Tuesday, May 11, 2021

ಮುಕ್ತಿ

 

ಮುಂದೆ? ಜೀವನದಲ್ಲಿ ಏನಾಗ್ಬೇಕು ಅನ್ಕೊಂಡಿದ್ದೀರಿ? ಏನ್ ಮಾಡ್ಬೇಕು ಅನ್ಕೊಂಡಿದ್ದೀರಿ?”

“ಗೊತ್ತಿಲ್ಲ” ಅನ್ನೋದಷ್ಟೇ ಸ್ಪಷ್ಟವಾಗಿ ತಿಳಿದಿರೋದು ಅವನಿಗೆ. ಅದನ್ನ ಹೇಳೋ ಅಷ್ಟು ಧೈರ್ಯವನ್ನೂ, ಏಕತಾನತೆಯನ್ನೂ ಜೀವನವೇ ತರಿಸಿಬಿಟ್ಟಹಾಗಿದೆ. ಹೇಳಬೋದು ಸಾಕಷ್ಟು. “I want to be a top class Mathematician!” ಆದರೆ ಅದೆಲ್ಲಾ ‘Under pressure’ ಹುಟ್ಟಿದ ಉತ್ತರಗಳು. Mathematics ಅನ್ನೋದು ಒಂದು ಕಲೆ – a creative art! ತಾನೇನೂ ಅಂತಾ out of the box ಅನ್ನೋವಂಥದ್ದೋ ಅಥವಾ ಉತ್ಕೃಷ್ಟವಾದದುದನ್ನೋ ಸೃಜಿಸಲು ಸಾಧ್ಯವಿಲ್ಲವೆನ್ನೋದು ಅವನಿಗೆ ತಿಳಿದಿದೆ. ಹಾಗಂದ ಮಾತ್ರಕ್ಕೆ ಇವನನ್ನ ತಡೀಲಿಕ್ಕೆ ಇವನನ್ನೇ ಬಿಟ್ಟು ಬೇರಾರಿಂದಲೂ ಸಾಧ್ಯವೇ ಇಲ್ಲ. ಒಂದಲ್ಲಾ ಒಂದು ದಿನ ವಿಶ್ವವೇ ನಿಬ್ಬರಗಾಗುವಂತಹದ್ದೊಂದನ್ನ ಸೃಷ್ಟಿಸಿಯೇ ತೀರುವೆನೆಂಬಂತೆ ಒಮ್ಮೊಮ್ಮೆ ಅಹಂಕಾರದಿಂದ ಮುನ್ನುಗ್ಗುತ್ತಾನೆ. ಮುಗ್ಗರಿಸಿ ಮುಗ್ಗರಿಸಿ ಮತ್ತೆ ಹಿಂದೆಯೇ ಬಂದು ಬೀಳುತ್ತಾನೆ. ಇದನ್ನೇ ಏಕೆ  ಮಾಡ್ತಿದ್ದಾನೆ ಅನ್ನೋದರ ಬಗ್ಗೆ ಎಂದಿಗೂ ಸ್ಪಷ್ಟವಾಗಿ ಈತ ಆಲೋಚಿಸಿಲ್ಲ. Of course ಇದನ್ನ ಬಿಟ್ಟು ಬೇರೆಲ್ಲೂ ಹೆಸರು ಸಂಪಾದಿಸೋಕ್ಕಂತೂ ಸಾಧ್ಯವೇ ಇಲ್ಲ ಅನ್ನೋದು crystal clear. ಅದು ಸಾಧ್ಯವೇ ಇಲ್ಲ ಅನ್ನುವ ಅರಿವು, ಸಾಧ್ಯವಾಗುವುದೇನೋ ಎನ್ನುವ ಕನಸು ಎರಡೂ ಸಮ್ಮಿಳಿತಗೊಂಡು – ಏನು ಮಾಡಬೇಕಿದೆ? ಏಕೆ ಮಾಡಬೇಕಿದೆ? ಎನ್ನುವ ಗೊಂದಲಗಳು ತಂತಾವೆ ನಿಯತ್ತಾಗೇ ಹುಟ್ಟಿಕೊಳ್ಳುತ್ತವೆ. ಈಗೊಂದರಿವಾಗಿದೆ – ಯಾವುದೋ ತನ್ನ ಹಳೆಯ ಕಥೆಯ ಸಾಲುಗಳು ಅವು. “ನಾನು ಇಲ್ಲಿ ಮಾಡ್ತಾ ಇರೋದು ಟೈಂ  ಪಾಸ್.. ಎಲ್ಲರೂ ಸಹ ಸಾಯೋವರೆಗೆ. ಹಾಗಾದಲ್ಲಿ ಇದೇ  ಏಕೆ? ಬೇರೆ  ಹೇಗೋ ಮಾಡಬೋದಲ್ಲ?” 

