನೇ ಇರಲಿ, ಎಷ್ಟೇ ಇರಲಿ. ದೇಶದ ರಕ್ಷಣೆಯೆಂದರೆ ನಮ್ಮ ರಕ್ಷಣೆ. ಅಫ್ ಕೋರ್ಸ್ ನಮ್ಮದ್ದು ಎಂದರೆ ನಮಗೆ ಬದುಕಲು ಬೇಕಾಗುವ ಎಲ್ಲಾ resources ನ ರಕ್ಷಣೆ. ಯಸ್, ಲೆಟ್ ಅಸ್ ಬಿ ಪ್ರಾಕ್ಟಿಕಲ್. ದೇಶವೆನ್ನುವ ಕಲ್ಪನೆಯೇ ಈಗ ನಮ್ಮೆಲ್ಲರನ್ನೂ ಒಂದು ಮಾಡುವುದು. ಈಗ ಈ ದೇಶದ ರಕ್ಷಣೆಯಷ್ಟೇಯಲ್ಲ, ಹಲವಾರು ಮಜಲುಗಳಲ್ಲಿ ಯೋಚಿಸಿದ್ದೇ ಆದಲ್ಲಿ, ಯಾವುದೇ ಕ್ಷೇತ್ರದಲ್ಲಿ ಇನ್ನಿತರ ದೇಶಗಳ ನನ್ನನ್ನ ಅಲುಗಾಡಿಸಲಿಕ್ಕೆ ಸಾಧ್ಯವಾಗದ ಮಟ್ಟಿಗೆ ನಾ ಬೆಳೆಯುವುದೂ ಅತ್ಯವಶ್ಯಕ - ಅಂದರೆ ನಂಬರ್ ಒನ್ ಆಗುವುದು. ಅದಕ್ಕಾಗಿ ನಾನು ದೇಶದ ಕಲ್ಪನೆಯನ್ನ ಉಸಿರಾಗಿಸಿಡೋದು ಅವಶ್ಯಕ. ದೇಶಭಕ್ತಿ ತುಂಬೋದು ಅವಶ್ಯಕ, ದೇಶಪ್ರೇಮನ್ನ ಹಸಿರಾಗಿಡೋದು ಅನಿವಾರ್ಯ‌,' ಒಂದೇ ಉಸಿರಿನಲ್ಲಿ ಸದಾನಂದ ಹೇಳಿ ಮುಗಿಸಿದ.

 

'ಹಂ..... ಸೀಮ್ಸ್ ಪ್ರಾಕ್ಟಿಕಲ್..' ನಾಗ್ ಮತ್ತೇನೋ ಮುಂದುವರೆಸುವ ಮುನ್ನವೇ ಸದಾನಂದ ಮತ್ತೆ ಆರಂಭಿಸಿದ 'ನೀನು ಐಡಿಯಾಲಜಿ ಇಟ್ಕೋಬೋದು ನಾಗ್, ಮನುಷ್ಯರನ್ನೆಲ್ಲಾ ಹಿಡಿದಿಡಬೇಕಾದ ಒಂದೇ ಅಂಶ ನಾವೆಲ್ಲರೂ ಮನುಷ್ಯರೆನ್ನೋದು ಅಂಶ. ಆದರೆ ಪಕ್ಕದವನದನ್ನ ಕೇಳಬೇಕಲ್ಲ ನಾಗ್. ಯು ಆರ್ ಟೂ ಐಡಿಯಾಲಾಜಿಕಲ್ ಅಂಡ್ ಸಿಂಪ್ಲಿ ಫ್ರೇಮ್ ಎ ಥಿಯರಿ ಸಿಟ್ಟಿಂಗ್ ಸಮ್ ವೇರ್ ಆನ್ ದಿಸ್ ಸ್ಟೋನ್ ಬೆಂಚ್' ಸದಾನಂದ ನಕ್ಕ

 

