Sunday, August 20, 2023

ಮರೀಚಿಕೆ

     ರಾಮ್ ಪ್ರಸಾದನಿಗೆ ಅಲ್ಲಿಗೇಕೆ ಬಂದಿದ್ದೇನೆನ್ನುವುದಿನ್ನು ಸ್ಪಷ್ಟವಿರಲಿಲ್ಲ. ತನ್ನ ಮೇಲೆ ಹಲ್ಲೆಯೆಸಗಿದ ಇಬ್ಬರು ವ್ಯಕ್ತಿಗಳನ್ನೂ ತನ್ನೊಟ್ಟಿಗೆ ಎಳೆದುಕೊಂಡು ಬಂದಿದ್ದ. ಬಂದು ಸುಮಾರು ಹೊತ್ತು ಹಾಗೆ ಖಾಲೀ ಕುಳಿತಿರಬೇಕಾದ್ದೆ ಅವನಿಗೆ ಆ ಅಸ್ಪಷ್ಟತೆಯನ್ನ ಸೃಷ್ಟಿಸಿದ್ದು. ತನ್ನನ್ನಲ್ಲಿಗೆ ಕರತಂದಿದ್ದ ಸೂರಿಯೂ ಸಹ ಕೊಂಚ ಕೆಲಸವಿದೆಯೆಂದು ಹೊರಹೋಗಿದ್ದ. ಸೂರಿ ಶಾಲೆಯ ಸಮಯದಿಂದಲೂ ದೋಸ್ತ್. ಡಿಗ್ರೀ ಕಾಲೇಜಿನ ದಿನಗಳವರೆಗೂ ರಾಮ್ ಪ್ರಸಾದನೊಟ್ಟಿಗೆಯೇ ಹೋದಲ್ಲೆಲ್ಲಾ ಹೋಗುವಷ್ಟು ಖಾಸನಾಗಿಹೋಗಿದ್ದ. ಈಗ ಅವನೂ ಜೊತೇಲಿಲ್ಲ. ಆ ಗೆಸ್ಟ್ ಹೌಸಿನ ಒಳಗೆ ಲೈಟ್ ಹಚ್ಚಿದರಷ್ಟೇ ಬೆಳಕು. ಹೀಗೇಕೆ ಗಾಳಿ ಬೆಳಕೇ ಇಲ್ಲದಂಥ ಗೆಸ್ಡ್ ಹೌಸ್ ಗಳನ್ನ ಸೃಷ್ಟಿಸ್ತಾರೆ ಅಂತ ತುಸು ಹೊತ್ತು ಆಲೋಚನಾ ಮಜ್ಞನಾಗಿ ಕುಳಿತಿದ್ದ ರಾಮ್ ಪ್ರಸಾದ ಸಮಯ ದೂಡಲಿಕ್ಕಾಗಿ.

 

ಆ ಇಬ್ಬರ ಕೈ ಕಾಲುಗಳಿಗೆ ಕಟ್ಟುಗಳಿದ್ದರಿಂದ, ಜೊತೆಗೆ ಒದೆ ತಿಂದು ಸುಸ್ತಾಗಿದ್ದರಿಂದ ರಾಮನಂಥೆ ಸಮಯ ದೂಡಬೇಕಿದ್ದೇನಿರಲಿಲ್ಲ. ಎಷ್ಟು ಹೊತ್ತು ಸುಮ್ಮನೆ ಕುಳಿತಿರುವುದು. ಸುಮಾರು ಒಂದು ಗಂಟೆಯೇ ಕಳೆದಿರಬೇಕು ಆತ ಹಾಗೆ ಕೂತು. ಇನ್ನು ಹೆಚ್ಚು ಹೊತ್ತು ಹಾಗೆ ಕುಳಿತಿರಲು ಸಾಧ್ಯವೇವಿಲ್ಲವೆಂದೆನಿಸಿದಾಗ ಎದ್ದು ಸುತ್ತಲೆಲ್ಲಾ ಪರಿಶೋಧಿಸಲಾರಂಭಿಸಿದ. ತಾನು ಕುಳಿತ ಹೊರಗಿನ ಹಾಲಿನಿಂದ ಒಂದು ಓಣಿ ರೀತಿಯ ಹಾದಿ ಒಳಗೆಲ್ಲೋ ಹೋಗುತ್ತಿತ್ತು. ಆ ಹಾದಿಯ ಗೊಡೆಯ ಎರಡೂ ಬದಿಗಳಲ್ಲಿ ಅತ್ಕೃಷ್ಟ ಕಲಾಕೃತಿಗಳ ಫೋಟೋಗಳು. ಒಂದೊಂದನ್ನೇ ನೋಡುತ್ತಾ ಇತ್ತ ಬದಿಗೆ ಸಾಗಿದಾಗ ಮತ್ತೊಂದು ದೊಡ್ಡ ಜಾಗ ತೆರೆದುಕೊಂಡಿತು. ಅದೊಂದು ತೊಟ್ಟಿ ಮನೆಯ ರೀತ್ಯ ಮಧ್ಯ ತಗ್ಗಿನ ಜಾಗ. ಆದರೆ ಮೇಲೆಲ್ಲೂ ತೆರೆದಿಲ್ಲ. ಬೆಳಕನ್ನ ಸೋಸಿ ಚೂರಷ್ಟೇ ಒಳಬಿಡುವ ಗಾಜಿನ ಪರದೆ ಮೇಲೆ. ಆ ತಗ್ಗು ಜಾಗದ ಆಚೀಚೆಗೆ ಮೂರು ರೂಮುಗಳು. ಮೂಲೆಯಲ್ಲೊಂದು ಅಡುಗೆ ಮನೆ. ಅಲ್ಲೇ ಪಕ್ಕದಲ್ಲೊಂದು ಬಾಗಿಲು, ಚೂರು ತೆಗೆದಿದ್ದರಿಂದ ಕೊಂಚ ಬೆಳಕು ಒಳಹರಿದಿತ್ತು. ರಾಮಪ್ರಸಾದ ಸೀದಾ ಆ ಬಾಗಿಲೆಡೆಗೆ ನಡೆದ. ಅದು ಗೆಸ್ಟ್ ಹೌಸಿನ ಹಿಂದಿನ ಭಾಗವೇ? ಮೆಟ್ಟಿಲಿಳಿದು ಕೆಳಗೆ ಹೋದರೆ ವಿಶಾಲವಾದ ಗಾರ್ಡನ್. ಕೆಳಗೆ ಹುಲ್ಲು ಹಾಸಿಗೆ. 

'ಜಗದೀಶ್, ಒನ್ ಸ್ಪೂನ್ ಶುಗರ್ ಅಷ್ಟೇ'. ಒಂದು ಕುರುಚಲು ಗಿಡದ ಹಿಂದಿನಿಂದ ಸದ್ದು ಬಂದದ್ದು ಪ್ರಸಾದನಿಗೆ ಕುತೂಹಲ ಹುಟ್ಟಿಸಿತು‌. ಪ್ರಸಾದ ಅತ್ತ ಕಡೆ ಹೋಗ್ತಿದ್ದಂತೆ ಒಂದು ಗಂಡು ಕಾಯ ಎದುರು ಬಂದಿತು. 'ಸಾರ್...' ಎಂದು ಸೆಲ್ಯೂಟ್ ಹೊಡೆದು ಪ್ರಸಾದನನ್ನ ದಾಟಿ ಮೆಟ್ಟಿಲು ಹತ್ತಿ ಒಳಹೋಯಿತು. ಪ್ರಸಾದ ಆತ ಹೋದ  ಕಡೆಯೇ ಒಂದೆರೆಡು ನಿಮಿಷ ನೋಡುತ್ತಾ ನಿಂತ. ಚಕ್ಕನೆ ನೆನಪಾಯಿತು, 'ಇನ್ನೊಂದು ಹೆಣ್ಣು ದನಿಯಲ್ವಾ?' ಕುರುಚಲು ಗಿಡವನ್ನ ದಾಟಿ ಅತ್ತ ಬರ್ತಿದ್ದಂತೆ, ಒಂದು ಕುರ್ಚಿಯಲ್ಲಿ ಪ್ರಸಾದನಿಗೆ ಬೆನ್ನು ತೋರಿಸಿ ಕೂತಿದ್ದೊಬ್ಬರು ಕಂಡರು. 'ಓಹ್.. ಪ್ರಸಾದ್.... ಪ್ಲೀಸ್ ಕಮ್..' ಹೆಣ್ಣು ದನಿಗೆ ತನ್ನ ಹೆಸರು ತಿಳಿದದ್ದು ಕಂಡು ಪ್ರಸಾದನಿಗೆ ಅಚ್ಚರಿ ಮೂಡಿತು. 'ಇದು ಪರಿಚಿತವಲ್ಲವೇ ಅಲ್ಲವಲ್ಲ...' ಎಂದುಕೊಳ್ಳುತ್ತಾ ಆ ವ್ಯಕ್ತಿಯ ಮುಂದೆ ಹೋದ. 