“ನಿನ್ನ ಸುತ್ತಲಿರುವವರಿಗಿಂತ ನಿನ್ನಲ್ಲೇನೋ ಕಲಾತ್ಮಕತೆ ತುಸು ಹೆಚ್ಚಿದೆ ಎನ್ನುವ ನಿನ್ನ ಅಂಧ ಅಹಂಕಾರವೋ ಬೋಮನ್” ಯಾವುದೋ ಅಶರೀರವಾಣಿ ಕೂಗುತ್ತದೆ – ಇವನ  ಮನಸ್ಸಿನೊಳಗೆಯೇ! “ಇಲ್ಲದಿದ್ದಲ್ಲಿ ಯಾರಾದರೂ ನೀವು Mathematicsನ ಏಕೆ  ಮಾಡುತ್ತೀರಿ?’ ಎಂದು ಕೇಳಿದಾಗ ನಿನ್ನ ಮನಸ್ಸಿನೊಳಗೆ  (ಹೊರಗೆ ಬೇರೊಂದು – ಸತ್ಯಾನ್ವೇಷಣೆಗಾಗಿ) ‘I want to be a top class professional Mathematician’ ಎನ್ನುವ ನಿಯತ್ತಾದ ಉತ್ತರ ಹುಟ್ಟುತ್ತಿರಲಿಲ್ಲ. ನನಗೆಲ್ಲಾ ಗೊತ್ತಾಗಿದ್ದು ಹಾಗೆಯೇ. ನೀನು ಒಳ್ಳೆಯವ – ಮನಸ್ಸಿನೊಳಗೆ.”

ಮನಸ್ಸು ಸುಖಾಸುಮ್ಮನೆ ಹೇಳಿಕೊಳ್ಳುತ್ತಿತ್ತು ತಂತಾನೆ – “ಸಾಗರದಲ್ಲೊಂದು ನೀರ ಹನಿಯಲ್ಲಿಯ ಕಣದಷ್ಟೂ ನಿನಗೇನು ತಿಳಿದಿಲ್ಲ. ತಿಳಿದಿರುವುದರಲ್ಲೇ ಏನೂ ಸಾಧಿಸಲಸಾಧ್ಯ. “ಈಗ ತಿಳಿದುಕೊಳ್ಳಬೇಕು” ಯಾಕೆ? ಓಹ್ಹೋ! ಅದೇ professional ಜೀವನಕ್ಕಾಗಿ?  ತಿಳಿದುಕೊಳ್ಳೋವೇಳೆಗೆ ಜಗತ್ತು ಸಾಕಷ್ಟು ದೂರ  ಓಡಿಹೋಗಿರುತ್ತದೆ. ನೀನೂ ಓಡುವೆ ಅದರ  ಹಿಂದೆಯೇ. ಎಲ್ಲಿಗೆ? ಎಲ್ಲಿಯವರೆಗೆ? ಗೊತ್ತಿಲ್ಲ. ಆಹ್ಹಾ! ಓಹ್ಹೋ! ಗೊತ್ತಿಲ್ಲ. ಅದೇ ... ಅದೇ.. ಗೊತ್ತಿಲ್ಲ. ಸುಮ್ಮನೆ ಓಡು. ಟೈಂ ಪಾಸ್... ಓಡು. ಆದರೆ ಜಗತ್ತಿನ ಹಿಂದಲ್ಲ. ಎಲ್ಲಿಗೋ ತಿಳಿಯದು. ನಾ ಹೇಳುವೆಡೆಗೆ ಓಡು. ಜಗತ್ತಿನ ಹಿಂದೆ ಓಡೆಂದು ಇನ್ನೆಂದೂ ಹೇಳುವುದಿಲ್ಲ. ನಿಜ! ನನ್ನ ನಂಬಬೋದು ನೀನು”

