Friday, September 7, 2018

ಭಾವ-ಭ್ರಮೆ

 


“ನಾನೊಂದು ಸುಂದರವಾದ ಭ್ರಮಾಲೋಕವನ್ನ ಸೃಷ್ಟಿಸ್ಲಿಕ್ಕೆ ಹೊರಟಿದ್ದೀನಿ. ಹೋಯ್! ನಿಮ್ಮೆಲ್ಲರ ಸಹಕಾರ ಇಲ್ಲದಿದ್ರೆ ಹೇಗೆ?” ಭಲೇ! ಎಷ್ಟು ಚೆಂದ ವಾಕ್ಯಮಾಲೆಯೊಂದು ಕಾದಂಬರಿಯ ಆರಂಭಕ್ಕೆ ಅರ್ಪಣೆಯಾಯ್ತು ಅಂತ ಹೆಮ್ಮೆಯ ಭಾವವೊಂದು ಮೂಡಿತು. ಬೆನ್ನನ್ನ ನೇರ ಮಾಡಿ ಕಿಟಕಿಯ ಹೊರಗೆ ನನ್ನ ರೂಮಿನ ನೇರಕ್ಕೆ ತಲೆ ಎತ್ತಿದ್ದ ಬೀದಿ ದೀಪದ ಕಂಬವೊಂದರ ಕಡೆಗೆ ದೃಷ್ಟಿ ನೆಟ್ಟಿದೆ. ದೀಪದ ಕೇಸ್ ನ ಒಳಗೆ ಕಪ್ಪು ಕಪ್ಪಗಿನ ರಾಶಿಯೊಂದು ಸ್ಪಷ್ಟವಾಗಿ ಕಾಣುತ್ತಿತ್ತು. ಹಲವಾರು ಕಪ್ಪು ಹುಳಗಳು ದೀಪದ ಸುತ್ತಲೇ ಅದಕ್ಕೆ ಮುತ್ತಿಕ್ಕಲು ಹಾರುತ್ತಿದ್ದವು.

Saturday, March 31, 2018

 

ಎರಡು ಮೂರು ಬಸ್ ಗಳು ಬಂದು ನಿಂತಿದ್ದರೂ ಎಲ್ಲೂ ಖಾಲಿಯಿಲ್ಲ. ಅವುಗಳಲ್ಲೆಲ್ಲಾ ಹಿಡಿಸೋ ಅಷ್ಟು ಜನರ ಹಿಂಡೇ ಅಲ್ಲಿತ್ತು. ಶನಿವಾರವೇನಾದ್ರು ಗವರ್ನಮೆಂಟ್ ಹಾಲಿಡೇ ಬಂದ್ರೆ, ಶುಕ್ರವಾರದ ಸಂಜೆಯ ಬಸ್ ಗಳಲ್ಲಿ ಸೀಟ್ ಪಡಕೋಳೋದು ಒಂದು ಸಾಹಸಾನೆ. ಅಷ್ಟೆಲ್ಲಾ ಜನಜಾತ್ರೆ ಇದ್ದರೂ ಕೂರೋ ಬೆಂಚುಗಳು ಮಾತ್ರ ತುಂಬೋದೇ ಇಲ್ಲ. ಹಿಂದಿನ ಮೂರ್ನಾಲ್ಕು ಬಸ್ ಗಳು ನಿಂತಿದ್ದ ಜಾಗವನ್ನ ಅಂದಾಜಿಸಿ, ಮುಂದಿನ ಬಸ್ ಎಲ್ಲಿ ನಿಲ್ಬೋದು ಅನ್ನೋದನ್ನ ಅವ್ರವ್ರೆ ಲೆಕ್ಕ ಹಾಕಿಕೊಳ್ತ ಆ ಜಾಗಗಳನ್ನ ರಿಸರ್ವ್ ಮಾಡಿಕೊಂಡು ನಿಂತುಬಿಡ್ತಿದ್ರು. ಬೆಂಚುಗಳ ಆಹ್ವಾನವನ್ನ ಗುರುತಿಸ್ತಿದ್ದದ್ದು ಎಲ್ಲೋ ಕೆಲವು ವಯಸ್ಸಾದವ್ರು, ಕೆಲವು ಹೆಂಗಸ್ರು ಹಾಗೂ ಶುದ್ಧ ಸೋಂಬೇರಿಗಳು. 