*******
ಕುರ್ತಾ ಅಥವಾ ಜುಬ್ಬ ಧರಿಸೋದನ್ನೇ  ಪ್ರಿಫರ್ ಮಾಡ್ತಿದ್ದ ಪ್ರಸಾದ ಎಂದೋ ತನ್ನೆಲ್ಲಾ ಸುತ್ತಲಿನ ಗಂಡಸರಿಗಿಂತ ಔಟ್ ಡೇಟೆಡ್ ಎನಿಸಿದ್ದ.  ಇಷ್ಟು ಚಿಕ್ಕ ವಯಸ್ಸಿಗೇ ಜೀವನದಲ್ಲಿಯ ಆಸಕ್ತಿಯನ್ನ ಕಳಕೊಂಡೋನ ಹಾಗೆ ಇರ್ತೀಯಲ್ಲ ಎಂದು ತನ್ನ ಸ್ನೇಹಿತರು, ಸುತ್ತಲಿನವರೆಲ್ಲಾ ಎಷ್ಟೇ ಗೇಲಿ ಮಾಡಿದರೂ ಅದನ್ನೆಂದೂ ಮನಸ್ಸೊಳಗೆ ಬಿಟ್ಟುಕೊಳ್ತಿರಲಿಲ್ಲ. ತನಗ್ಯಾವ ಹೆಣ್ಣನ್ನ ಆಕರ್ಷಿಸೋ ಆಸೆಯಿಲ್ಲ ಎಂದು ಅವರೆಲ್ಲರಿಗೂ ಹೇಳಿಕೊಂಡರೂ, ಮನಸ್ಸಿನೊಳಗೇ ಆತನಿಗೊಂದು ಆತ್ಮವಿಶ್ವಾಸವಿತ್ತು - ಹೆಣ್ಣು ಮಕ್ಕಳನ್ನ ತನ್ನ ವ್ಯಕ್ತಿತ್ವದ ಮುಖೇನವೇ ತನ್ನ ಸಂಗವನ್ನ ಬಯಸೋ ಹಾಗೆ ಮಾಡ್ತೇನೆಂದು. ಪ್ರಸಾದನ ಮನಸ್ಸು  ಜೋರಾಗಿ ಹೊಡೆದುಕೊಳ್ಳಲಾರಂಭಿಸತು. ಚೇರಿನ ಮೇಲೆ ಕೂತಿದ್ದ ಆಕೆಯ ರೂಪ ಲಾವಣ್ಯ, ಭಂಗಿ ಹಾಗೂ ವಸ್ತ್ರಗಳು ಪ್ರಸಾದನ ಎದೆಯ ಮೇಲೆ ಯಾರೋ ಕಲ್ಲು ಹಾಕಿದಂತೆ ಭಾರವೆನಿಸಿತು. ಒಂದು ಕ್ಷಣ ತನ್ನ ಕುರ್ತಾ ಹಾಗೂ ಬಿಳಿ ಪ್ಯಾಂಟಿನ ಮೇಲೆ ಆತನಿಗೇ ಮುಜುಗರವೆನಿಸತೊಡಗಿತು. ಆಕೆ ಟೈಟಾದ ಬಿಳಿ ಟೀಶರ್ಟನ್ನ, ಸೊಂಟದ ಮೇಲೆಯೇ ಕಟ್ಟಿದ್ದ ಪ್ಯಾಂಟಿನ ಒಳಗೆ ಇನ್ ಶರ್ಟ್ ಮಾಡಿದ್ದಳು. ಕೂದಲನ್ನ ಕಟ್ಟಿ ಹಿಂದೆ ಕುದುರೆಯ ಬಾಲದಂತೆ ಇಳಿಬಿಟ್ಟದ್ದಳು. ಆಕೆಯ ಎದೆಯನ್ನ ಎಷ್ಟೇ ನೋಡಬಾರದೆಂದೆನಿಸಿದರೂ, ತಡೀಲಿಕ್ಕಾಗದ ಹಾಗೆ ಆಕೆಯೇ ಬೇಕಂತಲೇ ಮಾಡಿಕೊಂಡಿದ್ದಳೇ ಎಂದು ಭ್ರಮೆ ಬರಿಸುವಷ್ಟು ಆಕರ್ಷಣೆಗೊಳಗಾಗಿದ್ದ. ಕಾಲು ಮೇಲೆ ಕಾಲು ಹಾಕಿ ಕೂತಿದ್ದ ಆಕೆ, ಪ್ರಸಾದ ಎದುರಿಗೆ ಬರ್ತಿದ್ದ ಹಾಗೆಯೇ ಕಾಲನ್ನ ತೆಗೆದು, 'ಬನ್ನಿ.. ಕುಳಿತ್ಕೊಳ್ಳಿ' ಎಂದು ಸನ್ನೆ ಮಾಡಿದಳು. ಆಕೆಯ ದೇಹದ ಮೇಲೆ ನೆಟ್ಟ ಕಣ್ಣನ್ನ ಅತ್ತಿತ್ತ ಕದಲಿಸದೆಯೇ ಬಂದು ಕೂತು - 'ಯು ಆರ್.....?' ಎಂದು ಕೇಳುತ್ತಿದ್ದವ ಆಕೆಯ ಕೈಯಲ್ಲಿದ್ದ ಸ್ಫಿನೋಜನ 'ಎಥಿಕ್ಸ್' ನೋಡಿ - 'ಓಹ್..' ಎಂದು ಉದ್ಗರಿಸಿದ. 'ವಂಡರ್ಫುಲ್ ದಟ್ ಯು ಆರ್ ರೀಡಿಂಗ್ ದಿಸ್'. ಪರಿಚಯದ ಅವಶ್ಯಕತೆಯೇ ಇನ್ನು ಅನವಶ್ಯಕವೆಂಬತೆ ಪುಸ್ತಕವೊಂದು ಅಬರಿಬ್ಬರನ್ನ ಒಂದುಗೂಡಿಸಿದಂತಿತ್ತು‌.

'ಬಟ್ ಐ ಫೆಲ್ಟ್ ರಿಯಲ್ಲಿ ಟಯರ್ಡ್ ರೀಡಿಂಗ್ ದಿಸ್ ಟಿಲ್ ದ ಎಂಡ್. ಬಟ್ ವಾಟ್ ಐ ಲೈಕ್ಡ್ ವಾಸ್ ಹಿಸ್ ಐಡಿಯ ಆಫ್ ಇಮಿಟೇಟಿಂಗ್ ಯೂಕ್ಲಿಡ್ಸ್ ಆ್ಯಕ್ಸಿಯೋಮ್ಯಾಟಿಕ್ ಸಿಸ್ಟಮ್...'  ಪ್ರಸಾದ ಆಕೆ ತೀರಾ ಹತ್ತಿರದವಳೆಂಬಂತೆ ಮಾತನಾಡಲಾರಂಬಿಸಿದ್ದ. ಆಕೆಯ ದೇಹ ಲಾವಣ್ಯಗಳೊಟ್ಟಿಗೆ ಆಕೆ ಕೈಯಲ್ಲಿನ 'ಎಥಿಕ್ಸ್' ಏಕ್ದಮ್ ಪ್ರಸಾದನಿಗೆ ಆಕೆಯ ಮೇಲಿನ ಮೋಹವನ್ನ ಹೆಚ್ಚಿಸಿಬಿಟ್ಟಿತು. 

