Friday, October 11, 2024

ಕೋಚಪ್ಪನ ದಿನಗಳು

ಮಂತ್ರಿವರ್ಯರೇ, ಕೆಲಸ ಹೇಗೆ ಸಾಗಿದೆ' ವಿರಾಮದ ಸಮಯದಲ್ಲಿ ಜಕೋಬ ಮಹಾರಾಜ ಲೋಕಾಭಿರಾಮವಾಗಿ ಕೇಳಿದ. 

'ಮಹಾಪ್ರಭುಗಳೆ! ತಮ್ಮ ಪ್ರೋತ್ಸಾಹದಿಂದ ನಾವು ಯೋಜಿಸಿದ್ದ ಯೋಜನೆ ಅತ್ಯಂತ ಯಶಸ್ವಿಯಾಗಿ, ಜನರನ್ನ ಕಾರ್ಯನಿರತರನ್ನಾಗಿ ಮಾಡಿವೆ' 

'ಭಲೇ ಭಲೇ'

ತನ್ನ ರಾಜ್ಯದ ಜನ ಎಂದಿಗೂ ಕಾರ್ಯನಿರತವಾಗಿರಬೇಕೆಂದು, ಕೆಲಸ ಇಲ್ಲದೋರಿಗೆಲ್ಲಾ ಜಕೋಬ ಒಂದು ಕೆಲಸವನ್ನ ಸೃಷ್ಟಿಸಿದ್ದ - ತಾವು ಬೇಡಿಕೆ ಇಟ್ಟಷ್ಟೂ ಬೆಳೆಯನ್ನ ಬೆಳೆದು ಕೊಡೋದು. ಜನ ಬೆಳೆ ನೀಡದೇ ಹೋದರೂ, ಬೆಳೆಯನ್ನ ಬೆಳೆಯುವ ಕೆಲಸದಲ್ಲಿ ತೊಡಗಿಸಿಕೊಂಡರೆ ಸಾಕಲ್ಲವೇ! ಅದೇ ಜಕೋಬನ ಧ್ಯೇಯವಾಗಿತ್ತು. ಬೇಳೆ ನೀಡದೆ ಹೋದವರ ಬಗ್ಗೆ ರಾಜರು ತಲೆ ಕೆಡೆಸಿಕೊಳ್ಳದೇ ಹೋದರೆ, ಮತ್ತೆ ಬೆಳೆ ಬೆಳೆದಾರೆ? ಹಾಂ! ಅದ್ಕಾಗಿಯೇ ಚೆನ್ನಾಗಿ ಬೆಳೆ ಬೆಳೆದೋರಿಗೆ ಚೆನ್ನಾಗಿಯೇ ಪ್ರತಿಫಲ ನೀಡೋದು. 

'ಮಂತ್ರಿವರ್ಯರೇ, ಪ್ರತೀ ವರ್ಷ ನಮಗೆ ಹಣ್ಣುಗಳನ್ನ ಬೆಳೆದು ತರುವ ಕೋಚಪ್ಪನವರು ನಮ್ಮ ಬಳಿಗೆ ಬಂದಿದ್ದರು. ಅವರಿಗೆ ಪ್ರತೀ ಆರು ತಿಂಗಳಿಗೊಮ್ಮೆ ಹಣ್ಣುಗಳನ್ನ ನೀಡಬೇಕೆಂದು ತಾಕೀತು ಮಾಡಿದ್ದರಂತೆ?'

'ಹೌದು ಮಹಾಪ್ರಭು. ಆರು ತಿಂಗಳಿಗೊಮ್ಮ ಫಲ ದೊರೆಯುವ ರೀತಿಯೇ ಬೆಳೆಸಬಹುದಾದ ವಿಧಾನವನ್ನೂ ಅವರಿಗೆ ತರಬೇತಿ ನೀಡಲಾಗಿದೆ ಮಹಾಪ್ರಭು!'

'ಶಾಬಾಸ್ ಶಾಭಾಸ್! ಆದರೆ ಅವರು ಆರು ತಿಂಗಳು ಹೆಚ್ಚಾಯಿತು. ನಾಕು ತಿಂಗಳು ಸಾಕಿದ್ದರೆ ಉಳಿದೆರೆಡು ತಿಂಗಳು ಮಹಾಪ್ರಭುಗಳ ಸೇವೆಯಲ್ಲಿ ತೊಡಗಿಕೊಂಡಿರ ಬಹುದೆಂದು ಕೇಳಿಕೊಂಡರು'

'ಮಹಾಪ್ರಭುಗಳೇ! ಅದು ಕಷ್ಟ ಸಾಧ್ಯವೇ! ನಾಕು ತಿಂಗಳಿಗೆ ಫಲ ನೀಡುವಂತೆ ಆರು ತಿಂಗಳಿಗೆ ಫಲವೀವ ಮರಗಳಿಗೆ ಕಷ್ಟ ಸಾಧ್ಯ. ನಾವು ಅತೀ ಜಾಗರೂಕವಾದ ಪರೀಕ್ಷೆಯನ್ನು ಸಹ ಮಾಡುವುದರಿಂದ, ಭಾಗಶಃ  ಹಣ್ಣುಗಳೂ ನಪಾಸಾಗಿಬಿಡಬೋಡು.'