Thursday, April 20, 2017

ಶೀರ್ಷಿಕೆಯಿಲ್ಲದ್ದು - ೧


ಹೀಗೆ ಆಲೋಚಿಸುತ್ತಾ ನನ್ನಲ್ಲೇ ಉಂಟಾದ ದ್ವಂದ್ವಗಳಗಳ ನಡುವಿನ ಹೋರಾಟವನ್ನ ಮುಕ್ತವಾಗಿ ಇಟ್ಟಿದ್ದೇನೆ. ಇದರಲ್ಲಿ ಯಾವುದೇ ಪೂರ್ವಾಗ್ರಹವಿಲ್ಲ, ಹಾಗೂ ಯಾರನ್ನೂ ಯಾವುದನ್ನೂ ದೂಷಿಸುವ ಉದ್ದೇಶವೂ ಇಲ್ಲ. ನನ್ನೊಳಗೇ ಉಂಟಾದ ದ್ವಂದದ ಹೋರಾಟದ ಫಲ ಇದು. ಒಳಗಿಡಲು ಸಾಧ್ಯವಿಲ್ಲದೆ ಹೊರಗೆ ತಂದಿರುವ, ಎಲ್ಲವೂ ಸರಿಯೆ, ಎಲ್ಲವೂ ತಪ್ಪೆ ಎನ್ನುವ ದ್ವಂದ್ವದ ಫಲವಿದು. ಇದನ್ನು ಬರೆಯುವಾಗಲೂ ನಾನು ಯಾವುದಕ್ಕೂ ಯಾವ ಸಮರ್ಥನೆಯನ್ನು ಕೊಡಲಾಗದ ಮಂಪರಿನ ಸ್ಥಿತಿಯಲ್ಲಿದ್ದಂತೆಯೇ ಭಾಸವಾಗುತ್ತಿದ್ದದ್ದು ಅಥವಾ ಅಷ್ಟು ಆಲೋಚಿಸುವಷ್ಟು ಶಕ್ತಿ ನನ್ನಲ್ಲಿಲ್ಲದಿದ್ದಿರಬಹುದು. ಬರೆದ ಮೇಲೆ ಇದನ್ನು ಓದುವ ತಾಳ್ಮೆ ಒಂದಷ್ಟೂ ಉಳಿದಿರಲಿಲ್ಲ. ಕೆಲವೊಂದು ದ್ದಂದ್ವ ಆಳೋಚನೆಗಳೇ ಹಾಗೇನೋ,  ಓದಿದಷ್ಟೂ ಅಸ್ಪಷ್ಟವಾಗುತ್ತಾ ಹೋಗೋದು. ಈ ಎಲ್ಲಾ ಸ್ವಗತ ಒಬ್ಬ ವ್ಯಕ್ತಿಯಲ್ಲಿಯೇ ಆತನ ಆಲೋಚನೆಗಳನ್ನೇ ಆತ ಧಿಕ್ಕರಿಸೋದು, ಅಥವಾ ವಾದಗಳಲ್ಲಿ ತನ್ನ ಅಭಿಪ್ರಾಯಗಳ ದಿಕ್ಕನ್ನೇ ಬದಲಿಸಿಕೊಳ್ಳೋದು, ಆ ಕ್ಷಣಕ್ಕೆ ಎದುರಿನವನ ವಾದವನ್ನ ಒಪ್ಪಿ, ಮುಂದೆಲ್ಲೋ ಅದನ್ನೇ ವಿರೋಧಿಸೋದು, ಈ ರೀತಿಯಾದವುಗಳನ್ನು ಕಾಣಬೋದೇನೋ!  ಮುಕ್ತವಾದ ಭಾವನೆಗಳಿವು. ಈ ಮುನ್ನುಡಿಯೂ ಸಹ ಒಂದು ವಿಪರ್ಯಾಸವೆಂದೇ ತೋರುತ್ತದೆ ಈ ಕಥಾವಸ್ತುವಿಗೆ.]