'ಹಾ ಹಾ.. ಇದ್ದಿರಬೋದು. ಹಾಗಿದ್ದರೆ ನಾವೆಲ್ಲಾ‌ ಮುಷ್ಯರು. ಬನ್ನಿ ವಿಶ್ವಮಾನವರಾಗೋಣ ಅನ್ನೋದನ್ನಾದರೂ ಹೇಳೋದನ್ನ ಬಿಡಿ ಹಾಗಿದ್ರೆ. ಬಿಕಾಸ್ ನೀ ಹೇಳಬೋದು. ಪಕ್ಕದೋನು ಕೇಳಬೇಕಲ್ಲ? ಅವನ ಒಕ್ಕೂಟದ ಐಡಿಯಾಲಾಜಿಯೇ ಬೇರೆಯಾಗಿದ್ದರೆ ನೀ ಹೇಳಿದಂತೆ. ಐ‌ಮೀನ್ ದೀಸ್ ಟೂ ನೆವರ್ ಗೋ ಟುಗೆದರ್ - 'ಕಂಟ್ರಿ ಅಂಡ್ ವಿಶ್ವಮಾನವ'. ವಾಟ್ ಐ ವಾಂಟೆಡ್ ಟು ಕನ್ವೆ ಹ್ಯಾಸ್ ಆಕ್ಚುಯಲಿ ಬೀನ್ ಕನ್ವೇಡ್ ಬೈ ಯು. ದೇಶ, ದೇಶಭಕ್ತಿ, ದೇಶಪ್ರೇಮ ಒಂದು ಸಮೂಹದ ಸ್ವಾರ್ಥ. ಐ ಮೀನ್ ಐ ಆಮ್ ಡೌಟಿಂಗ್ ಇಫ್ ಸೆಲ್ಫಿಷ್ ಜೀನ್ ಥಿಯರಿ ಆಫ್ ಡಾಕಿನ್ ಹ್ಯಾಸ್ ಗಾಟ್ ದಿಸ್ ಅನಲಾಗ್ ಸೆಲ್ಫಿಷ್ Meme ಥಿಯರಿ. ಒಂದು ಗುಂಪಿನ ಸ್ವಾರ್ಥಕ್ಕಾಗಿಯೇ ದೇಶ, ದೇಶಭಕ್ತಿಯೆನ್ನುವ Meme?'

ಮಾತಿಗೆ ಯಾವ ಎಲ್ಲೆಯೂ ಇಲ್ಲದ್ದರಿಂದ ಇಬ್ಬರ ಮಾತುಗಳು ದಿಕ್ಕೆಟ್ಟು‌ ಹರಿದು, ದಾರಿ ತಪ್ಪಿದ್ದಾಗಿತ್ತು. ಸದಾನಂದನಿಗೆ ಯಾವ ವಿಚಾರಕ್ಕಾಗಿ ಇಬ್ಬರೂ ವಾದಿಸುತ್ತಿದ್ದೇವೆ ಎನ್ನೋದು ಅನುಮಾನ ಮೂಡಿತು.

'ದೇಶ, ದೇಶಭಕ್ತಿ ಸ್ವಾರ್ಥವೇ? ಹಾಗಿದ್ದರೆ ಅದು ವಿಕಾಸವೇ ನಿರ್ಮಿಸಿದ ಅನಿವಾರ್ಯತೆ. ಅನಿವಾರ್ಯತೆಯನ್ನ ನೀನು ತಪ್ಪು ಎನ್ನಲಿಕ್ಕೆ ಅಸಾಧ್ಯ. ದೇಶ, ದೇಶಭಕ್ತಿಯನ್ನ ನೀನು ಎಷ್ಟೇ ಇರಕೂಡದೆನ್ನೋದಕ್ಕೆ ವಾದ ಮಾಡಿದರೂ, ಅದು ವಿಕಾಸವೇ ಹುಟ್ಟುಹಾಕಿದ ಅನಿವಾರ್ಯತೆ' ಸದಾನಂದ ಯೋಚಿಸಲಾರಂಭಿಸಿದ.