'ಮಂತ್ರಿವರ್ಯರೇ ತಮಗೆ ಗೊತ್ತಿಲ್ಲದ್ದು, ಆಗದ್ದು ಯಾವುದಿದೆ?' 

'ಚಿತ್ತ ಮಹಾಪರಾಭು' 

ಹಣ್ಣು ಬೆಳೆಗಾರರು ನಾಕು ತಿಂಗಳಿಗೊಮ್ಮೆ ಇನ್ನು ಮುಂದೆ ಹಣ್ಣುಗಳನ್ನ ನೀಡಬೇಕೆಂದು ಡಂಗೂರ ಸಾರಲಾಯಿತು. ಜನರಲ್ಲಿ ಆತಂಕವಂತೂ ಮೂಡಿದ್ದು ಹೌದು. ಮರ ಬೆಳೆಯುವುದು ಸಜಹ ಪ್ರಕ್ರಿಯೆ. ಆರು ತಿಂಗಳೆಂದರೆ ಆರೇ ತಿಂಗಳು. ಹಲವಾರು ಜನ ಈ ಸವಾಲಿಗೆ ಸೋತು, ಬೆಳೆದ ಹಣ್ಣುಗಳಲ್ಲಿ ಹಲವಾರು ಪೀಚು ಕಾಯಿಗಳೇ ಇದ್ದದ್ದರಿಂದ, ಅವೆಲ್ಲವೂ ಮೇಲ್ನೋಟಕ್ಕೆಯೇ ನಪಾಸಾಗಿ ತಿರಸ್ಕೃತಗೊಂಡವು. ಆ ಕಾಯಿಗಳನ್ನ, ಒಂದಷ್ಟು ಜಾಗರೂಕತೆಯಿಂದ ಹುಷಾರು ಮಾಡಿ, ಸೂಕ್ತ ರಸಾಯನಿಕಗಳನ್ನ ಬಳಸಿದ್ದಲ್ಲಿ, ಇನ್ನೂ ಆರೇಳು ತಿಂಗಳಲ್ಲಿ ಒಳ್ಳೆಯ ಹಣ್ಣಾಗೋ ವಿಧಾನವನ್ನೂ ಸಹ ಜನರಿಗೆ ಕಲಿಸಲಾಗಿತ್ತು. ಆದರೆ ಆ ಹಣ್ಣುಗಳಿಗೆ ಮೊದಲಿನಷ್ಟು ಬೆಲೆಯಿಲ್ಲವಷ್ಟೆ. ಹಾಗಾಗಿ ಜನರಲ್ಲಿ ಅವುಗಳ ಬಗ್ಗೆ ಅನಾಸಕ್ತಿ. 

ಇವೆಲ್ಲವುದರ ನಡುವೆ ಕೋಚಪ್ಪನವರ ಹಣ್ಣುಗಳೆಲ್ಲವೂ ರಾಜರ ಎಲ್ಲಾ ಪರೀಕ್ಷೆಗಳೆಲ್ಲವನ್ನೂ ದಾಟಿ ಗೋದಾಮನ್ನ ಸೇರಿದ್ದು ಅತ್ಯಾಶ್ಚರ್ಯವೇ. ಕೋಚಪ್ಪನವರು, ಅದಕ್ಕಾಗಿ ತಾವು ಪಟ್ಟ ಹೆಚ್ಚುವರಿ ಕಷ್ಟವನ್ನ ಎಲ್ಲೆಡೆಯೂ ಸಾರುತ್ತಾ ಬರೋದರಲ್ಲಿಯೇ ಸುಖವನ್ನ ಕಂಡರು. 

'ಮಂತ್ರಿವರ್ಯರೇ, ಕೋಚಪ್ಪನವರದ್ದು ಮಾತ್ರ ಹೇಗೆ ಹಣ್ಣಾಗಲು ಸಾಧ್ಯ?' 

'ಮಹಾಪ್ರಭು, ಕೋಚಪ್ಪನವರ ವಿಶೇಷ ಕಾಳಜಿಯ ಪರಿಣಾಮ...' ಮಂತ್ರಿ ಕೋಚಪ್ಪನವರ ವಿವರಣೆಯನ್ನೇ ಒಪ್ಪಿಸಿದರು. 