ಶೀರ್ಷಿಕೆಯಿಲ್ಲದ್ದು -2 
ಗುಡ್ ಗುಡ್ ಗುಡಕ್... ಗುಡ್ ಗುಡ್ ಗುಡಕ್.. ಆಗಸ ಕೂಗಿತು. ಆಟದ ಆರಂಭಕ್ಕೆ ಸೂಚನೆ ಸಿಕ್ಕಿತೆಂದು ಗಾಳಿಯು ಸುಂಯ್..... ಎಂದು ಎದ್ದಿತು. ಗಾಳಿಯ ಸೆಳೆತಕ್ಕೆ ಸಿಕ್ಕು ಮರಗಳು ಆಚೀಚೆಗೆ ಓಲಾಡಿದವು. ರೋಡಿನ ಕಸ, ಧೂಳುಗಳೆಲ್ಲ ಗಾಳಿಯ ರಭಸಕ್ಕೆ ಎದ್ದು ಹೋಗ ಬರುವವರನ್ನೆಲ್ಲಾ ಪ್ರಕೃತಿಯ ಆ ಆಟಕ್ಕೆ ಅಡಚಣೆಯೆಂದು ಬಡಿದು ಬದಿಗೆ ಓಡಿಸಿದವು. ಸುಂಟರವೋ ಏನೋ ಎನ್ನುವಷ್ಟು ರೋಷಮಯದಿಂದ ಮಣ್ಣು, ಕಸಗಳು ಭುರ್ರೆಂದು ಎದ್ದು ಮುಂದೊಂದು ಲೋಕವಿದೆ ಎನ್ನುವುದನ್ನೆ ಮುಚ್ಚಿಟ್ಟು ತಮ್ಮ ಪ್ರತಾಪವನ್ನು ನೆನಪಿಸಿ ಮೆರೆದವು. ಕೆಲವರ ಹಾಕಿದ ಸೀರೆಯ ಸೆರಗನ್ನು, ಕೆಲವರ ಮೇಲ್ಬಟ್ಟೆಯ ತುಂಡನ್ನು, ಕೆಲವರ ಪಂಚೆಯನ್ನು ಆಪೋಷನ ತೆಗೆದುಕೊಳ್ಳಲು ಯತ್ನಿಸಿದವು. ಇಷ್ಟಿದ್ದರು ಆ ಕಸ ಧೂಳುಗಳಿಗೆ ಆಗಸದ ರೆಪ್ಪೆಯನ್ನು ತಾಕಿ ಕಣ್ಣೊಳಗಿಳಿದು ನೀರಿಳಿಸಲು ಆಗಲೇ ಇಲ್ಲ. ಬರೆ ವ್ಯರ್ಥ ಪ್ರತಾಪವನ್ನು ತೋರುತ್ತಾ ಜನರ 

Thursday, August 11, 2016

ಇವಳೆ

ಇವಳೆ,


'ಸದಾ ಕಾಲ ತಬ್ಬುವಂತೆ ಮೇಲೆ ಬಾಗಿಯೂ
ಮಣ್ಣ ಮುತ್ತು ದೊರಕಿತೇನು ನೀಲಿ ಬಾನಿಗೆ....'