'ನನಗನ್ನಿಸೋದಿಷ್ಟೇ ಸದಾ.‌ ಭಾರತ್ ಮಾತಾಕೀ ಜೈ ಎನ್ನುವ ದೇಶಪ್ರೇಮಕ್ಕೆ ನನಗೆ ಸರಿಯಾದ ಐಡಿಯಾಲಾಜಿಕಲ್ ರೀಸನ್ ಸಿಗುತ್ತಿಲ್ಲ. ಮನುಷ್ಯನಿಗಿರಬೇಕಾದ್ದ ಸಂವೇದನೆ, ಸಹಾನುಭೂತಿ, sensibility ತರಿಸುವಲ್ಲಿ ನಾನು ವಿಫಲನಾಗಿ  ದೇಶಪ್ರೇಮವನ್ನ ತುಂಬುವ ಕ್ರಿಯೆ ನನಗೆ ಅಸಹಾಯಕ ಸ್ಥಿತಿಯಲ್ಲಿ ನಾವಿದ್ದೇವೆನಿಸುತ್ತದೆ. ದೇಶಪ್ರೇಮದ ಅವಶ್ಯಕತೆಯಿಲ್ಲವೇನೋ practically. ಅದು ಮಾನವ ಸಮೂಹದ ಒಂದು ಪಂಗಡದ ಸ್ವಾರ್ಥ. ಅದು ಅನಿವಾರ್ಯವಾಗಿ ನಮ್ಮೇಲೆರಗಿರಬಹುದು.  ಆದರೆ ಅದು ಮಾನವರನ್ನ ದೂರವೇ ಇಡುವಂಥಹ ಸ್ವಾರ್ಥ, ಜಾತಿಯಂತೆ. Of course, ನಾವೆಲ್ಲಾ ಮಾನವರು, ನಾವೆಲ್ಲಾ ಒಂದೇ ಎನ್ನುವ ಭಾವ, ಸಹಕಾರವೂ ಸ್ವಾರ್ಥವೇ ಆದರೆ ಮಾನವ ಒಕ್ಕೂಟದ ಸ್ವಾರ್ಥ. ಮುಂದೆ ಮತ್ತೆ ನಾವು ವಾದವನ್ನ ಮುಂದುವರೆಸಬಹುದು. ಮಾನವರಲ್ಲ, ಎಲ್ಲಾ ಜೀವ ಸಮೂಹವೂ ಒಂದೇ ಎನ್ನುವ ವಾದ. ಇಲ್ಲಿ ಒಂದೇ ಎಂದರೆ - ನಮ್ಮ ನಮ್ಮನ್ನ ಮೇಲು ಕೀಳು ಎಂದು ವಿಭಜಿಸಿ, ಇಲ್ಲಿಯ, ವಿಶ್ವದ resources ಗಳನ್ನ unequitable ಆಗಿ ವಿಭಜಿಸಲು ಹೂಡಿಕೊಳ್ಳುವುದನ್ನು ತಡೆಯುವ ಒಂದು ಭಾವ‌. What a human requires is sensibility and empathy, of course apart from critical thinking, knolwedge so on. If you are sensible enough, empathetic enough, you understand others' situations. Of course this is also selfishness but ಆಗಲೇ ಹೇಳಿದಂತೆ ಮಾನವ ಒಕ್ಕೂಟದ ಸ್ವಾರ್ಥ'

'ಹಾ ಹಾ ಸಿಲ್ಲಿ.. ವೆರಿ ಸಿಂಪಲ್... ಬಿಕಾಸ್ ವಾಟ್ ಯು ಆರ್ ಟೆಲ್ಲಿಂಗ್ ಈಸ್ ನಾಟ್ ಪಾಸಿಬಲ್, ವಿಚ್ ಹ್ಯಾಸ್ ಬೀನ್ ಮೇಡ್ ಸೊ ಬೈ ಕಲ್ಚರಲ್ ಎವಲ್ಯೂಷನ್, ನೀನು ಎಲ್ಲಾ ಧರ್ಮದ, ಎಲ್ಲಾ ಪಂಗಡದ, ಎಲ್ಲಾ ಭೌಗೋಳಿಕ ಭಾಗದ, ಎಲ್ಲಾ ಸಾಂಸ್ಕೃತಿಕ ಜನರ, ವಿಭಿನ್ನ ನೈತಿಕ ಮೌಲ್ಯಗಳುಳ್ಳ ಜನರಲ್ಲಿ ನೀ ಹೇಳೋ ಸೆನ್ಸಿಬಿಲಿಟಿ, ಎಂಪೆತಿ ತರಿಸೋದು ಸಾಧ್ಯವೇ? ಯಾಕೆಂದ್ರೆ ಹಾಗೆ ಆಗಲಿಕ್ಕೆ ನಿನ್ನ ತಡೆಯೋ ಶಕ್ತಿ ಸಹಸ್ರಾರು - ಎಲ್ಲವನ್ನೂ ವಿಕಾಸ ನಿನ್ನ ಜೀವದ ಬ್ಯಾಗಿನೊಳಗೆ ತುಂಬಿ ಮುಂದೆ ಸಾಗಿಸುತ್ತಿದೆ. ನೋಡು ನೀ  ಹೇಳ್ತಿರೋದು ಹೇಗಿದೆ ಎಂದ್ರೆ - ನಾನು ಗಂಡು, ಬಿಳಿ ಬಣ್ಣದೋನು ಅನ್ನೋದ್ರಿಂದ ಹಿಡಿದು ಎಲ್ಲರಿಂದಲೂ ಬೇರ್ಪಡುತ್ತಾ ಹೋಗ್ತಿರಬೇಕಂತಿದೀ ನೀನು. ಹಾ ಹಾ. ವಿಭಿನ್ನತೆಯೇ ಸತ್ಯ. ಎಲ್ಲದರಲ್ಲೂ ವಿಭಿನ್ನತಯೇ. ಹಾಗಾಗಿ ಸ್ವಾರ್ಥದ ಪ್ರಶ್ನೆಯೆಲ್ಲಿ? ನಿನ್ನ ಪ್ರಕಾರ ಪ್ರತೀ ಮನುಷ್ಯ ಇನ್ನೊಬ್ಬನಿಂದ ಎಂದಿಗೂ ಸೆಪೆರೇಟೆಡ್ಡೆ'