ಕೋಚಪ್ಪನವರಿಗೂ, ಮಂತ್ರಿವರ್ಯರಿಗೂ ವಿಶೇಷ ನಂಟು ಏರ್ಪಟ್ಟಿತ್ತು. ತಾವು ಬೆಳೆದ ಹಣ್ಣುಗಳನ್ನ ಯಾವೆಲ್ಲಾ ಪರೀಕ್ಷೆಗಳಿಗೆ ಒಳಪಡಿಸಬೋದು ಎನ್ನುವ ಗುಪ್ತ ಪರೀಕ್ಷೆಗಳ ವಿವರ ಕೋಚಪ್ಪನವರಿಗಷ್ಟೇ ತಿಳಿದದ್ದು. 

'ನೀವು ಪ್ರತೀ ಪರೀಕ್ಷೆಯಲ್ಲೂ ಪಾಸಾಗಲು ಒಂದೊಂದು ದಾರಿಯುಂಟು ಕೋಚಪ್ಪನವರೇ. ನೀವು ಕೆಲವು ನಿಷೇಧಿತ ರಸಾಯನಿಕಗಳನ್ನ ಬಳಸಬೇಕಷ್ಟೇ. ನಿಮ್ಮ ಹಣ್ಣುಗಳು‌ ನಮಗೆ ಬೇಕಾದ ಹಾಗೆ ಇದ್ದರೂ, ಅವುಗಳು ನಿರುಪಯುಕ್ತ. ಗೋದಾಮಿನಿಂದ ಆಚೆಯ ಗೊಬ್ಬರಕ್ಕೂ ಅನುಪಯುಕ್ತ. ಆದರೂ ಒಂದಷ್ಟು ಕಾಲ ಅವುಗಳಿಗೆಂದೇ ಒಂದು ಸ್ಥಳವನ್ನ ಗೊತ್ತು ಮಾಡಿ ಇಡೋಣ. ನಮ್ಮ ನಿಮ್ಮ ಕಾಲವಂತೂ ಅಲ್ಲಿಯವರೆಗೆ ಮುಗಿಯುತ್ತದೆ' ಮಂತ್ರಿವರ್ಯರ ಹಿತಾಕಾಂಕ್ಷೆಯೇ ಕೋಚಪ್ಪನವರ ಸಫಲತೆಗೆ ದಾರಿಯಾಗಿತ್ತು. 

ಪೀಚು ಕಾಯಿಗಳೋ, ಹಣ್ಣುಗಳೋ, ಜನರ ಸಂಬಳಕ್ಕೇನು ಕೊರತೆಯಿಲ್ಲ. ಆದರೆ ವಿಶೇಷ ಸವಲತ್ತುಗಳು, ಹೆಚ್ಚುವರಿ ಕಾಸು ಮಾತ್ರ ಸಫಲರದ್ದಾಗಿದ್ದವು. ಆದರೂ ಕೆಲವು ಜನ ಚಿಂತಾಕ್ರಾಂತರಾಗಿದ್ದರು. ನಾಕು‌ ತಿಂಗಳಾಗಲೀ, ಆರು ತಿಂಗಳಾಗಲೀ, ಹಗಲೂ ರಾತ್ರಿ ದುಡಿದೂ, ವಿಶೇಷ ಕಾಳಜಿ ವಹಿಸಿ ಹಣ್ಙನ್ನ ಬೆಳೆಸಲೇಬೇಕೆನ್ನುವ ಹಠಕ್ಕೆ ಬಿದ್ದು ಸೋತು, ಮುಂದಕ್ಕೆ ಎರಡು ತಿಂಗಳ ನಡುವಿನ‌ ಕಾಲಾವಕಾಶದಿಂದಲೇ ಹಣ್ಣನ್ನ ಬೆಳೆಸಲು ಗುಪ್ತವಾಗಿ ಕಾರ್ಯಪ್ರವೃತ್ತರಾದರು. 

ಜಕೋಬನಿಗೆ ಬೇಕಾದ್ದೂ ಅದೇ ಅಲ್ಲವೇ? ಕೋಷಪ್ಪನವರಿಗೆ ಸಾಮಾನ್ಯ ದಿನಗಳಲ್ಲಿ ವಹಿಸುತ್ತಿದ್ದ ಕಾಳಜಿಯೂ ಮಂತ್ರಿವರ್ಯರ ಸೂತ್ರಗಳಿಂದ ಅನಾವಶ್ಯಕವೆನಿಸಿ, ವರ್ಷದ ಅಷ್ಟೂ ದಿನಗಳ ಕಾಲ ಸುಖವಾದ, ಜೀವನ ನಡೆಸಿತ್ತಿದ್ದು, ಒಂದುಳಿದ ಜನ ಹಗಲೂ ರಾತ್ರಿ ಶ್ರಮವಹಿಸಿ ಕೆಲಸ ಮಾಡಿತ್ತಿದ್ದಾರೆ. ಇನ್ನೂ ಕೆಲವರು ಕೋಚಪ್ಪನವರ ಕೃಪೆಗಾಗಿ ಅವರ ಹಿಂದೆಯೇ ತಿರುಗುತ್ತಿದ್ದಾರೆ. 


No comments:

Post a Comment