ಎಂದೂ ಸಹ ನನ್ನದೊಂದು ಅಪರಿಪೂರ್ಣ, ಅಶಕ್ತ ಬರವಣಿಗೆ. ಪದಗಳು ತಿಳಿದಿಲ್ಲೆಂದಲ್ಲ. ಪದಗಳನ್ನ ರಸವತ್ತಾಗಿ ಜೋಡಿಸುವ ಕಲೆ ಸಿದ್ದಿಸದೇನೋ ಈ ಜನ್ಮಕ್ಕೆ. ನಿನ್ನಂದವನ್ನ ಹೊಗಳಲಿಕ್ಕಂತಲೇ ಅಲ್ಲ ಈ ಸಿದ್ದಿ. ಹೊಗಳಬೇಕೆಂದಿದೆ, ನಿಜ. ಆದರೆ ಹೊಗಳಿ ಹೊಗಳಿ ನಿನ್ನನ್ನು ಎತ್ತಲೋ ಏರಿಸಿ ನಿನ್ನ ಮನದೊಳಗಿಳಿಯಬೇಕೆನ್ನುವ ಬಯಕೆಯೇನೂ ಇಲ್ಲ. ಇದ್ದದ್ದನ್ನು ಇದ್ದಹಾಗೆ ಹೇಳಲು ಯಾವ ಪದಸಮುಚ್ಚಯಗಳು ಬೇಡವೇನೋ. ಅದು ಹೊಗಳಿಕೆಯೂ ಅಲ್ಲೇನೋ! ನೀ ಚೆಂದವಾಗಿದ್ದಿ ಎನ್ನುವುದನ್ನು ಬಹಳ ರಸವತ್ತಾಗಿ ಹಲವಾರು ಉಪಮೆ, ರೂಪಕಗಳಿಂದ ವರ್ಣಿಸಿ ಹೇಳುವುದು ನಿನ್ನೆಡೆಗಿನ ಒಲುಮೆ-ನಲುಮೆಗಳ ಹೊರರೂಪಕಗಳಷ್ಟೇ! ಅವುಗಳ ಬದಲಾಗಿ 'ನೀ ಚೆಂದವಿದ್ದೀ' ಎಂದಷ್ಟೇ ಎನಲು ಭಾವರಸಗಳೆಲ್ಲವನ್ನೂ ಕಳಕೊಂಡು ಬಡಕಲು ಅಸ್ಥಿಪಂಜರದಹಾಗೆ ಕಾಣುವ ರಸಹೀನವೆಂದೆಂಥೆನಿಸುವ ಆ ಎರಡು ಪದಗಳೂ  ಒಲುಮೆ-ನಲುಮೆಗಳ ಹೊರರೂಪಕಗಳೇ! ನನ್ನ ಬರವಣಿಗೆಯ ಬಗೆಗಿನ ತಪನವಿರುವುದೆಲ್ಲಾ ನಿನ್ನೆಡೆಗಿನ ಭಾವನೆಗಳಿಗೆ ತದ್ರೂಪವನ್ನೇ ಸೃಷ್ಟಿಸಲಾಗುತ್ತಿಲ್ಲವೆನ್ನುವುದರಲ್ಲಷ್ಟೇ! ನನ್ನ ನಡವಳಿಕೆ, ನನ್ನ ಮಾತುಗಳು ನನ್ನೊಳಗಿನ ಆ ಭಾವನೆಗಳ ಹೊರರೂಪಕಗಳಂತೆ ಕಾಣಿಸದಾಗಿವೆಯೇ ಎನ್ನುವ ಬೇಸರವಷ್ಟೇ! ನನ್ನ ಮಾತುಗಳೆಲ್ಲವೂ ಒಬ್ಬ ಹುಡುಗ ಒಂದು ಹುಡುಗಿಯನ್ನ ಮೆಚ್ಚಿಸಲಿಕ್ಕೆಂದೇ ಆಡುವಂಥಹ ಚಾಲ್ತಿಯಲ್ಲಿರುವ ಪದ್ದತಿಯೊಂದರ ಅನುಕರಣೆಯಂತೆ ತೋರುವುದೇ ಎನ್ನುವ ಗುಮಾನಿ! ನಾನೆಂದೂ ನಿನ್ನನ್ನು ಮೆಚ್ಚಿಸುವ ಸಲುವಾಗಿ ನಡೆಯಬೇಕೆಂದು ಭಾವಿಸಿದ್ದಿಲ್ಲ. ಅದರಲ್ಲಿ ನನಗೆ ಅಶ್ರದ್ದೇಯೇ, ಅಪನಂಬಿಕೆಯೆ ಹೆಚ್ಚು. ಮಿಗಿಲಾಗಿ ಅದು ನಾಟಕೀಯವೂ ಹೌದು. ಮನಸಿನ ಭಾವನೆಗಳನ್ನು ಯಥಾವತ್ತಾಗಿ ನಿನ್ನ ಮುಂದೆ ಎತ್ತಿಡುವುದಕ್ಕಿಂತ ಮಿಗಿಲಾದ ಅಭಿಮಾನದ, ಒಲುಮೆಯ ಮಾತುಗಳು ಅನವಶ್ಯಕ ಹಾಗೂ ಅಪ್ರಯೋಜಕ! 

