ಎಷ್ಟು ಹರಿತ, ಎಷ್ಟು ಗಟ್ಟಿ!
ಇವರೇ ಉದ್ಗರಿಸಿದವರು.
ಇವರೇ ಉದ್ಗರಿಸಿದವರು.
ಅರೆ, ಹುಡುಕಿಹರು
ಕುರುಡರೇ?
ಕೈ ತುದಿಗೇ ಉಂಟಲ್ಲ
ಹರಿತವಾದ್ದು, ಗಟ್ಟಿಯಾದ್ದು
ಎಗ್ಗಿಲ್ಲದೆ ಒಗ್ಗಿಸಿ ಬಳಸಿದರು
ಯಾವ ಕೆಲಸ, ಯಾವ ಸಮಯ
ಮಿತಿಯಿಲ್ಲ, ಲೆಕ್ಕವಿಲ್ಲ
ಇಲ್ಲವೆನಲು ಸ್ವತಂತ್ರವೇ?
ಸ್ವಾಮಿ ನಿಷ್ಠೆಯೇ?
ಸ್ವಪ್ರತಿಷ್ಠೆಯೇ?
ಕೊಟ್ಟಷ್ಟೂ ಕಡಿದು, ಬಡಿದು
ಇರಿದು, ಕೆರೆದು, ತುರಿದು
ಯಾವ ಕೆಲಸ, ಯಾವ ಸಮಯ
ಮಿತಿಯಿಲ್ಲ ಲೆಕ್ಕವಿಲ್ಲ
ಮೂಲ ಸತ್ವವಿಹುದೆಲ್ಲಿ
ಬದಲಾವಣೆ ಜಗದ ನಿಯಮವಂತೂ ಹೌದು
ಮೂಲವೂ ಅದರಂತೆ ಉಂಟು
ಅದುವೇ ಅಂತಃಸತ್ವ
ಹುಲ್ಲು ತಿನುವ ಹುಲಿಯೆಲ್ಲಿ?
ಜಿಂಕೆ ಮಿತಿಯಡಲು ಬೇಕಿಹುದು ಹುಲಿಯೇ!
ಯಾವ ಕೆಲಸ, ಯಾವ ಸಮಯ
ಮಿತಿಯಿಲ್ಲ ಲೆಕ್ಕವಿಲ್ಲ
ತಾನ್ಯಾರು? ಎಲ್ಲರೊಳಗೂ ಒಂಚೂರೊಬ್ಬ
ಕಡಿಯುವನೆ? ಇರಿಯುವನೆ?
ಬಡಿದು ಕೊಲ್ಲುವನೆ?
ಈಗ್ಯಾವುದೂ ಇಲ್ಲ
ಅರೇ! ಇದೇಕಿಂದು ಇಷ್ಟು ಮೊಂಡು?
ಇವರೇ ಉದ್ಗರಿಸಿಹರು
No comments:
Post a Comment