*****

ರೀಸರ್ಚಿಗೆ ಪ್ರಸಾದ ಬಹಳ ತಡವಾಗಿ ಸೇರಿದ್ದು. ಇಪ್ಪತೊಂಭತ್ತು ಕಳೆದಿತ್ತು. ಮದುವೆಯಾಗಿ ಮಗುವೊಂದೂ ಸಹ ಇದ್ದ ಸಮಯದಲ್ಲಿ ರೀಸರ್ಚ್  ಮಾಡೋಕ್ಕೆ ಬರೋರು ಭಾಗಶಃ ಯಾವುದೋ ಕೆಲಸದಲ್ಲಿನ ಪ್ರಮೋಶನ್ನಿಗಾಗಿಯೋ ಅಥವಾ ಇಂಕ್ರಿಮೆಂಟಿಗಾಗಿಯೋ ಬರೋರು ಹೆಚ್ಚು. ಆದರೆ ಮಾಡ್ತಿದ್ದ ಕೆಲಸದಲ್ಲಿ ಸಾಕಷ್ಟು ಪ್ರಶ್ನೆಗಳೆದ್ದು, ಈ ಜೀವನದ ಧ್ಯೇಯವಾದರೂ ಏನು ಅನ್ನೋ ಪ್ರಶ್ನೆಗಳು ಆಗಿಂದ್ದಾಗ್ಗೆ ಹೆಚ್ಚಾಗಿ, ಆ ಪ್ರಶ್ನೆಗಳನ್ನೆಲ್ಲಾ ತಡೆಯೋ ಮಾರ್ಗವಾಗಿ ಪ್ರಸಾದ ರೀಸರ್ಚಿಗೆ ಸೇರಿದ. ರೀಸರ್ಚಿನ ಸಮಸ್ಯೆಯ ಮೇಲೆ ಹೆಚ್ಚು ಆಲೋಚಿಸೋದರ ಮೂಲಕ ಬೇರೆಲ್ಲಾ ಆಲೊಚನೆಯನ್ನ ತಡೆಯಬೋದು ಎಂದು. ಜೀವನದ ಧ್ಯೇಯಗಳು ಮರೀಚಿಕೆಗಳಿದ್ದಂತೆ. ಇದ್ದಂತೆ ಭಾಸವಾಗುತ್ತವೆ. ಹತ್ತಿರ ಹೋಗುತ್ತಿದ್ದಂತೆ, ಎಲ್ಲವೂ ಕರಗಿ ಮತ್ತೆ ಮುಂದೊಂದು ಮರೀಚಿಕೆ ಕಂಡುಬರುತ್ತದೆ. ಒಂದೈದು ವರುಷದ ಕೆಳಗೆ ಜೀವನದ ಧ್ಯೇಯವೇನೆಂದು ಕೇಳಿದ್ದರೆ, ಪ್ರಸಾದನ ಉತ್ತರ ಸುಭಾಷಿಣಿ ಆಗಿರುತ್ತಿತ್ತು. ಆದರೆ ಸುಭಾಷಿಣಿ ಸಿಕ್ಕ ನಂತರವೂ ಜೀವನೋಧ್ಯೇಯದ ಬಗೆಗಿನ ಪ್ರಶ್ನೆ ಮತ್ತೆ ಸುಳಿದಾಡಿದ್ದು, ಪ್ರಸಾದನಿಗೆ ಇದೊಂದು ಅನಂತ ಮರೀಚಿಕೆಯಂತೆಯೇ ಭಾಸವಾಯಿತಾದರೂ, ಇದರಿಂದ ಮುಕ್ತಿಯೂ ಇರಲಿಲ್ಲ ಆತನಿಗೆ.  ಸುಭಾಷಿಣಿ ಸೌಂದರ್ಯವತಿಯಾಗಿದ್ದಕ್ಕಾಗಿಯೇ ಮೊದಲಿಗೆ ಪ್ರಸಾದ ಆಕರ್ಷಿತನಾಗಿದ್ದಾದರೂ, ಮುಖ ಸೌಂದರ್ಯಾಕ್ಕಾಚೆಗಿನದ್ದೇನೋ ಆ ಆಕರ್ಷಣೆಯನ್ನು ನಿರಂತರವಾಗಿ ಉಸಿರಾಗಿಸಿತ್ತು. ಒಮ್ಮೆ ಸಿಕ್ಕ ಮೇಲೆ ಸಿಕ್ಕಾಯಿತಷ್ಟೆ. ಮತ್ತೆ ಮತ್ತೆ ಸಿಗಲಿಕ್ಕೆ ಕಳೆದುಹೋಗುವಂತಹದ್ದೇ? ಸಿಕ್ಕ ಮೇಲೆ ಮುಂದೆ? ಮತ್ತೆ ಮುಂದೊಂದು ಧ್ಯೇಯದ ಪ್ರಶ್ನೆ ಹುಟ್ಟಲೇ  ಬೇಕು. ಪ್ರಸಾದನ ಜೀವನದ ಬಗೆಗಿನ ಈ ಮೂಲಭೂತ ಯೋಚನೆಗಳಿಂದಲೇ ಎತಿಕ್ಸ್, ಸೇಲ್ಫಿಷ್ ಜೀನ್, ಎಸ್ಸೇಯ್ಸ್ ಆಫ್ ಫ್ರಾಯ್ಡ್ ಮೊದಲಾದ ಮೂಲಭೂತ ಚಿಂತನೆಗಳನ್ನೊಳಗೊಂಡ ಪುಸ್ತಕಗಳು ಆತನನ್ನ ಸಹಜವಾಗಿಯೇ ಆಕರ್ಷಿಸಿದ್ದವು. 