Sunday, February 21, 2016

ಪ್ರೇತ!

ಅದೊಂದು ಭವ್ಯ ಬಂಗಲೆ. ಒಳಗೆ ವೈಭವವೋ ವೈಭವ. ಅದೆಷ್ಟು ವೈಭವವೆಂದರೆ, ಒಳಗೆ ಹೋದವನಿಗೆ ಒಳಗಿದ್ದರೆ ಕೊಲ್ಲುತ್ತೇನೆ ಎಂದು ಬೆದರಿಸಿದರೂ ಹೊರಗೆ ಹೋಗದಷ್ಟು ಮನಸ್ಸನ್ನು ಆಕ್ರಮಿಸಿ, ಆಳುವಂಥ ವೈಭವ. ಒಳಗೆ ಅದೆಂಥಾ ಸೋಫ. ಆಹಾ ಅದರ ಮೇಲೆ ಕೂತವನಿಗೆ ರಾಜನೆನ್ನುವಷ್ಟು ಭಾವನೆ ಮೂಡುತ್ತದೆ. ಆ ಕನ್ನಡಿಯೋ, ಅದರಲ್ಲಿ ತೋರುವ ಪ್ರತಿಬಿಂಬವೆಲ್ಲಾ ರಾಜನ ಅಥವ  ರಾಣಿಯ ಪೋಷಾಕು ತೊಟ್ಟದ್ದೇ ಆಗಿರುತ್ತದೆ. ನಿಮಗೆ ಕುಡಿಯಲು ಬಂಗಾರದ ಬಟ್ಟಲಲ್ಲಿ

Saturday, February 20, 2016

ಭ್ರಮೆ


1
ಆಕೆಯೊಬ್ಬಳು ಸುಂದರವಾದ ಹೆಂಗಸು. ಸಹಸ್ರಾರು ಜನ ಆಕೆಯನ್ನು ಇಷ್ಟಪಡುತ್ತಿದ್ದಾರೆ. ಅದರಲ್ಲೂ ಒಬ್ಬನಂತೂ ಆಕೆಗೋಸ್ಕರ ತನ್ನ ಪ್ರಾಣವನ್ನೂ ಅರ್ಪಿಸಲು ತಯಾರಿರುವಷ್ಟು ಆಕೆಯನ್ನು ಪ್ರೀತಿಸುತ್ತಿದ್ದಾನೆ! ಆಕೆಗಾದರೋ ಇವೆಲ್ಲಾ ಸಾಮಾನ್ಯ. ಮಾಮೂಲು. ಆಕೆಗೆ ಆತನ ಭಾವನೆಗೆ ಸ್ಪಂದಿಸಲು ಯಾವ ಅವಶ್ಯಕತೆಯೂ ಇಲ್ಲ. ಈತನೋ ಅದನ್ನರಿಯದ ಮರುಳ.  ಆಕೆಯ ಉತ್ತರಕ್ಕಾಗಿಯೇ ಕಾಯುತ್ತಿದ್ದಾನೆ. ಆಕೆ ತನಗೆ ಹಿಡಿಸಿದ ಮತ್ತೋರ್ವನನ್ನು ವರಿಸಿದ್ದಾಳೆ.