 

 

'ವಿಭಿನ್ನತೆಯನ್ನ ನಾ ಒಪ್ತೇನೆ. ನಾ ಹೇಳ್ತಿರೋದು  why do you consciously decide yourself as belonging to one particular class and thereby separate yourself from others. Why do you consciously build the thought that you are an Indian, you are a kannadiga and so on? You are consciously deciding yourself to get separated from others. ಈಗ ಈ ದೇಶಭಕ್ತಿ ಅನ್ನೋ ಹೆಸರಲ್ಲಿ ಹುಟ್ಟು ಹಾಕ್ತಿರೋ ಸ್ವಾರ್ಥ ಭಾವವಿದೆಯಲ್ಲ ಅದು ನಿನ್ನನ್ನ ಬೇರೆ ಮನುಷ್ಯನಿಂದಲೇ ಸೆಪೆರೇಟ್ ಮಾಡುವ ರೀತಿಯಲ್ಲಿಯೇ ಇದೆ. ಅಕಸ್ಮಾತ್ ನಾನು ಭಾರತೀಯ.... ನನ್ನ ಅಸ್ತಿತ್ವ ಭಾರತೀಯತೆಯೇ ಅಂತ ನೀನು ನನ್ನ ಇರುವಿಕೆಯನ್ನ ಬಿಂಬಿಸೋದಾದ್ರೆ ಅದು ನನಗೆ ಒಪ್ಪಲಸಾಧ್ಯ. ಸ್ವಾರ್ಥ ಅನ್ವಯಿಸೋ ಗುಂಪು ಎಂದಿಗೂ ದೊಡ್ಡದಿರಬೇಕು ಅನ್ನೋದಷ್ಟೇ ನನ್ನ ವಾದ. The way you are building patriotism is simply seeming to me that you are consciously separating yourself from other humans. If you decide so in case of gender, I go against it also. We are all humans and that is more meaningful selfishness than the feel that we are Indians’

 

ನಾನ್ ಸೆನ್ಸ್‌ ಅಂಡ್ ಇಂಪ್ರಾಕ್ಟಿಕಲ್ ಟೂ. ಯು ಆರ್ ಸಿಂಪ್ಲಿ ಕಾಂಪ್ಕಿಕೇಟಿಂಗ್ ಥಿಂಗ್ಸ್. ಅದನ್ನೇ ನಾ ಹೇಳ್ತಿರೋದು - ಸ್ವಾರ್ಥ ಅನ್ವಯಿಸೋ ಗುಂಪುಗಳು ಎಷ್ಟು ದೊಡ್ಡ ಆಗಲಿಕ್ಕೆ ಸಾಧ್ಯವಿವೆಯೋ ಅಷ್ಟು ಆಗಿವೆ. ಅವೇ ದೇಶಗಳು. ಅದರಾಚೆಗೆ ಹೋಗಲಿಕ್ಕಸಾಧ್ಯವಾಗಿದೆ ಈಗ. ಈ ದೇಶವೆನ್ನೋ ಅನಿವಾರ್ಯ ಸ್ವಾರ್ಥದಿಂದ  ಈಗಿರುವ ಗುಂಪಾದರೂ ಅಷ್ಟಾಗೇ ಉಳೀತದಲ್ಲ? ಮೋರ್ ಓವರ್ ನೀನು ಹೇಳೋದನ್ನ ನಿನ್ನ ಪಕ್ಕದ ದೇಶದವನೂ ಹೇಳಬೇಕಲ್ಲೋ?'

