ಸಾಮನ್ಯವಾಗಿ ನಾನು ಗಮನಿಸಿರುವ ಹಾಗೆ ಕವನ ಸಾಹಿತ್ಯ ಹಲವರಿಗೆ ಹಿಡಿಸುವುದಿಲ್ಲ (ನನ್ನನ್ನೂ ಸೇರಿಸಿಯೇ) . ಇದೊಂದು ಹಳ್ಳಿಯ ಹೆಣ್ಣಿದ್ದ ಹಾಗೆ. ಎಲ್ಲಾ ಸತ್ವವಿದ್ದರೂ ಎಲ್ಲರಿಗೂ ರುಚಿಸುವುದಿಲ್ಲ. ಅದೇ ಹಳ್ಳಿಯ ಹೆಣ್ಣನ್ನು ಸಂಗೀತದೊಂದಿಗೆ ಸಿಂಗರಿಸಿದರೆ ಆ ಹೆಣ್ಣು ತನ್ನವಳೇ ಏನೋ ಎಂಬಂತೆ ಪ್ರತಿಯೊಬ್ಬರೂ ಅವಳನ್ನೇ ಗುಂಯ್ಗುಡುತ್ತಾರೆ.
ಆದರೆ ಎಲ್ಲಾ ಕವನ ಸಾಹಿತ್ಯವೂ ಒಬ್ಬ ವ್ಯಕ್ತಿಯಲ್ಲಿ ಒಂದು ರೀತಿಯ ಭಾವನೆಗಳನ್ನು ಹುಟ್ಟುಹಾಕುತ್ತದೆ ಎಂದು ಹೇಳಲಾಗುವುದಿಲ್ಲ. ಒಬ್ಬೊಬ್ಬನಿಗೆ ಒಂದೊಂದು ರೀತಿಯ ಸಾಹಿತ್ಯ ಹಿಡಿಸುತ್ತದೆ, ಒಂದೊಂದು ರೀತಿಯ ಸಂಗೀತ ರುಚಿಸುತ್ತದೆ.
(ನನಗೆ ಅಷ್ಟಾಗಿ ಸಾಹಿತ್ಯದ ಪರಿಚಯವಿಲ್ಲ . ಇಲ್ಲಿ ಏನಾದರು ಸಾಹಿತ್ಯದಲ್ಲಿ ತಪ್ಪು ಕಂಡುಬಂದಲ್ಲಿ ದಯವಿಟ್ಟು ತಿದ್ದಿ.)
ಭಾವಗೀತೆ ೧: ನನ್ನವಳು
ರಚನೆ: ಬಿ ಆರ್ ಲಕ್ಷ್ಮಣ್ ರಾವ್
ನನ್ನವಳು, ನನ್ನಾಕೆ
ಹರಿಯುವ ನದಿಯಲ್ಲ, ಸರಿವ ಸರಿತೆಯಲ್ಲ
ಇವಳೊಂದು ಪುಟ್ಟಕೊಳ
ನನ್ನ ಬಾಳಿನ ಜೀವಜಲ॥
ಹರಿಯುವ ನದಿಯಲ್ಲ, ಒಳ್ಳ ಸುಳಿಗಳ ಭಯವಿಲ್ಲ
ಕಾಣದ ಕಡಲಿನ ಕರೆಗೆ ಓಗೊಟ್ಟು,
ನನ್ನ ತೊರೆದು ಹೋಗುವಂತ ತೊರೆಯಲ್ಲ।
ಇವಳೊಂದು ಪುಟ್ಟಕೊಳ
ನನ್ನ ಬಾಳಿನ ಜೀವಜಲ
ಹಗಲು ರವಿ, ಬೆಟ್ಟ, ಮುಗಿಲು, ಚುಕ್ಕಿ ಚಂದಿರನಾ ಇರುಳು
ಮುಕ್ಕಾಗದಂತೆ ಪ್ರತಿಬಿಂಬಿಸುವ
ನಿರ್ಮಲ ಕನ್ನಡಿ ಇವಳು।
ಇವಳೊಂದು ಪುಟ್ಟಕೊಳ
ನನ್ನ ಬಾಳಿನ ಜೇವಜಲ.
ಬಿರುಬಿಸಿಲಿಗೆ ಈಜಾಡಲು, ಹೂದೋಟಕೆ ನೀರೂಡಲು
ಮಕ್ಕಳು ಮರಿ ಚಿಕ್ಕ ದೋಣಿಯಲಿ ಕೂತು
ನಕ್ಕು ನಲಿಯುತಾ ವಿಹಾರ ಮಾಡಲು
ಸದಾ ಸಮೃದ್ಧ ಜಲ
ಇವಳೊಂದು ಪುಟ್ಟಕೊಳ
ಕರುಳ ಬಳ್ಳಿ ಒಡಲಲ್ಲಿ, ಬಡಿದ ಕಲ್ಲು ತಳದಲ್ಲಿ
ನರುಗಂಪು ಸೂಸಿ ನಗುವ ತಾವರೆ,
ನೀರ ಮೇಲ್ಪದರದಲ್ಲಿ
ಗಹನಾ ಕಾಣಲು ಸರಳ
ಇವಳೊಂದು ಪುಟ್ಟಕೊಳ
_____________________________________________
ಈ ಭಾವಗೀತೆಗೆ ಒಂದು ಹೊಸ ಜೀವವನ್ನು ನೀಡಿರುವ ಸಿ ಅಶ್ವಥ್ ಅವರ ಧ್ವನಿ, ಪ್ರತೀಬಾರಿ ಈ ಹಾಡನ್ನು ಕೇಳಿದಾಗಲೆಲ್ಲ ಒಂದು ಹೊಸ ಲೋಕಕ್ಕೆ ಕೊಂಡೊಯ್ಯುತ್ತದೆ.
ಸಿ ಅಶ್ವಥ್ ಅವರ ಧ್ವನಿಯಲ್ಲಿ ಈ ಹಾಡನ್ನು ಕೇಳಲು ಕೆಳಗಿನ ಲಿಂಕನ್ನು ಬಳಸಿ
No comments:
Post a Comment