*******

ಪ್ರಸಾದನಿಗೆ ಮತ್ತೆ ಮತ್ತೆ ಆಕೆಯ ಉಬ್ಬೆದೆಯನ್ನ ನೋಡಲೇಬೇಕೆನ್ನುವ ಪ್ರಚೋದನೆಯುಂಟಾಗುತ್ತಿತ್ತು. ಆಕೆಯ ಗುರುತು ಪರಿಚಯವಿಲ್ಲ. ಆಕೆ ಎಲ್ಲಿಯವಳೂ ತಿಳಿದಿಲ್ಲ. ಆದರೆ ಆಕೆಯ ಭಂಗಿ, ದೇಹ ಲಾವಣ್ಯ ಮಾತ್ರ ಈತನಿಗೆ ಬಹಳ ಬೇಕಾದ್ದೇನಿಸಿತ್ತು. ಆಕೆ ಮಾತನಾಡುವಾಗ, ಆಕೆಯ ತುಟಿ ಚಲನೆಗಳ ಹಿಡಿತಕ್ಕೆ ಸಿಕ್ಕಿಹೋದ. ಕೋಲುಮುಖದ, ದಾಳಿಂಬೆ ಹಣ್ಣಿನಂತೆ ಜೋಡಿಸಿಟ್ಟಿದ್ದ ಹಲ್ಲುಗಳಿದ್ದ ಆಕೆಯ ಮುಖ ಸೌಂದರ್ಯಕ್ಕೆ ಮಾರು ಹೋದ. ಆಕೆಯೆದ್ದು , ''ಹಂ..'' ಕರಿಸಿ ಮಾತನಾಡಲು ಆರಂಬಿಸಿದಳು. ಅತ್ತಿಂದಿತ್ತ, ಇತ್ತಿಂದತ್ತ ಓಡಾಡುವಾಗ, ಆಕೆಯ ಬಳುಕು ಸೊಂಟ, ಪ್ಱುಷ್ಟಗಳ ಮೇಲೆಯೇ ಪ್ರಸಾದನ ಕಣ್ಣು ನೆಟ್ಟಿತ್ತು. ಒಮ್ಮೆ ಆಕೆಯ ಕಣ್ಣಿಗೆ ಸಿಕ್ಕಿಬಿದ್ದ. ಕಳ್ಳನೆಂದು ತೋರಿಕೊಡದಿರಲು ತಲೆಯೆತ್ತಿ ಗಡ್ಡ ಕೆರೆದುಕೊಳ್ಳಲಾರಂಭಿಸಿದ. ''ಯು ಆರ್ ಫೇರರ್  ದ್ಯಾನ್ ಐ ಎಕ್ಸ್ಪೆಕ್ಟೆಡ್ ಮಿಸ್ಟರ್ ಪ್ರಸಾದ್. ನನ್ನ ಪರಿಚಯಕ್ಕೆ ಬರ್ತೇನೆ. ಸ್ಪಿನೋಸಾ ಈಸ್ ಕ್ವೈಟ್ ಡಿಫಿಕಲ್ಟ್ ಟು ಫಾಲೋ. ಔಟ್ ಆಫ್ ಕ್ಯೂರಿಯಾಸಿಟಿ, ಐ ಟುಕ್ ಔಟ್ ದಿಸ್ ವೆನ್ ಮೈ ಫ್ರೆಂಡ್ ವಾಸ್ ಟೆಲ್ಲಿಂಗ್ ಮೀ ದಟ್ ಸ್ಪಿನೋಸಾ ಪ್ರೂವ್ಸ್ ದ ಎಕ್ಸಿಸ್ಟೇನ್ಸ್ ಆಫ್ ಗಾಡ್''. 
"ದೇವರ ಮೇಲೆ ನಂಬಿಕೆಯಿದೆಯೇ ನಿಮ್ಗೆ?" ಪ್ರಸಾದ ಮಧ್ಯೆ ಬಾಯಿ ತೂರಿಸಿದ. "ಹಂ. ಹೌದು ಅದು ನಂಬಿಕೆಯೇ. ಅಥವಾ ಅದೇ ರೀತಿಯ ಯಾವುದೋ ನಂಬಿಕೆಯಿಂದ ಪ್ರತಿಪಾದಿಸಲ್ಪಟ್ಟ ಒಂದು ಸತ್ಯ. ಆದರೇ ಆ ಸತ್ಯವೂ ಸಹ ನನ್ನ ಸ್ಱುಷ್ಟಿಯೇ. ಟ್ರೂಥ್ಸ್ ಚೇಂಜ್ ವೆನ್ ಫಮ್ಡಮೆಂಟಲ್ ಬಿಲೇಫ್ಸ್ ಚೇಂಜ್ ಅನ್ನೋ ನಂಬಿಕೆ ಇತ್ತು ನನಗೆ.  ಅದು ನಿಜ ಅನ್ನಿಸಿ ಖುಷಿಯಾಗಿ ಈ ಪುಸ್ತಕ ಕೈಗಿರಿಸಿದೆ. ಆದರೆ ಸ್ವಲ್ಪ ಕಷ್ಟವಾಗಿದೆ". 

ಇದ್ದಕ್ಕಿದ್ದ ಹಾಗೆ ಪ್ರಸಾದನಿಗೆ ಹತ್ತಿರದೇನೋ ವಿಚಾರಗಳು ತಲೆಯೊಳಗೆ ಸುಳಿದಾಡಿದಂತೆ ಭಾಸವಾಯಿತು. ಆತ ಸುಭಾಷಿಣಿಯಲ್ಲಿ ಕಂಡುಕೊಂಡ ಪ್ರಬುದ್ಧತೆ. ಈ ರೀತಿಯ ಮಾತುಗಳನ್ನ ತನ್ನ ಸುತ್ತಲಿನ ವಾತಾವರಣದಲ್ಲಿ ಕೇಳಿ ಅದೆಷ್ಟು ವರುಷಗಳೇ ಕಳೆದು ಹೋದವು? ಓಡುವ ಯಾಂತ್ರಿಕ, ಔಪಚಾರಿಕ ಜಗತ್ತಿಗೆ ಈ ಮಾತುಗಳ, ಈ ರೀತಿಯ ಸಂಭಾಷಣೆಗಳ ಅಗತ್ಯತೆಯಾದರೂ ಏನು? ಜಗತ್ತಿನೊಟ್ಟಿಗೆ ಓಡುತ್ತಿದ್ದ ಪ್ರಸಾದನಿಗೆ ಇದ್ದಕ್ಕಿದ್ದ ಹಾಗೆ ಬ್ರೇಕ್ ಸಿಕ್ಕಿತು. ಆಕೆಯ ಲಾವಣ್ಯ, ಆಕೆಯ ಮಾಂತ್ರಿಕ ಮಾತುಗಳು ಕಿಕ್ಕೇರಿಸುವ ಕಾಕ್ಟೇಲಾಗಿ ಪ್ರಸಾದನನ್ನ ನಿಯಂತ್ರಣಕ್ಕೆ ತೆಗೆದುಕೊಂಡಂತಿತ್ತು. ಆಕೆ ಮಾತು ಹಾಗೂ ನಡಿಗೆ ಎರಡೂ ನಿಲ್ಲಿಸದೇ ಮಾತಾಡಿದಷ್ಟೂ ಪ್ರಸಾದ ಖುಷಿಯ ಸಾಗರದಲ್ಲಿ ಮಿಂದೇಳುತ್ತಿದ್ದ. 'ನಾವು ಯಾರದ್ದೋ ಆಟದ ಕೈಗೊಂಬೆಗಳಂತೆ ನನಗೆ ಆಗಾಗ ಭಾಸವಾಗುತ್ತಿತ್ತು. ಅಂದರೆ ಅವೆಲ್ಲಾ ಯಾರೋ ಹೇಳಿದ್ದನ್ನ ಕೇಳೀಯೋ, ಇನ್ಯಾವುದೋ ಹಾಡಿನ ಸಾಲುಗಳ ಮೂಲಕವೋ ನನ್ನೊಳಗೆ ಇಳಿದಿದ್ದಿರಬಹುದು. ಆದರೆ ದಿನಗಳೆದಂತೆ ಈ ಕಲ್ಪನೆ  ತಾತ್ವಿಕ ನೆಲೆಯಲ್ಲಿ ಬೇರೆ ರೀತಿಯಲ್ಲಿ ರೂಪುಗೊಳ್ಳುತ್ತಾ ಹೋಯಿತು. ನಿಮಗೆ ವಿಲ್ ಪವರ್ ಮೇಲೆ ನಂಬುಗೆಯುಂಟೆ? ನಾವು ನಮ್ಮ ಸುತ್ತಲಿನ, ಪರಿಸ್ಥಿತಿಗಳ, ವಾತಾವರಣದ ಕೈಯಲ್ಲಿ ಸಿಕ್ಕಿಹಾಕಿಕೊಂಡ ಬಂಧಿಗಳಲ್ಲವೇ? ಸುತ್ತಲಿನ ಪ್ರಪಂಚಕ್ಕೆ ಹೊಂದಿಕೊಳ್ಳುವ ರೀತಿಯಲ್ಲಷ್ಟೇ ನಮ್ಮ ವಿಲ್ ಪವರ್ ಅನ್ನು ನಾವು ವರ್ಣಿಸಿಕೊಳ್ಳುತ್ತಾ ಹೋಗಬಹುದೇ ಹೊರತು, ಅದೂ ಸಹ ವಿಪರ್ಯಾಸವೆಂದು ತೋರುವುದಿಲ್ಲವೇ - ಅಂದರೆ ಕಟ್ಟಿಸಿಕೊಂಡ ಹಗ್ಗಕ್ಕೆ ಸರಿಯಾಗಿ ನಡೆಯುತ್ತಾ ಹೋಗುವುದು. ಹಾ ಹಾ. ಅದ್ಕಾಗಿಯೇ ಯಾರಾದರೂ 'ನಾನು ಸ್ವಾತಂತ್ರ ವ್ಯಕ್ತಿ' ಎಂದಾಗ ನಗು ಬರೋದು.  ನೀವು ಬಹಳ ಚೆನ್ನಾಗಿ ಪ್ರಶ್ನೆ ಕೇಳಿದಿರಿ. ನೋಡಿ, ನೀವು ನನಗೆ ದೇವರ ಮೇಲೆ ನಂಬಿಕೆಯಿಲ್ಲವೇ ಅಂತ ಕೇಳಲಿಲ್ಲ. ಅಂದರೆ, ಪರೋಕ್ಷವಾಗಿ ಇದು ನಿಮ್ಮ ದೈವ ವಿರೋಧತ್ವವನ್ನು ತೋರ್ತದೆ. ಅಲ್ಲವೇ?' 