ಎಲ್ಲರಿಗೂ ಇರೋದು ಒಂದೇ ಮನಸ್ಸೇ? ಹಾಗಾದರೆ ಇದ್ಯಾವ ಮನಸ್ಸು ಆತನ  ಕೈಯಲ್ಲಿ ಎರಡು ಮೂರು Paperಗಳನ್ನ Publish ಮಾಡಿಸಿ ಬೀಗಿದ್ದು? ಈಗ ಏನೂ  ಮಾಡಲಿಕ್ಕಾಗದೆ ಸುಮ್ಮನೆ ಯೋಚಿಸುತ್ತಾ ಕುಳಿತಾಗ, ಯೋಚಿಸಿದ್ಯಾವುದೂ “ಫಲ ನೀಡದೆ” ಬೇಸರ ಉಂಟಾದಾಗ, ಆ ಇನ್ನೊಂದು ಮನಸ್ಸಿನ ಹುಚ್ಚು ಕಿರುಚಾಟ – ಬೇಡ  ಬಿಟ್ಟುಬಿಡು ಈ ರೇಸ್ - ಕೇಳದೆ ಇರೋವಷ್ಟು ಮೆದುಳು ಕಿವುಡಾಗಿದ್ದಾದರೂ ಹೇಗೆ? ಈ ರೇಸ್ ನ ಹುಚ್ಚು ಮನಕ್ಕೆ ಹತ್ತಿದ್ದಕ್ಕೆ ಕಾರಣಗಳು ಹಲವಾರು! ಪ್ರಬಲವಾಗಿ ಒಂದು – ತಾನೇನು ಕಡಿಮೆಯಿಲ್ಲೆಂದು ತೋರಿಸಿಕೊಳ್ಳೋದು! ಇದನ್ನ ಮುಚ್ಚಿಡೋಕ್ಕೆ ಒಂದು ಮುಖವಾಡ – ‘Contribution to the field of work ‘ ಅನ್ನೋ ಸುಳ್ಳೇ ಸುಳ್ಳು. ಹಾಗಂತ ಈತನೇನು ಪ್ರಬಲ ರೇಸ್ ಗಾರನಲ್ಲ. ಈತನಿಗಿಂತ ರೇಸ್ ಆಡಲೆಂದೇ ಇದ್ದೋರು, ರೇಸ್ ನಲ್ಲಿ ಬಹಳ  ಮುಂದೆ ಇವನಿಗೆ ಕಾಣುವುದಕ್ಕೂ ಸಿಗದ ದೂರಕ್ಕೆ ಹೋಗಿಬಿಟ್ಟಿದ್ದಾರೆ. ಈತ ಈಗಷ್ಟೇ ಆರಂಭಿಸಿದ್ದು.

