ಸಾಮನ್ಯವಾಗಿ ನಾನು ಗಮನಿಸಿರುವ ಹಾಗೆ ಕವನ ಸಾಹಿತ್ಯ ಹಲವರಿಗೆ ಹಿಡಿಸುವುದಿಲ್ಲ (ನನ್ನನ್ನೂ ಸೇರಿಸಿಯೇ) . ಇದೊಂದು ಹಳ್ಳಿಯ ಹೆಣ್ಣಿದ್ದ ಹಾಗೆ. ಎಲ್ಲಾ ಸತ್ವವಿದ್ದರೂ ಎಲ್ಲರಿಗೂ ರುಚಿಸುವುದಿಲ್ಲ. ಅದೇ ಹಳ್ಳಿಯ ಹೆಣ್ಣನ್ನು ಸಂಗೀತದೊಂದಿಗೆ ಸಿಂಗರಿಸಿದರೆ ಆ ಹೆಣ್ಣು ತನ್ನವಳೇ ಏನೋ ಎಂಬಂತೆ ಪ್ರತಿಯೊಬ್ಬರೂ ಅವಳನ್ನೇ ಗುಂಯ್ಗುಡುತ್ತಾರೆ.
ಆದರೆ ಎಲ್ಲಾ ಕವನ ಸಾಹಿತ್ಯವೂ ಒಬ್ಬ ವ್ಯಕ್ತಿಯಲ್ಲಿ ಒಂದು ರೀತಿಯ ಭಾವನೆಗಳನ್ನು ಹುಟ್ಟುಹಾಕುತ್ತದೆ ಎಂದು ಹೇಳಲಾಗುವುದಿಲ್ಲ. ಒಬ್ಬೊಬ್ಬನಿಗೆ ಒಂದೊಂದು ರೀತಿಯ ಸಾಹಿತ್ಯ ಹಿಡಿಸುತ್ತದೆ, ಒಂದೊಂದು ರೀತಿಯ ಸಂಗೀತ ರುಚಿಸುತ್ತದೆ.
(ನನಗೆ ಅಷ್ಟಾಗಿ ಸಾಹಿತ್ಯದ ಪರಿಚಯವಿಲ್ಲ . ಇಲ್ಲಿ ಏನಾದರು ಸಾಹಿತ್ಯದಲ್ಲಿ ತಪ್ಪು ಕಂಡುಬಂದಲ್ಲಿ ದಯವಿಟ್ಟು ತಿದ್ದಿ.)