ಪ್ರಸಾದನ ಮುಖದ ಮೇಲಿನ ಮಂದಸ್ಮಿತವೇ ಹೇಳುತ್ತಿತ್ತು ಆತನನ್ನ ಆಕೆ ಎಷ್ಟರ ಮಟ್ಟಿಗೆ ಇಂಪ್ರೆಸ್ ಮಾಡಿದ್ದಾಳೆಂದು. ಪ್ರಸಾದ ಏನನ್ನೋ ಹೇಳಲು ಬಾಯ್ತೆರೆಯಲು ಮುಂದಾಗ್ತಿದ್ದಂತೆಯೇ, ಆಕೆ ಪುನಃ ಆರಂಬಿಸಿದಳು. 'ಹಾಂ.. ಹಾಂ.. ರಾಮ್ ಐ ಆಲ್ವೇಸ್ ಲೈಕ್ಡ್ ಯುವರ್ ವೇ ಆಫ್ ಅಪ್ರೋಚ್ ಇನ್ ಸೀಕಿಂಗ್ ಟ್ರೂತ್ ಅಂಡ್ ಜಸ್ಟೀಸ್'. 'ಹಾಂ..!' ರಾಮ್ ಆಶ್ಚರ್ಯಚಕಿತನಾದ. 'ರಾಮ್.. ಐ ಹಾವ್ ಬೀನ್ ಫಾಲೋಯಿಂಗ್ ಯು ಫ್ರಮ್ ಸೋ ಮೆನಿ ಡೇಸ್. ನಿಮ್ಮ ಹೋರಾಟ, ನಿಮ್ಮ ವಾದಗಳು ಎಲ್ಲವನ್ನೂ ನೋಡುತ್ತಾ ಬಂದಿದ್ದೇನೆ. ಐ ವಾಸ್ ಇಂಪ್ರೆಸ್ಸೆಡ್. ಅದ್ಕಾಗಿಯೇ ಹಲವಾರು ಬಾರಿ ನಿಮ್ಮೊಟ್ಟಿಗೆ ಮಾತಾಡ್ಬೇಕು ಅಂತ ಪ್ರಯತ್ನ ಪಟ್ಟಿದ್ದೆ. ನನಗೆ 'ಸತ್ಯ' ಅನ್ನೋದು ಹೆಚ್ಚು ಆಕರ್ಷಣೀಯ ವಿಷಯ. ಸುಮಾರು ದಿವಸಗಳಿಂದ ಆ ಹೆಣ್ಣಿಗಾಗಿ ನೀವು ನಡೆಸುತ್ತಿರುವ ಹೋರಾಟವನ್ನು ಗಮನಿಸುತ್ತಲೇ ಬಂದಿದ್ದೇನೆ. ನೀವು ಎಡವುಟ್ಟಿದ್ದೀರೇ ಎಂದು ನನಗೊಮ್ಮೆ ದಿಗಿಲಾಯಿತು. ನೀವು ಬೆಂಬಲಿಸ್ತಿರೋ ಆಕೆಯ ಮೇಲೆ ದೌರ್ಜನ್ಯ ಆಗಿದೆ ಅನ್ನೋದು ನಿಮ್ಮ ಮೊದಲನೇ ವಾದ. ದೌರ್ಜನ್ಯವನ್ನ ಎಸಗಿದೋರು ಪ್ರೊಫೆಸರ್. ಶ್ಯಾಮ್ ಸುಂದರ್ ಎನ್ನೋದು ಎರಡನೆಯದು' ಪ್ರಸಾದ್ ಮಧ್ಯೆ ಬಾಯಿ ತೂರಿಸಿದ - 'ಪ್ಲೀಸ್ ಡೋಂಟ್ ಯೂಸ್  ಪ್ರೊಫೆಸರ್  ಫಾರ್ ದಟ್ ಬ್ಲಡಿ....' 

'ಓಕೆ. ಓಕೆ. ಅದನ್ನೇ ನಾನು ನಿಮ್ಮ ಬಳಿ ಮಾತಾಡಕ್ಕಿರೋದು. ನಾ ಆಗಲೇ ಹೇಳಿದೆ. ನನ್ನ ಮುಖ್ಯ ಉದ್ದೇಶವೆಲ್ಲಾ ಸತ್ಯದ ವಿಶ್ಲೇಷಣೆಯಲ್ಲಿ. ಓಹ್ ಸೊಳ್ಳೆಗಳು ಹೆಚ್ಚಾಗ್ತಿದ್ದಾವೆ. ನಾವು ಯಾಕೆ ಒಳಗೆ ಕೂತು ಮಾತನಾಡಬಾರದು? ನನಗೆ ನಿಮ್ಮ ಬಳಿ ತುಂಬಾ ಮಾತನಾಡೋದಿದೆ'

'ಶೂರ್' ರಾಮಪ್ರಸಾದ ಆಕೆಯ ಹಿಂದೆಯೇ ನಡೆದ. ಸಂಜೆಯ ಬೆಳಕಿನ್ನೂ ಸಾಕಿತ್ತು ಆಕೆಯ ಬಳುಕುವ ನಡು, ಪೃಷ್ಠಗಳನ್ನು ಕಾಣಿಸಲು. ಆಕೆಯನ್ನೇ ಹಿಂಬಾಲಿಸುತ್ತಾ ಒಂದು ರೂಮಿನೊಳಗೆ ನಡೆದ. ಮಧ್ಯದಲ್ಲಿ ಒಂದು ಮಂಚ, ಅದರ ಒಂದು ಪಕ್ಕ ಒಂದು ಸೋಫಾ ಹಾಗೂ ಅದರ ಮುಂದೆ ಸಣ್ಣ ಟೀಪಾಯಿ. ಸಣ್ಣದಾಗಿ ಹಳದಿ ಬೆಳಕು ಕಾರುವ ಬಲ್ಬೊಂದಷ್ಟೇ ಆನ್ ಆಗಿತ್ತು. ಫ್ಯಾನಿನ ಸ್ವೀಚ್ಚನ್ನು ಆನ್ ಮಾಡಿ ಆಕೆ ಬಂದು ಸೋಫಾ ಮೇಲೆ ಕೂತು ಕೈ ತೋರಿಸಿದಳು. 
'ಆಹ್.. ಸ್ವಲ್ಪ ಸೆಕೆ ಆಚೆಗಿಂತ', ಎನ್ನುತ್ತಾ ಅಂಗಿಯ ಮೇಲೀನ ಬಟನ್ನನ್ನು ಬಿಚ್ಚಿ ಮತ್ತೆ ಕಾಲು ಮೇಲೆ ಕಾಲು ಹಾಕಿ ಕೂತಳು. ಪ್ರಸಾದನಿಗೆ ಅಲ್ಲಿರುವುದೋ ಹೊರಟಿಬಿಡುವುದೋ ಎನ್ನುವ ಸಣ್ಣ ಗೊಂದಲ ಮೂಡಿದರೂ, ಆಕೆಯ ಬಂಧನ ಬಹಳ ಗಟ್ಟಿಯಿದ್ದಂತ್ತಿತ್ತು. 
'ನಾನು ನಿಮ್ಮ ವಾದಗಳನ್ನ ಗಮನಿಸ್ತಾ ಬಂದಿದ್ದೇನೆ ರಾಮ್.. ನೀವು ಪ್ರೇಜುಡೈಸ್ಡ್ ಆಗಿರಬೋದಲ್ಲ ಅನ್ನೋದನ್ನ ನಿಮ್ಮೊಟ್ಟಿಗೆ ಅವತ್ತಿನಿಂದ ಮಾತನಾಡಲೇಬೇಕೂಂತ ಕಾಯ್ತಾ ಇದ್ದೇ. ಆಕೆಯೊಟ್ಟಿಗೆ ಇನ್ನೂ ನಾಲ್ಕಾರು ಹೆಣ್ಣು ಮಕ್ಕಳೂ  ಸಹ ಶ್ಯಾಮ್ ಸುಂದರ್ ವಿರುದ್ಧ ತಮ್ಮ ದೂರುಗಳನ್ನು ಸಲ್ಲಿಸಿದ ಕೂಡಲೇ ನೀವು ನಂಬಿಬಿಟ್ಟರಲ್ಲ ಎನ್ನೋದು ನನಗೆ ಆಶ್ಚರ್ಯವಾಯಿತು.'
'ಆ ಹುಡುಗಿಯರನ್ನ ನಾನು ನಿಮ್ಮ ಮುಂದೆ ತಂದು ನಿಲ್ಲಿಸಿದಾಗ ನೀವೂ ಸಹ ಅವರು ಹೇಳ್ತೀರೋದನ್ನ ನಂಬಿಯೇ ತೀರ್ತೀರಿ. ದೆ ಡು ನಾಟ್ ಜಸ್ಟ್ ಲುಕ್ ಇನ್ನೊಸೆಂಟ್, ದೆ ಆರ್ ರಿಯಲಿ ಇನ್ನೊಸೆಂಟ್. ಜೊತೆಗೆ ಐ ನೋ ಅಬೌಟ್ ದಟ್ ಗಯ್ ವೆರಿ ವೆಲ್.'

