Saturday, September 23, 2023

ಮೌನದ ಮಾತು - 8

 ಮುಕ್ತಿ 


ರೆಕ್ಕೆ ಇದ್ದರೆ ಸಾಕೇ? 




ಮೌನದ ಮಾತು - 7

ಹೊಂದಾಣಿಕೆ 





ಹೋದಲ್ಲೆಲ್ಲಾ ಹೊಂದುಕೊಳ್ಳುವವನಾಗಿದ್ದರೆ...?

ಅದು ಹಾಗಲ್ಲ.. 

ಹೋದಲ್ಲೆಲ್ಲಾ ತನಗೆ ಹೊಂದಿಕೆಯಾಗುವಂತದ್ದನ್ನ ಕಂಡುಕೊಳ್ಳುವುದು.. 




ಮೌನದ ಮಾತು - 6

 ದಾರಿ ಯಾವುದಯ್ಯ ವೈಕುಂಟಕ್ಕೆ.... 


ಹತ್ತಿಳಿಯುವುದು ಪ್ರಯಾಸವೇ...

ಮಳೆ ಬರುವ ಹಾಗಿದೆ.. ನಿಲ್ಲೋಣ




ಇನ್ನೆಷ್ಟು ದೂರವೋ..? 

Sunday, August 20, 2023

ಮರೀಚಿಕೆ

     ರಾಮ್ ಪ್ರಸಾದನಿಗೆ ಅಲ್ಲಿಗೇಕೆ ಬಂದಿದ್ದೇನೆನ್ನುವುದಿನ್ನು ಸ್ಪಷ್ಟವಿರಲಿಲ್ಲ. ತನ್ನ ಮೇಲೆ ಹಲ್ಲೆಯೆಸಗಿದ ಇಬ್ಬರು ವ್ಯಕ್ತಿಗಳನ್ನೂ ತನ್ನೊಟ್ಟಿಗೆ ಎಳೆದುಕೊಂಡು ಬಂದಿದ್ದ. ಬಂದು ಸುಮಾರು ಹೊತ್ತು ಹಾಗೆ ಖಾಲೀ ಕುಳಿತಿರಬೇಕಾದ್ದೆ ಅವನಿಗೆ ಆ ಅಸ್ಪಷ್ಟತೆಯನ್ನ ಸೃಷ್ಟಿಸಿದ್ದು. ತನ್ನನ್ನಲ್ಲಿಗೆ ಕರತಂದಿದ್ದ ಸೂರಿಯೂ ಸಹ ಕೊಂಚ ಕೆಲಸವಿದೆಯೆಂದು ಹೊರಹೋಗಿದ್ದ. ಸೂರಿ ಶಾಲೆಯ ಸಮಯದಿಂದಲೂ ದೋಸ್ತ್. ಡಿಗ್ರೀ ಕಾಲೇಜಿನ ದಿನಗಳವರೆಗೂ ರಾಮ್ ಪ್ರಸಾದನೊಟ್ಟಿಗೆಯೇ ಹೋದಲ್ಲೆಲ್ಲಾ ಹೋಗುವಷ್ಟು ಖಾಸನಾಗಿಹೋಗಿದ್ದ. ಈಗ ಅವನೂ ಜೊತೇಲಿಲ್ಲ. ಆ ಗೆಸ್ಟ್ ಹೌಸಿನ ಒಳಗೆ ಲೈಟ್ ಹಚ್ಚಿದರಷ್ಟೇ ಬೆಳಕು. ಹೀಗೇಕೆ ಗಾಳಿ ಬೆಳಕೇ ಇಲ್ಲದಂಥ ಗೆಸ್ಡ್ ಹೌಸ್ ಗಳನ್ನ ಸೃಷ್ಟಿಸ್ತಾರೆ ಅಂತ ತುಸು ಹೊತ್ತು ಆಲೋಚನಾ ಮಜ್ಞನಾಗಿ ಕುಳಿತಿದ್ದ ರಾಮ್ ಪ್ರಸಾದ ಸಮಯ ದೂಡಲಿಕ್ಕಾಗಿ.