'ಹ್ಹಾಂ... ಗುಂಪುಗಳು ಇನ್ನೂ ದೊಡ್ಡದಾಗಿಸೋ ಪ್ರಯತ್ನವಾದರೂ ಆಗಬೇಕಲ್ಲ, ಕೇವಲ ಇರೋದನ್ನ ಉಳಿಸಿಕೊಳ್ಳೋದರ ಜೊತೆಗೆ? ನನ್ನ ಪಕ್ಕದವ ಕೇಳೋ ಹಾಗೆ ನಾ ಮೊದಲು ಮಾತನಾಡೋದು, ವರ್ತಿಸೋದು ಮುಖ್ಯವಲ್ಲವೇ? ಭಾರತೀಯರೆನಿಸಿಕೊಂಡೋರಾದ್ರೂ ಭಾರತೀಯತೆಯನ್ನ ಬಿಡುವ ಅವಶ್ಯಕತೆಯ ಬಗ್ಗೆ ಯೋಚಿಸಲಾರಂಭಿಸಿದರೆ? ನೆನಪಿಟ್ಕೊ. ನನ್ನ ಉಳಿವು ಎಂದಿಗೂ ಮುಖ್ಯವೇ. ನಾನು ಭಾರತೀಯತೆಯ ಹಣೆಪಟ್ಟಿಯನ್ನ ಬಿಡುವುದು ಎಂದ ಮಾತ್ರಕ್ಕೆ ನನ್ನ ಉಳಿವಿಗೆ ಸಂಕಷ್ಟವಿದೆಯೆಂದಲ್ಲ. ನನ್ನ ಉಳಿವಿನ ಹೋರಾಟಕ್ಕೆ ಬೇಕಾದ ವಿಧಾನದಲ್ಲಿ ಹೋರಾಡಿಯೇ ತೀರುತ್ತೇನೆ'

'ಅಗೈನ್ ಸಿಲ್ಲಿ ಅಂಡ್ ಇಂಪ್ರಾಕ್ಟಿಕಲ್ ಫೆಲ್ಲೋ. ಇದು ಸಾಧ್ಯವಿದ್ದಲ್ಲಿ ವಿಕಾಸದ ಪಥದಲ್ಲಿ ನಾವು ಹಾಗೆಯೇ ಆಗಬೇಕಿತ್ತು‌. ವಿಕಾಸ ನಮ್ಮನ್ನ ದೇಶಗಳಾಗಿ ವಿಭಜಿಸಿಯಾಗಿದೆ ಹಾಗೂ ಇದು ಸುಸೂತ್ರವಾಗಿಯೂ ಸಾಗುತ್ತಿದೆ. ನೀ ಹೇಳೋ ಹಾಗೆ ಎಲ್ಲರೂ ಇರಲಿಕ್ಕೆ ಸಾಧ್ಯವೇ ಇಲ್ಲ ಅನ್ನೋದನ್ನೇ ವಿಕಾಸವೂ ಒತ್ತಿ ಹೇಳ್ತಿದೆಯಲ್ಲ? ಬಿ ಪ್ರಾಕ್ಟಿಕಲ್ ಮ್ಯಾನ್.. ದಿಸ್ ವಾಸ್ ದ ಮೋಸ್ಟ್ ಫೀಸಿಬಲ್ ವೇ ಫಾರ್ ಹ್ಯೂಮನ್ಸ್ ಇನ್ ದಿಸ್ ಎವಲ್ಯೂಷನರಿ ಜರ್ನಿ'

'ಹಂ' ನಾಗ್ ಹುಬ್ಬೇರಿಸಿ ಸುಮ್ಮನೆ ಕೂತ. ಸದಾನಂದ ಏನನ್ನೋ ಯೋಚಿಸುವವನಂತೆ ಎಲೆ ಕೀಳುತ್ತಾ ನೀಮ್ತ. ಭೋರ್ಗರೆವ ಜಲಪಾತದಲ್ಲಿ ನೀರು ಇದ್ದಕ್ಕಿಂದಂತೆ ಮಾಯವಾದಂತಾಯಿತು. ಇದ್ದಕ್ಕಿದ್ದ ಹಾಗೆ ಮೌನ ಆವರಿಸಿತು. ಇಬ್ಬರ ನಡುವಿನ ಮಾತಿನ ಹುಮ್ಮಸ್ಸು ಕತ್ತಲಾಗಲು ಆರಂಭವಾದಂತೆ ಅದೂ ಮಂಕಾಯಿತು. ಸದಾನಂದ ಸುತ್ತ ಯಾರಾದರೂ ಇದ್ದರೆ ಎಂದೊಮ್ಮೆ ತಿರುಗಿ ನೋಡಿ ತನ್ನ ಈ ಕೃತ್ಯಕ್ಕಾಗಿ ನಕ್ಕ.

'ಅಂಗಡಿ ಬಾಗಿಲು ಹಾಕಿದ್ದಕ್ಕಾಗಿ ನಾವಿಬ್ಬರೂ ಇದನ್ನ ಮಾತಾಡಲಿಕ್ಕೆ ಸಾಧ್ಯವಾಗಿದ್ದು' ಎಂದು ಮತ್ತೆ ನಕ್ಕ.

 

 

No comments:

Post a Comment