'ಐ ಅಂಡರ್ಸ್ಟಾಂಡ್ ಯುವರ್ ಎಮೋಷನ್. ಮೇ ಬಿ ನೀವು ಹೇಳೋದು ನಿಜ ಇರಬೋದು. ಆದರೆ ಆಗಲೇ ನಾ ಹೇಳಿದಂತೆ, ನಾನು ಸತ್ಯದ ವಿಶ್ಲೇಷಣೆಯಲ್ಲಿ ಆಸಕ್ತಿಯುಳ್ಳವಳು. ನೀವು ಮತ್ತೆ ಪೂರ್ವಾಗ್ರಹದ ಹಳ್ಳದಲ್ಲೇ ಬೀಳ್ತಿದ್ದೀರಂತ ತೋರ್ತದೆ. ಅದೇ ನಿಮ್ಮನ್ನ ಸತ್ಯದಿಂದ ಕಣ್ಣು ಕಟ್ಟಿಸಿ ಇಟ್ಟಿರಬೋದಲ್ಲ? ಅಕಸ್ಮಾತ್, ಸತ್ಯವೇ ಬೇರೆ ಇತ್ತು ಅಂತ ಅಂದುಕೊಳ್ಳಿ. ಐ ಮೀನ್, ಸಪೋಸ್, ಶ್ಯಾಮ್ ಸುಂದರ್ ವಾಸ್ ರಿಯಲಿ ಇನ್ನೋಸೆಂಟ್ ಇನ್ ದಿಸ್. ನಾನು ಹೇಳ್ಬೇಕಾಗಿರೋದು ಇಷ್ಟೇ. ನಿಮ್ಮ ಬಳಿ ಇರೋ ಸಾಕ್ಷಿ ಶ್ಯಾಮ ಪ್ರಸಾದನನ್ನ ಅಪರಾಧಿ ಅಂತ ಬೊಟ್ಟು ಮಾಡಿ ತೋರಿಸ್ತಿಲ್ಲ. ನಿಮ್ಮ ಕಲ್ಪನೆಯ ಪ್ರಕಾರ ಆತ ನೀವು ಹೇಳುವಂಥದ್ದೇ ವ್ಯಕ್ತಿ ಆಗಿರಬೋದು. ಆದರೆ ಪ್ರಸ್ತುತ ಕೇಸಿನಲ್ಲಿ ಆತನ ಅಪರಾಧವೇ ಇಲ್ಲವಾದಲ್ಲಿ? ದೆ ಮೇ ಸೀಮ್ ರಿಯಲಿ ಇನ್ನೊಸೆಂಟ್. ಬಟ್ ಹೌ ಡು ವಿ ನೋ ದ ಟ್ರೂತ್? ಓಕೆ ಫಾರ್ ಟೈಮ್ ಬೀಯಿಂಗ್ ಲೆಟ್ ಅಸ್ ಟೇಕ್ ಫಾರ್ ಗ್ರಾಂಟೆಡ್ ದಟ್ ದೇರ್ ವಾಸ್ ಆನ್ ಅಫೇರ್ ಬಿಟ್ವೀನ್ ದ ಟೂ. ಆದರೆ ಅದು ಯಾವುದೋ ಬಲವಂತವಲ್ಲದ ನಿರ್ಬಂಧನೆಗೆ ಒಳಪಟ್ಟು ಇಬ್ಬರ ಒಪ್ಪಿಗೆಯ ಮೇಲೆ ನಡೆದ ಮ್ಯೂಚ್ಚುಯಲ್ ಹೆಲ್ಪ್ ಆಗಿದ್ದೀರಬೋದಲ್ಲ? ಯಾಕೆ ಆಕೆ ಎರಡು ವರ್ಷದ ತರುವಾಯ ಇದನ್ನ ಹೊರಗೆಳೆದಿದ್ದು? ಮೇ ಬಿ ಸಂಥಿಂಗ್ ಈಸ್ ನಾಟ್ ವರ್ಕಿಂಗ್ ಫಾರ್ ಹರ್ ನೌ? ಸೀ, ನಾನು ನಿಮ್ಮನ್ನ, ನಿಮ್ಮ ದಾರಿಯನ್ನ ಮೇಚ್ತೇನೆ. ನಿಮ್ಮಿಂದ ಬಹಳ ಪ್ರಭಾವಿತಳಾಗಿದ್ದೇನೆ ಕೂಡ. ನಾವು ಫಾಲೋ ಮಾಡುವ ವ್ಯಕ್ತಿಯೇ ಎಲ್ಲೋ ಆತನ ಸಿದ್ಧಾಂತಕ್ಕೆ ಹೊಂದಿಕೊಳ್ಳದಂತೆ ನಡೆದುಕೊಳ್ಳೋವಾಗ, ನಮಗೆ ಕಸಿವಿಸಿ ಆಗೋದು ಸಹಜವೇ ಅಲ್ಲವೇ? ಸೀ ಐ ಆಮ್ ನಾಟ್ ಹಿಯರ್ ಟು ಫೈಂಡ್ ಔಟ್ ದ ಕಲ್ಪ್ರೀಟ್. ಅದು ನನಗೆ ಅವಶ್ಯಕವೂ ಅಲ್ಲ. 'ಸತ್ಯದ' ಹುಡುಕಾಟದ ದಾರಿಯನ್ನಷ್ಟೇ ನಾನು ಎಂಜಾಯ್ ಮಾಡ್ತೇನೆ. ಒಂದು ಹೆಣ್ಣಾಗಿ ಇನ್ನೊಂದು ಹೆಣ್ಣಿಗೆ ಅನ್ಯಾಯವಾಗಿದೆ ಅಂತ ಎಲ್ಲರೂ ಹೇಳ್ತಿದ್ದರೂ ನಾನು ಅದರ ವಿರುದ್ಧ ಮಾತಾಡ್ತಿದ್ದೇನೆ ಅನ್ದ್ಕೋತಾರೆ ಎಲ್ರೂ. ಇಲ್ಲ. ಐ ಆಮ್ ಬಿಹೈಂಡ್ ದ ಟ್ರೂತ್ ಅಷ್ಟೇ. ಇದರ ಹುಡುಕಾಟದಲ್ಲಿ ನಾವು ಮುಕ್ತ ಮನಸ್ಸಿವರಾಗಿರ್ಬೇಕಾಗ್ತದೆ ಅಷ್ಟೇ. ಒಬ್ಬ ವ್ಯಕ್ತಿ ಆದಷ್ಟು ಪ್ರೇಡಿಕ್ಟಬಲ್ ಆಗಿರಬೇಕು ಅನ್ನೋದು ನನ್ನ ವಾದ. ಯು ಗಾಟ್ ಡೀವಿಯೇಟೆಡ್. ಹಾಗಾಗಿ ಮಾತಾಡಲೇಬೇಕಿನಿಸಿತ್ತು.'

