ನನ್ನ ಜೀವನ ಒಂದು ರೀತಿ ತೂತಾದ ಬಿಂದಿಗೆಯನ್ನು ನೀರಿನಿಂದ ತುಂಬಿಸುವಂತ ಪ್ರಯತ್ನದಂತೆ ತೋರುತ್ತದೆ. ನೀರು ನಿಲ್ಲದೆ ಹರಿದು ಹೋಗುತ್ತಿರುವ ಹಾಗೆ ನನ್ನ ಹಿಂದಿನ ಕಾಲೇಜಿನ ನೆನಪುಗಳೂ, ಸ್ನೇಹಿತರೂ ಎಲ್ಲರೂ ಸ್ಮೃತಿಯಿಂದ ಅದೆಷ್ಟು ಬೇಗ ಮಾಯವಾಗಿ ಹೋಗಿಬಿಡುತ್ತಾರೆ. ಒಪ್ಪುತ್ತೇನೆ, ನನ್ನ ಹಿಂದಿನ ಜೀವನದ ನೆನಪಿನ ಅಥವಾ ಅನುಭವಗಳ ಶೇಖರಣೆಗಳೇ ‘ನಾನು’ ಎನ್ನುವುದರ ನಿರ್ಮಾತೃಗಳು! ನಾನು ಮರೆತಿದ್ದೇನೆಂದರೂ ಅವು ಸುಪ್ತ ಲೋಕದ ಹಿಡಿತದಲ್ಲಿ ಬಂಧಿಗಳಾಗಿದ್ದೇ ಇರುತ್ತವೆ!