ಇದ್ದಕ್ಕಿದ್ದ ಹಾಗೆ  ನಿಂತು ಬಿಟ್ಟ, ಈಗಷ್ಟೆ ಮಳೆ ಹಾಯ್ದು ಒದ್ದೆಯಾದ ಮಣ್ಣ ಹಾದಿಯನ್ನ ನೋಡುತ್ತಾ! ಸಂಜೆಯ ಕತ್ತಲು ಆವರಿಸುತ್ತಾ ಇದ್ದ  ಸಮಯ. ಮಣ್ಣ  ವಾಸನೆ  ರಪ್  ಎಂದು ಮೂಗಿಗೆ  ಬಡಿದ  ಸಮಯ. ಗಿಡದ ಎಲೆಳಗಳಿಂದ  ಟಪ್ ಟಪ್  ಎಂದು ಹನಿಗಳು ತೊಟ್ಟಿಕ್ಕಿ ಸದ್ದು ಮಾಡುತ್ತಿದ್ದ  ಸಮಯ. ಏನೇನೋ ನೆನಪುಗಳು, ವಿಚಿತ್ರವಾದ ಸಮ್ಮಿಳಿತದೊಂದಿಗೆ ಇದು ಹೀಗೆಯೇ, ಹೀಗೆಯೇ ಅನಂತವಾಗಿ ಇದ್ದು ಹೋಗಲಿ ಈ ಸಮಯ ಎಂದೆನಿಸೋಕ್ಕೆ ಶುರುವಾಯಿತು. ಎಂದೋ ಇವೆಲ್ಲವನ್ನೂ ಯಾವುದೇ ಯೋಚನೆ, ಚಿಂತೆಯಿಲ್ಲದೆಯೇ ಅನುಭವಿಸಿ ಮನಃತೃಪ್ತಿ ಪಟ್ಟುಕೊಂಡಿದ್ದ ಭಾವ. ನನಗೇನು ಬೇಕಿದೆ? ನನಗೆ ನಿಜವಾಗಿಯೂ ಏನು  ಬೇಕಿದೆ? ಮುಕ್ತಿ’, ಮುಕ್ತಿ ಮುಕ್ತಿ’… ಪಟ ಪಟ ಹನಿಗಳ ರೀತಿಯಲ್ಲೆಯೇ ಮನಸ್ಸಲ್ಲಿ ಪಟ ಪಟ ವೆಂದು ಮುಕ್ತಿ ಹೊಡಿಯಲಾರಂಬಿಸಿತು. ನನ್ನ ಡೋಂಗಿ ಅಸ್ಮಿತೆಯ ನಿರ್ಮಾಣದಿಂದ ಮುಕ್ತಿ. ಅದರಿಂದ ಬಿಡಿಸಿಕೊಂಡು ಈ ಜಗತ್ತನ್ನ ಅನುಭವಿಸಬೇಕು! ನಾನೇ ಇದು? ನಿಜವಾಗಿಯೂ ನಾನಲ್ಲ. ಇದು ನನ್ನ ಡೋಂಗಿ ರೂಪ!

ಹುಯ್ಯಿತ್ತಿದ್ದ ಮಳೆಯಡಿಯಲ್ಲಿ ನೆನೆಯುತ್ತಾ, ದೂರದಲ್ಲೆಲ್ಲೋ ಉರಿಯುತ್ತಿದ್ದ ಸ್ಟ್ರೀಟ್ ಲೈಟ್ ನೋಡುತ್ತಾ ನಿಂತಿದ್ದ ಈತನಿಗೆ “ಈಗ ಹೇಳು ಏನು  ಮಾಡುವೆ. ಏತಕ್ಕಾಗಿ ಮಾಡುವೆ?” ಯಾರೋ ಕೇಳಿದ್ದರೆ ಅವನ ಉತ್ತರ ಇದೇ – ಟೈಂ ಪಾಸ್.. ನನ್ನ ಅಸ್ಮಿತೆಯ ನಿರ್ಮಾಣದಿಂದ ದೂರ ಹೋಗಿ. ಹೇಗೆ?  ಇನ್ಹೇಗೆ? ಬರಿಯ Mathematics ಮಾಡುತ್ತಲೇ, ಸತ್ಯ ಹುಡುಕುತ್ತಲೇ !”

ಹೆಂಡತಿಯ ಕಿವಿಯಲ್ಲಿ ಉಸುರಿದ – ಐ ಆಮ್ ಸಾರಿ. ಐ ಆಮ್ ಔಟ್ ಆಫ್ ದ ರೇಸ್. ಪಿ. ಎಚ್ಡಿ ಬಿಡಬೇಕೆಂದಿದ್ದೇನೆ. When I am ashamed of calling myself a Master of Mathematics, it is the failure of the system awarding me Ph.D. I know my limitations and extents of my thinking capability”.

 

 

No comments:

Post a Comment