ರಾಮಪ್ರಸಾದನಿಗೆ ನಡುವೆಲ್ಲೂ ಅಡ್ಡಪಡಿಸಬೇಕೆನಿಸಲೇ ಇಲ್ಲ. ಆಕೆ ತೀರಾ ಹತ್ತಿರದಲ್ಲೇ ಕೂತಿದ್ದಳು. ಆಕೆಯ ಉಸಿರಿನ ಏರಿಳಿತ ಭಾಸವಾಗುವಷ್ಟು. ಆಕೆಯ ದೇಹದ ಆರೋಮ ನಿರಂತರವಾಗಿ ಮೂಗನ್ನ ಸೋಕುತ್ತಲೇ ಇರುವಷ್ಟು. ನಡು ನಡುವೆ ಕೋಮಲ ಕೈಗಳು ಇವನನ್ನ ಸವರಿ ಹಾಯುವಷ್ಟು. ಯಾವುದೇ ಕಾರಣಕ್ಕೂ ಈಕೆಯ ಮಾತುಗಳನ್ನ ಗಂಭೀರವಾಗಿ ಪರಿಗಣಿಸದಿರಲಿಕ್ಕಾಗಲಿ, ಆಕೆಗೆ ತನ್ನ ಮೇಲಿದ್ದ ಗೌರವದ ನೈಜತೆ ಬಗ್ಗೆ ಯೋಚಿಸಲಾಗಲೀ ಪ್ರಸಾದ ಮುಂದಾಗಲಿಲ್ಲ. ಆಕೆಯ ಬಗೆಗಿದ್ದ ಪ್ರಶ್ನೆಗಳೆಲ್ಲ ಈಗ ಮಾಯವಾಗಿದ್ದವು. ಆ ಮಂದ ಬೆಳಕಿನಲ್ಲಿ ಆಗಾಗ ಅತ್ತಿತ್ತ ಓಲಾಡುತ್ತಿದ್ದ ಆಕೆಯ ದೇಹ, ಹಾಗೆಯೇ ಆಕೆಯ ಪ್ರಬುದ್ಧ ಮಾತುಗಳಿಗೆ ಆತ ಸೋತುಹೋಗಿದ್ದ. ಆಕೆಯ ಕೈ ತಾಕಿದಾಗೆಲ್ಲಾ, ಆಕೆ ಈತ ಹತ್ತಿರಕ್ಕೆ ಬಂದಾಗೆಲ್ಲ, ಮನಸ್ಸು ಒಮ್ಮೆಲೇ ಹೊಡೆದುಕೊಳ್ಳುತ್ತಿತ್ತು. ಆ ರೂಮಿನಲ್ಲಿ ಇಬ್ಬರೇ - ಪ್ರಾಯದ ಗಂಡು, ಹೆಣ್ಣು. 

'ನಾ ಯಾರೆನ್ನೋದು ನಿಮಗೆ ಅನವಶ್ಯಕ. ನಿಮ್ಮ ತತ್ವವನ್ನ, ಸಿದ್ಧಾಂತಗಳನ್ನ ಮೆಚ್ಚಿರುವವಳಷ್ಟೇ. ಅಷ್ಟಕ್ಕೂ ಕುತೂಹಲವಿದ್ದಲ್ಲಿ, ನಾನು ಯೂನಿವರ್ಸಿಟೀ ಅಡ್ಮಿನಿಸ್ತ್ರೇಟೀವ್ ಬಿಲ್ಡಿಂಗ್ ನಲ್ಲಿ ಇರ್ತೇನೆ. ನೀವು ಇಲ್ಲಿ ಬರ್ತೀರಿ ಇವತ್ತು ಅನ್ನೋ ಸುದ್ದಿ ಮಧ್ಯಾನವಷ್ಟೆ ತಿಳಿದದ್ದರಿಂದ ನಾನೂ ಸಹ ಬಂದಿದ್ದೆ. ಥ್ಯಾಂಕ್ ಯು ಫಾರ್ ದ ಟೈಮ್' ಎಂದು ಆತನ ಭುಜದ ಮೇಲೆ ಕೈ ಇಟ್ಟು ಆತನನ್ನೇ ದಿಟ್ಟಿಸಿ ನೋಡಲಾರಂಭಿಸಿದಳು. 

 'ನಿಮ್ಮ ಹೆಸರು...?'

'ಲಾವಣ್ಯ..' 

'ಸತ್ಯ ಹೇಳಲೇ? ನಿಮ್ಮ ಹೆಸರಿಗೆ ತಕ್ಕ ಹಾಗೆಯೇ ಇದ್ದೀರಿ' ಪ್ರಸಾದನೂ ಆಕೆಯ ಕಣ್ಣನ್ನೇ ದಿಟ್ಟಿಸಲಾರಂಭಿಸಿದ. ಪ್ರಸಾದ ಅನಿಯಂತ್ರಿತನಾದ


********

'ಐ ಆಮ್ ಸಾರಿ..' ಅಂಗಿ ಗುಂಡಿಗಳನ್ನು ಹಾಕುತ್ತಿದ್ದ ಪ್ರಸಾದನಿಗೆ ಎಲ್ಲವೂ ಇದ್ದಕ್ಕಿದ್ದ ಹಾಗೆ ಹೇಸಿಗೆಯೆನಿಸತೊಡಗಿತು. ಕೇವಲ ಕ್ಷಣಾರ್ಧದಲ್ಲಿ, ಸುಭಾಷಿಣಿಗೆ ಹೇಳಿದ್ದೆಲ್ಲಾ ಮಾತುಗಳೂ ನೆನಪಾಗುತ್ತಾ ಮತ್ತೂ ಮತ್ತೂ ಹೇಸಿಗೆಯಾಗತೊಡಗಿತು. 'ಛೇ..' ಎಂದು ಮತ್ತೆ ಮತ್ತೆ ಒಳಗೊಳಗೆಯೇ ಉಗಿದುಕೊಂಡ. ಮನುಷ್ಯನ ಶಕ್ತಿ ಕೇವಲ ಇನ್ನೊಬ್ಬನ್ನ ಹೊಡೆಯೋದ್ರಲ್ಲಾಗಲೀ, 400-500 ಕೆಜಿ ತೂಕ ಎತ್ತೋದ್ರಲ್ಲಾಗಲೀ ಅಲ್ಲ. ಮನ್ನಸಿನ ನಿಯಂತ್ರಣದಲ್ಲಿ ಎನ್ನುವ ತನ್ನ ಮಾತುಗಳೇ ಆತನ ಕೆನ್ನೆಗೆ ರಪ್ ರಪ್ ಎಂದು ಬಾರಿಸಿದಂತಾಯಿತು. 

'ಪ್ಲೀಸ್.. ವೈ ಡು ಯು ಆಸ್ಕ್ ಸಾರೀ. ನನಗೆ ಯಾವುದೇ ಬೇಸರವಿಲ್ಲ. ನಿಮ್ಮ ಈ ಒಡನಾಟ ಒಂದು ದಿನಕ್ಕಾದರೂ ಸಿಕ್ಕದ್ದು ನನಗೆ ತೃಪ್ತಿಯಿದೆ' ಹೊದೆದಿದ್ದ ಹೊದಿಕೆಯೊಂದಲೇ ಹೇಳಿದಳು. 

 ಏನೂ ಮಾತಾಡದೇ ಪ್ರಸಾದ ಎದ್ದು ಸೀದಾ ಹೊರನಡೆದ. ಹೊರಗೆ ಯಾರೂ ಇರಲಿಲ್ಲ. ಗೆಸ್ಟ್ ಹೌಸ್ ಖಾಲಿ. ಕೈ ಕಾಲು ಕಟ್ಟಿ ಕುಳ್ಳಿರಿಸಿದ್ದ ಆ ಇಬ್ಬರೂ ಸಹ ಇರಲಿಲ್ಲ. ಬಾಗಿಲು ತೆರೆದೇ ಇತ್ತು. ಒಬ್ಬ ವಾಚ್ಮಾನ್ ಅಷ್ಟೇ ಗೇಟಿನ ಬಳಿ. ಈತ ಹೊರ ನಡೆಯುತ್ತಿದ್ದಂತೆ ಸೆಲ್ಯೂಟ್ ಮಾಡಿದ. ಪ್ರಸಾದನಿಗೆ ಆತನ ಮುಖವನ್ನು ನೋಡಲೂ ಸಹ ಹಿಂಜರಿಕೆಯಾಯ್ತು. ಜೋರು ಗಾಳಿ ಬೀಸುತ್ತಿದ್ದರೂ, ಆರದೇ ಉಳಿದಿದ್ದ ಈತನ ಬೆವರು ಅವನಿಗೆ ಮತ್ತಷ್ಟು ಕಿರಿಕಿರಿ ಉಂಟು ಮಾಡ್ತಿತ್ತು. 

********

ಸುಭಾಷಿಣಿಯ ಮುಖವನ್ನೂ ನೋಡಲಾಗದೇ ಪ್ರಸಾದ ಸೀದಾ ರೂಮಿಗೆ ಹೋಗಿ ಹಾಸಿಗೆಯ ಮೇಲೆ ಬಿದ್ದ. ಬಿದ್ದಲ್ಲೇ ನಿದ್ದೆ ಹತ್ತಿತ್ತು. ಒಂದೆರೆಡು ದಿನ ಪ್ರಸಾದ ತೀರಾ ಮೌನವಾಗಿದ್ದದ್ದು ಮನೆಯಲ್ಲಿ ಯಾರನ್ನೂ ಏನೂ ಗೊಂದಲಕ್ಕೀಡು ಮಾಡಲಿಲ್ಲ. ಇದು ಮಾಮೂಲಾಗಿತ್ತು. ಆದರೆ ಮೂರು ದಿನಗಳು ಕಳೆದ ಮೇಲೆ, ಒಂದು ರಾತ್ರಿ ಪ್ರಸಾದನ ಹೃದಯ ಇದ್ದಕ್ಕಿದ್ದ ಹಾಗೆ ಭಾರವಾಗತೊಡಗಿತು - ಅದೇ ಇನ್ನೆಂದೂ ಬೇಡವೆಂದು ಬಯಸಿದ್ದ ಆ ರಾತ್ರಿ ಆದಂತೆ. ಮನಸ್ಸು ಮತ್ತೆ ಮತ್ತೆ ಬೇಡವೆಂದರೆ ಅಲ್ಲಿಗೇ ಹೊರಟಿತು. ಇದ್ದಕ್ಕಿದ್ದ ಹಾಗೆ ಉತ್ಸುಕನಾಗತೊಡಗಿದ. ಗೋಡೆಯನ್ನೇ ದಿಟ್ಟಿಸಿ ನೋಡ್ತೀದ್ದನಾದರೂ, ಅದರ ಮೇಲೆ ಮೂಡ್ತಿದ್ದ ಚಿತ್ರಗಳೇ ಬೇರೆ. ಮತ್ತೆ ಬೇಕೆನಿಸಿತು - ಆಕೆಯ ದೇಹ. 

'ಇಲ್ಲಿ ಲಾವಣ್ಯ ಅಂತ ಇದಾರಲ್ಲಾ. ಎಲ್ಲಿ ಸಿಗ್ತಾರೆ?' ಎಷ್ಟೇ ಅಂದುಕೊಂಡರೂ ತಡೆಯಲಿಕ್ಕಾಗದೆಯೇ ಎರಡು ವಾರಗಳು ಕಳೆದು ಯೂನಿವರ್ಸಿಟೀ ಅಡ್ಮಿನಿಸ್ಟ್ರೇಷನ್ ಬ್ಲಾಕಿಗೆ ಹೋಗಿದ್ದ. 
'ಸಾರಿ ಸಾರ್. ಆ ಥರ ಯಾರು ಇಲ್ಲಿ ಗೊತ್ತಿಲ್ಲ. ನಾನು ಇಲ್ಲಿಗೆ ಹೊಸಬ. ಹೋದವಾರವಷ್ಟೆ ಬಂದದ್ದು.' 
ಪ್ರಸಾದ ಮತ್ತೊಂದಿಬ್ಬರನ್ನು ವಿಚಾರಿಸಿಯೂ ನೋಡಿದ. ಲಾವಣ್ಯ ಎನ್ನುವ ಹೆಸರಲ್ಲಿ ಮೂರ್ನಾಲ್ಕು ಜನರಿದ್ದು, ಅದರಲ್ಲೋಂದಿಬ್ಬರು ಹಿಂದಿನ ವಾರವಷ್ಟೇ ಕೆಲಸ ಬಿಟ್ಟಿದ್ದಾಗಿ ತಿಳಿಯಿತು. ಮಿಕ್ಕುಳಿದವರ್ಯಾರೂ ಆ ಲಾವಣ್ಯಾರಾಗಿರಲಿಲ್ಲ. 
'ಕೆಲಸ ಬಿಟ್ಟಳೇ? ಛೇ..' ಪ್ರಸಾದನಿಗೆ ಆಕೆಯನ್ನು ಹುಡುಕುವ ಯಾವುದೇ ಮಾರ್ಗಗಳು ತೋಚದೆ, ಸಿಕ್ಕದೆ ಹೋಯಿತು. 

***********

'ಹಾ ಹಾ ಹಾ...' ಗೆಸ್ಟ್ ಹೌಸಿನ ಒಳಗಿಂದ ಜೋರಾಗಿ ನಗುವಿನ ಸದ್ದು.  ಹೆಣ್ಣಿನ ಧ್ವನಿ. 
'ಸೀ.. ನಾನು ಹೇಳಿರ್ಲಿಲ್ವ. ನನ್ನ ತೆಕ್ಕೆಗೆ ಬೀಳದ ಯಾವ ಮನುಷ್ಯನೂ ಇಲ್ಲ ಅಂತ. ಆರ್ ಯು ಹ್ಯಾಪಿ ನೌ?
'ಓಹ್.. ಯೆಸ್. ಥ್ಯಾಂಕ್ ಯು ವೆರೀ ಮಚ್. ನಿನ್ನೊಬ್ಬಳಿಂದಲೇ ಇದು ಸಾಧ್ಯ ಅಂತ ನನಗೆ ತಿಳಿದಿತ್ತು. ನಾನು ಸಾಕಷ್ಟು ಪ್ರಯತ್ನ ಮಾಡಿದೆ. ಆತನನ್ನ ಅವರಿಂದ ದೂರ ಇರಿಸೊಕ್ಕೇ. ಬೆದರಿಕೆಗೂ, ಹಲ್ಲೆಗೂ ಜಗ್ಗಲಿಲ್ಲ. ಸೂರಿ ಹೆಲ್ಪೆಡ್ ಮೀ ಔಟ್. ಐ ಮಸ್ಟ್ ಥ್ಯಾಂಕ್ ಹಿಂ ಟು. ಅಬ್ಬಾ ಒಂದು ತಿಂಗಳೇ ಕಳೆದು ಹೋಗಿತ್ತಲ್ಲ, ನಿನ್ನಿಂದ ದೂರಾ ಇದ್ದು.'
'ಹಾ.. ಹಾ.. ಐ ಆಮ್ ಗೋಯಿಂಗ್ ಟು ಮಾಲ್ಡೀವ್ಸ್ ನೆಕ್ಸ್ಟ್ ವೀಕ್.. ಮತ್ತೆ ಯಾವಾಗ ಸಿಗ್ತೇನೆ ಗೊತ್ತಿಲ್ಲ. ನನ್ನನ್ನ ವಿಚಾರಿಸ್ಕೋಬೇಕಲ್ಲ ನೀನು ಸ್ವಲ್ಪ.'
'ಓಹ್ ಡಾರ್ಲಿಂಗ್. ಪ್ಲೀಸ್ ಡೊಂಟ್ ಲೀವ್ ಮೀ ಫಾರ್ ಎ ಲಾಂಗ್ ಟೈಮ್..  ನಾಳೆ ನಿನ್ನ ಮನೆಗೆ ಬೇಕಾದ್ದು ಬರತ್ತೆ.  ಕಮ್ ಸೂನ್ ಪ್ಲೀಸ್..'
'ಹಾ..ಹಾ..ಹಾ..' 




No comments:

Post a Comment